ಬೆಂಗಳೂರು: ನೂರಾರು ಕನಸು ಕಂಡಿದ್ದ ಆತ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಬಾಳ ಸಂಗಾತಿ ಕೇಳಿದ್ದಕ್ಕೆಲ್ಲ Yes ಎನ್ನುತ್ತಾ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಐಫೋನ್ ಎಲ್ಲವನ್ನೂ ಕೊಡಿಸಿದ್ದ. ಆದರೆ ಆ ಖತರ್ನಾಕ್ ಲೇಡಿ ಗಂಡನಿಗೆ ಕೈ ಕೊಟ್ಟು ಪರಾರಿ (Fraud Case) ಆಗಿದ್ದಾಳೆ. ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ವಂಚನೆ ಪ್ರಕರಣ ಸಂಬಂಧ ಪತಿರಾಯ ಠಾಣೆ ಮೆಟ್ಟಿಲೇರಿದ್ದಾರೆ. ಸಂತೋಷ್ ಮೋಸ ಹೋದ ಪತಿಯಾಗಿದ್ದಾರೆ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್‌ಗೆ ಫೇಸ್ ಬುಕ್ ಮೂಲಕ ಅಖಿಲಾ ಎಂಬಾಕೆ ಪರಿಚಯವಾಗಿದ್ದಳು. 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲೇ ಆಕೆಗೊಂದು ಕೆಲಸ ಕೂಡ ಕೊಡಿಸಿದ್ದರು. ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಂತೋಷ್ ಮತ್ತು ಅಖಿಲಾ ನಡುವೆ ಪ್ರೇಮಾಂಕುರವಾಗಿತ್ತು.
ಬಳಿಕ ಮದುವೆಯಾಗಲು ನಿರ್ಧರಿಸಿದ್ದ ಈ ಜೋಡಿ 2022ರ ನವೆಂಬರ್‌ನಲ್ಲಿ ದೇವಸ್ಥಾನವೊಂದರಲ್ಲಿ ಮದುವೆ ಆಗಿದ್ದರು. ಆದರೆ ಅಖಿಲಾಗೆ ಈ ಮೊದಲೇ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಆದರೂ ಈ ವಿಚಾರವನ್ನು ಮುಚ್ಚಿಟ್ಟು ಸಂತೋಷ್ ಜತೆ ಮದುವೆ ಆಗಿದ್ದಾಳೆ.
ಇದನ್ನೂ ಓದಿ: Bike Wheeling : ಮಗನ ವ್ಹೀಲಿಂಗ್ ಶೋಕಿಗೆ ಪಿಎಸ್‌ಐ ವರ್ಗಾವಣೆ; ವೃದ್ಧನ ಜೀವ ತೆಗೆದವನು ಸೆರೆ
ಲಕ್ಷಕ್ಕೆ ಡಿಮ್ಯಾಂಡ್
ವಂಚಕಿ ಅಖಿಲಾಳೊಂದಿಗೆ ಆಕೆ ಅಕ್ಕ ಅಶ್ವಿನಿ, ಭಾವ ಅರುಣ್ ಜಂಟಿ ಆಗಿದ್ದರು. ನಾದಿನಿ ಜತೆ ಮದುವೆ ಮಾಡಿಸಲು 5 ಲಕ್ಷ ರೂ. ಕೊಡಬೇಕೆಂದು ಸಂತೋಷ್ ಬಳಿ ಅರುಣ್ ಹಣ ಪೀಕಿದ್ದಾನೆ. ನಂತರ ಅಖಿಲಾಳ ಅಕ್ಕ ಮದುವೆ ಮಾಡಿಸಲು ಚಿನ್ನದ ಆಭರಣ ಮಾಡಿಸುವಂತೆ ಹೇಳಿದ್ದಾಳೆ. ಹೀಗಾಗಿ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನೂ ಖರೀದಿಸಿದ್ದಾರೆ.
ಇತ್ತ ಮದುವೆಗೆ ಮುಂಚೆ ಅಖಿಲಾ ಐಫೋನ್ ಕೊಡಿಸುವಂತೆ ಡಿಮ್ಯಾಂಡ್ ಮಾಡಿದ್ದಳು. ಮನ ಮೆಚ್ಚಿದ ಹುಡುಗಿ ಕೇಳಿದ್ದಳ ಎಂದು ಸಂತೋಷ್ ಸುಮಾರು 2.60 ಲಕ್ಷ ಮೌಲ್ಯದ ಐಫೋನ್ ಕೊಡಿಸಿದ್ದಾರೆ. ಇದಾದ ಬಳಿಕ ಅಕ್ಕ- ಭಾವ ಮುಂದೆ ನಿಂತು ಮದುವೆಯನ್ನು ಮಾಡಿದ್ದಾರೆ. ಆದರೆ ಮದುವೆಯಾಗಿ ಕೇವಲ ಮೂರು ತಿಂಗಳಷ್ಟೇ ಸಂಸಾರ ನಡೆದಿದೆ.
ಮದುವೆಯಾದರೂ ದೈಹಿಕ ಸಂಪರ್ಕಕ್ಕೆ ಅವಕಾಶ ಕೊಟ್ಟಿಲ್ಲ. ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿ, ಹಣ ಲೂಟಿ ಮಾಡಿ ಪರಾರಿ ಆಗಿದ್ದಾರೆ ಎಂದು ಸಂತೋಷ್ ದೂರು ನೀಡಿದ್ದಾರೆ. ಸದ್ಯ ಮೂವರ ವಿರುದ್ಧ ದೂರು ದಾಖಲಾಗಿದ್ದು ಆರೋಪಿಗಳಿಗಾಗಿ ಚಂದ್ರಲೇಔಟ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ