ಬೆಂಗಳೂರು/ಕೋಲಾರ: ಇಲ್ಲಿನ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಚೆಕ್ ಬೌನ್ಸ್ (Cheque Bounce) ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ರಾಮಚಂದ್ರ ಜಿ. ಎಂಬುವವರಿಂದ 40 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದ ನಂಜೇಗೌಡರು ಸಾಲ ಮರುಪಾವತಿ ಮಾಡಿರಲಿಲ್ಲ. ಆದರೆ, ಬಹುದಿನದ ಬಳಿಕ ಸಾಲ ಮರುಪಾವತಿಗೆ ನೀಡಿದ್ದ 40 ಲಕ್ಷ ರೂ. ಮೊತ್ತದ ಚೆಕ್ ಬೌನ್ಸ್ ಆಗಿತ್ತು.
ಹೀಗಾಗಿ ರಾಮಚಂದ್ರ ಅವರು ಚೆಕ್ ಬೌನ್ಸ್ ದೂರು ನೀಡಿದ್ದರು. ಇದೀಗ ಚೆಕ್ ಬೌನ್ಸ್ ಕೇಸ್‌ನಲ್ಲಿ 49.65 ಲಕ್ಷ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು 42ನೇ ಎಸಿಎಂಎಂ ಕೋರ್ಟ್ ನ್ಯಾಐಾಧೀಶ ಜೆ.ಪ್ರೀತ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | ಅಪ್ಪ-ಅಮ್ಮನ ಜಗಳದಲ್ಲಿ ಮಗು ಪ್ರಾಣಾಪಾಯಕ್ಕೆ ಸಿಲುಕಿತು; 2ವರ್ಷದ ಕಂದಮ್ಮನ ಕಟ್ಟಡದಿಂದ ಎಸೆದ ತಿಳಿಗೇಡಿ!