Site icon Vistara News

Chandrayaana 3 : ಹಿರಿಯ ಶ್ರೀಗಳಿಂದ ಶುಭ ಹಾರೈಕೆ, ರಾಷ್ಟ್ರ ಧ್ವಜ ಹಿಡಿದುಕೊಂಡೇ ವೇದ ಘೋಷ ನಡೆಸಿದ ವಟುಗಳು

Chandrayaan 3 senior swameeji

ಬೆಂಗಳೂರು: ಚಂದ್ರಯಾನ 3 (Chandrayaan 3) ಯಶಸ್ಸಿಗೆ ಹಲವಾರು ಹಿರಿಯ ಸ್ವಾಮೀಜಿಗಳು (Senior swameejis bless for Chandrayaan) ಶುಭ ಕೋರಿದ್ದಾರೆ. ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು (Sri Subudhendra theertha swameeji), ಶ್ರೀಶೈಲ‌ ಪೀಠಾಧಿಪತಿಗಳು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು (Shreeshaila swameeji), ಬಾಳೆಹೊನ್ನೂರು ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು (Shree Rambhapuri Jagadguru) ಚಂದ್ರಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ನಡುವೆ, ಹುಕ್ಕೇರಿ ಮಠದಲ್ಲಿ ವಟುಗಳು ಧ್ವಜ ಹಿಡಿದುಕೊಂಡೇ ವೇದಘೋಷ ಮೊಳಗಿಸಿದರು.

ವಿಜ್ಞಾನಿಗಳಿಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ

ರಾಯಚೂರು: ಚಂದ್ರಯಾನ 3 ಯಶಸ್ಸು ಸಾಧಿಸಲಿ ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಹಾರೈಸಿದರು. ʻʻನಮ್ಮ ಭಾರತದ ವಿಜ್ಞಾನಿಗಳು ಅದೆಷ್ಟೋ ಪರಿಶೋಧನೆ ಮಾಡೋ ಮೂಲಕ ಮೈಲುಗಲ್ಲು ಸಾಧಿಸಿದ್ದಾರೆ. ಇಂಥ ಶುಭ ಸಂದರ್ಭದಲ್ಲಿ ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸಿ, ಆಶಿರ್ವದಿಸುತ್ತಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

ʻʻವೇದ, ಇತಿಹಾಸ, ಪುರಾಣಗಳ ಕಾಲದಿಂದ ವಿಜ್ಞಾನ ಭರಿತವಾದ ದೇಶ ನಮ್ಮದು. ನಮ್ಮ ದೇಶ ಇನ್ನೂ ಹೆಚ್ಚಿನ ಸಂಶೋಧನೆ ಮಾಡುವ ಮೂಲಕ ವಿಶ್ವದಲ್ಲೇ ಅಗ್ರಸ್ಥಾನ ಪಡೆಯಲಿ. ಇಂದು ವಿಕ್ರಮ್ ಲ್ಯಾಂಡ್ ಆಗೋದಕ್ಕೆ ಶುಭ ಕೋರುತ್ತಿದ್ದೇನೆʼʼ ಎಂದರು ಶ್ರೀಗಳು.

ಭಾರತ ಸರ್ಕಾರವನ್ನು, ದೇಶದ ಪ್ರಧಾನ ಮಂತ್ರಿಗಳನ್ನೂ ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಹೇಳಿದ ಅವರು, ಇಂದು ಚಂದ್ರಯಾನ ಯಶಸ್ಸು ಕೋರಿ ಮೂಲ ರಾಮದೇವರು, ರಾಘವೇಂದ್ರ ಶ್ರೀಗಳಿಗೆ ಪೂಜೆ ನಡೆಸಲಾಗಿದೆ ಎಂದರು.

ಚಂದ್ರಯಾನ-3 ಗೆ ಶುಭಹಾರೈಸಿದ ರಂಭಾಪುರಿ ಶ್ರೀಗಳು

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಚಂದ್ರಯಾನ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ʻʻಇಂದು ಇಡೀ ಜಗತ್ತೆ ಭಾರತದತ್ತ ಮುಖ ಮಾಡಿದೆ. ನಮ್ಮ ವಿಜ್ಞಾನಿಗಳ ಈ ಕೆಲಸ ವಿಶ್ವಕ್ಕೆ ಮಾದರಿಯಾಗಲಿ. ವಿಜ್ಞಾನಿಗಳಿಗೆ ಬೆನ್ನುಲುಬಾಗಿ ನಿಂತ ಪ್ರಧಾನಿ ಮೋದಿಗೂ ಅಭಿನಂದನೆಗಳುʼʼ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ʻʻಸಾವಿರಾರು ವಿಜ್ಞಾನಿಗಳ ತಂಡದಲ್ಲಿ ಬಾಳೆಹೊನ್ನೂರು ಮಹಿಳೆಯೂ ಇರುವುದು ನಮ್ಮ ಹೆಮ್ಮೆ. ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಕೇಶವಮೂರ್ತಿ-ಮಂಗಳ ಪುತ್ರಿ ಡಾ.ಕೆ.ನಂದಿನಿ ಅವರೂ ಇರುವುದು ನಮಗೆ ಹೆಮ್ಮೆʼʼ ಎಂದು ಸ್ವಾಮೀಜಿ ಹೇಳಿದರು. ಚಂದ್ರಯಾನ-3 ಲ್ಯಾಂಡಿಂಗ್ ಸುವರ್ಣ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳುತ್ತೇನೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು.

ಇಸ್ರೊ, ವಿಜ್ಞಾನಿಗಳಿಗೆ ಶುಭ ಹಾರೈಸಿದ ಶ್ರೀಶೈಲ‌ ಪೀಠಾಧಿಪತಿಗಳು

ಬೆಳಗಾವಿ: ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ವಿಜ್ಞಾನಿಗಳಿಗೆ 1008 ಶ್ರೀಶೈಲ‌ ಪೀಠಾಧಿಪತಿಗಳು ಡಾ. ಚನ್ನಸಿದ್ದರಾಮ ಪಂಡೀತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಸಿದ್ದಾರೆ.

ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಪಂಡಿತಾರಾಧ್ಯರಿಗೆ ವಿಶೇಷ ಪೂಜೆ ಸಲ್ಲಿಸಿದ ಸ್ವಾಮೀಜಿಗಳು ಕಳೆದ ಪ್ರಯತ್ನ ವಿಫಲವಾಗಿತ್ತು. ಈ ಬಾರಿ ಚಂದ್ರಯಾನ 3 ದೇವರ ಕೃಪಾಶೀರ್ವಾದಿಂದ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ : Chandrayaan 3 : ಚಂದ್ರಯಾನ ಯಶಸ್ಸು ಕೋರಿ ಮುಸ್ಲಿಮರಿಂದ ದರ್ಗಾದಲ್ಲಿ ಪ್ರಾರ್ಥನೆ, ಭಾರತ್‌ ಮಾತಾ ಕಿ ಜೈ ಘೋಷಣೆ

ಹುಕ್ಕೇರಿ ಹಿರೇಮಠದಲ್ಲಿ ರುದ್ರ, ಗಣ ಹೋಮ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಿರೇಮಠದ ಯಾಗ ಶಾಲೆಯಲ್ಲಿ ರುದ್ರ ಮತ್ತು ಗಣ ಹೋಮ ಆಯೋಜನೆ ಮಾಡಲಾಗಿತ್ತು. ಹಿರೇಮಠದ 108 ವೇದ ವಟುಗಳಿಂದ ಚಂದ್ರಯಾನ ಯಶಸ್ವಿಗಾಗಿ ಯಾಗ ನಡೆಯಿತು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯಾಗ ನಡೆದಿದ್ದು, ವೇದಗುರುಗಳಾದ ಉದಯ ಶಾಸ್ತ್ರೀಗಳ ನೇತೃತ್ವದಲ್ಲಿ ಹೋಮ ನಡೆಯಿತು.

ಚಂದ್ರಯಾನ ಯಶಸ್ಸಿಗೆ ಹೋಮ ಮಾಡುತ್ತಿರುವ ವೇದ ವಟುಗಳು ಮಂತ್ರಘೋಷ ಮೊಳಗಿಸಿದರು ಮತ್ತು ಭಾರತ ದೇಶದ ಧ್ವಜ‌ ಹಿಡಿದೇ ಮಂತ್ರ ಪಠಣ ಹಾಗೂ ಹೋಮ ಮಾಡಿದ್ದು ವಿಶೇಷವಾಗಿತ್ತು.

Exit mobile version