Site icon Vistara News

Chickpet Election Results : ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಉದಯ ಗರುಡಾಚಾರ್​ಗೆ ಗೆಲುವು

chickpetchickpet bangalore udaya garudachar bjp

chickpetchickpet-bangalore-udaya-garudachar-bjp

ಬೆಂಗಳೂರು: ನಗರ ವ್ಯಾಪ್ತಿಯಲ್ಲಿರುವ ಚಿಕ್ಕಪೇಟೆ ವಿಧಾನ ಸಭಾಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಉದಯ ಗರುಡಾಚಾರ್​ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ ಮಾಜಿ ಶಾಸಕ ಆರ್​. ವಿ ದೇವರಾಜ್​ ವಿರುದ್ಧ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಬಿಜೆಪಿಯನ್ನು ಆಯ್ಕೆ ಮಾಡಿದ ಪರಿಣಾಮ ಉದಯ್ ಬಿ ಗರುಡಾಚಾರ್ 57,312 ಮತ ಪಡೆದು ಶಾಸಕರಾದರು. ಕಾಂಗ್ರೆಸ್‌ನ ಆರ್‌ ವಿ ದೇವರಾಜ್‌ ಅವರ ವಿರುದ್ಧ (49,378) ಗೆಲುವು ಪಡೆದಿದ್ದರು.

ಚಿಕ್ಕಪೇಟೆ ಕ್ಷೇತ್ರ ಹಲವು ವೈವಿಧ್ಯತೆಯ ತಾಣವಾಗಿದೆ. ಲಾಲ್‌ಬಾಗ್, ಕೆ ಆರ್ ಮಾರುಕಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸಿಗುವ ಎಸ್‌ ಪಿ ರಸ್ತೆ, ಕರಗಕ್ಕೆ ಪ್ರಸಿದ್ಧಿ ಪಡೆದಿರುವ ಧರ್ಮರಾಯಸ್ವಾಮಿ ದೇವಾಲಯ, ಗಾಂಧಿ ಬಜಾರ್ ವೃತ್ತ, ಡಿವಿಜಿ ರಸ್ತೆ, ಲಾಲ್‌ಬಾಗ್ ರಸ್ತೆ ಜೆ ಸಿ ರಸ್ತೆ ಹೀಗೆ ಬೆಂಗಳೂರಿನ ಪ್ರಮುಖ ರಸ್ತೆಗಳು ಈ ಕ್ಷೇತ್ರದಲ್ಲಿದೆ. ಆದರೆ, ರಾಜಕೀಯದ ವಿಚಾರಕ್ಕೆ ಬಂದಾಗ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಯಾರಿಗೂ ಭದ್ರ ನೆಲೆಯನ್ನೊದಗಿಸದ ಕ್ಷೇತ್ರ. 1999 ಮತ್ತು 2004ರಲ್ಲಿ ಬಿಜೆಪಿಯ ಪಿ ಸಿ ಮೋಹನ್, 2013ರಲ್ಲಿ ಕಾಂಗ್ರೆಸ್‌ನ ಆರ್ ವಿ ದೇವರಾಜ್ ಮತ್ತು 2018ರಲ್ಲಿ ಬಿಜೆಪಿಯ ಉದಯ್ ಬಿ ಗರುಡಾಚಾರ್ ಗೆಲುವು ಕಂಡಿದ್ದಾರೆ.

2,28,200 ಮತದಾರರನ್ನು ಹೊಂದಿರುವ ಚಿಕ್ಕಪೇಟೆ ಕ್ಷೇತ್ರ ಚುನಾವಣಾ ಲೆಕ್ಕಾಚಾರಗಳನ್ನು ಬದಲಾಯಿಸಬಲ್ಲ ಜಾತಿ ಸಮೀಕರಣವನ್ನು ಹೊಂದಿಕೊಂಡಿದೆ. 59,700 ಮುಸಲ್ಮಾನ ಸಮುದಾಯ ಈ ಕ್ಷೇತ್ರದಲ್ಲಿ ಮತ ಪ್ರಾಬಲ್ಯ ಹೊಂದಿದ್ದಾರೆ. ನಂತರದ ಸ್ಥಾನ 35 ಸಾವಿರ ವೋಟುಗಳನ್ನು ಹೊಂದಿರುವ ದಲಿತ ಸಮುದಾಯದ್ದು. ಆನಂತರ 32 ಸಾವಿರವಿರುವ ಬ್ರಾಹ್ಮಣ, ತಲಾ 25 ಸಾವಿರವಿರುವ ದೇವಾಂಗ, ಒಕ್ಕಲಿಗ ಸಮುದಾಯ, 15 ಸಾವಿರವಿರುವ ತಿಗಳ, 12 ಸಾವಿರವಿರುವ ತಮಿಳು ಮೂಲ ಮತದಾರರು, ತಲಾ ಎರಡು ಸಾವಿರವಿರುವ ಲಿಂಗಾಯತ, ಕುರುಬ ಸಮುದಾಯದ ಮತದಾರರು ಇದ್ದರು.

Read This: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version