ಹುಬ್ಬಳ್ಳಿ: ಕನ್ನಡ ಚಿತ್ರನಟ ಹಾಗೂ ನಿರ್ದೇಶಕರಿಗೆ ಸರ್ಕಾರಿ ಅಧಿಕಾರಿಯೊಬ್ಬರು ಮೋಸ ಮಾಡಿರುವ (Cheating case) ಆರೋಪವೊಂದು ಕೇಳಿ ಬಂದಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಜೋನಲ್ 7ರ ವಲಯ ಆಯುಕ್ತ ಉದಯಕುಮಾರ್ ತಳವಾರ, ಸಿನಿಮಾ ಮಾಡುದಾಗಿ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಿ ಕೈಕೊಟ್ಟಿದ್ದಾರೆ.
ಈ ಸಂಬಂಧ ಯರ‍್ರಾಬಿರ‍್ರಿ ಸಿನಿಮಾ ನಟ ರೂರಲ್ ಅಂಜನ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಮದರಂಗಿ ಸಿನಿಮಾದ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲೇರಿ ಠಾಣೆ ಮೆಟ್ಟಿಲೇರಿದ್ದಾರೆ. ವಲಯ ಆಯುಕ್ತ ಉದಯಕುಮಾರ್ ತಳವಾರ ಈ ಇಬ್ಬರಿಗೂ ಸಿನಿಮಾ ಮಾಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Bike wheeling : ಕದ್ದ Rx ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಖತರ್ನಾಕ್‌ಗಳು ಅರೆಸ್ಟ್
ಉದಯಕುಮಾರ್ ತಳವಾರ ಕಳೆದ ಏಳು ತಿಂಗಳ ಹಿಂದೆ ಸಿನಿಮಾ ಮಾಡಲು ಸಿದ್ಧತೆ ಆರಂಭಿಸುವಂತೆ ಹೇಳಿದ್ದರು. ಈ ಸಂಬಂಧ ನಟ ಅಂಜನ್ ಹಾಗೂ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲೇರಿಗೆ ಜತೆ ಮಾತುಕತೆ ಮಾಡಿಕೊಂಡಿದ್ದರು. ಇದೀಗ ಸಿನಿಮಾ ಮಾಡಲ್ಲ ಎಂದು ಹಿಂದೆ ಸರಿದಿದ್ದಾರೆ. ಸಿನಿಮಾ ವಿಚಾರದಲ್ಲಿ ಉದಯಕುಮಾರ್ ಪತ್ನಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿರುವ ಕವಿತಾ ವಾರಂಗಲ್ ಮಧ್ಯಪ್ರವೇಶಿಸಿದ್ದಾರೆ.
ಏಳು ತಿಂಗಳ ಹಿಂದೆ ಸಿನಿಮಾ ಒಪ್ಪಂದ ಆಗಿದ್ದರೂ ಕೇವಲ ಒಂದು ಲಕ್ಷ ರೂ. ಕೊಟ್ಟಿದ್ದಾರೆ. ಬಳಿಕ ಹಣ ಕೇಳಿದರೆ ಅಗ್ರಿಮೆಂಟ್ ಮಾಡೋಣ ಎಂದು ಮುಂದೆ ಹಾಕಿದ್ದಾರೆ. ನಾನು ರಾಜಕೀಯಕ್ಕೆ ಬರಬೇಕು ಆ ಕಾರಣಕ್ಕೆ ಸಿನಿಮಾ ಮಾಡುತ್ತೀನಿ ಎಂದು ಉದಯಕುಮಾರ್ ತಳವಾರ ನಂಬಿಸಿದ್ದಾರೆ. ಆದರೆ ಈಗ ಸಂಬಳ ಕೊಡದೆ ಉದಯಕುಮಾರ್ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದುಡ್ಡು ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ. ಉದಯಕುಮಾರ್‌ರಿಂದ ಜೀವ ಬೆದರಿಕೆ ಇದೆ ಎಂದು ನಟ ಅಂಜನ್ ಆತಂಕ ಹೊರಹಾಕಿದ್ದಾರೆ. ಇತ್ತ ಮದ್ಯಸ್ಥಿಕೆಗೆ ಓರ್ವ ಡಿವೈಎಸ್‌ಪಿ ಅಧಿಕಾರಿಯನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಸದ್ಯ ಉದಯಕುಮಾರ್ ವಿರುದ್ಧ ಹು-ಧಾ ಪೊಲೀಸ್ ಕಮೀಷನರ್‌ಗೆ ಇಬ್ಬರು ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ನಟ ಕಿಚ್ಚ ಸುದೀಪ್ ಬಗ್ಗೆಯೂ ಉದಯ್ ಕೆಟ್ಟದಾಗಿ ಮಾತಾಡಿದ್ದಾರೆಂದು ಆರೋಪಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ