ಚಿಕ್ಕಬಳ್ಳಾಪುರ: ಎರಡನೇ ಬಾರಿಯೂ ಹೆಣ್ಣು ಮಗುವನ್ನೇ (Baby Girl) ಹೆತ್ತಳೆಂದು ಸಿಟ್ಟಾದ ಪಾಪಿ ಪತಿಯೊಬ್ಬ ಪತ್ನಿಗೆ ಕಿರುಕುಳ ನೀಡಿದ್ದಾನೆ. ಪತಿ ಕುಟುಂಬಸ್ಥರ ಕಿರುಕುಳಕ್ಕೆ (Husband assaulted) ಬೇಸತ್ತ ನತದೃಷ್ಟ ತಾಯಿ, ಹೆಣ್ಣು ಮಗುವನ್ನು ದಾನ ಮಾಡಲು ಮುಂದಾಗಿದ್ದಾಳೆ. ಚಿಕ್ಕಬಳ್ಳಾಪುರ (chikkabalapura News) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮರಸನಪಲ್ಲಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ರಾಜಮ್ಮ ಎಂಬಾಕೆ ಹೆತ್ತ ಮಗುವನ್ನು ದಾನ ಮಾಡಲು ಮುಂದಾದ ನತದೃಷ್ಟ ತಾಯಿ ಆಗಿದ್ದಾಳೆ. ರಾಜಮ್ಮ ಮರಸನಪಲ್ಲಿ ಗ್ರಾಮದ ಲಕ್ಷ್ಮೀನಾರಾಯಣ ಎಂಬಾತನನ್ನು ಮದುವೆ ಆಗಿದ್ದರು. ಮೊದಮೊದಲು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಯಾವಾಗ ರಾಜಮ್ಮರಿಗೆ ಇಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳೋ ಆಗಲಿದ್ದ ಅಸಡ್ಡೆ ತೋರಲು ಮುಂದಾಗಿದ್ದರು.
ಗಂಡು ಮಗುವಿಗೆ ಜನ್ಮ ನೀಡದ ಕಾರಣಕ್ಕೆ ಪತಿ ಲಕ್ಷ್ಮೀನಾರಾಯಣ ಕುಟುಂಬದವರು ರಾಜಮ್ಮರಿಗೆ ಹಾಗೂ ಹೆಣ್ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ರಾಜಮ್ಮ ಗರ್ಭಿಣಿಯಾಗಿದ್ದಾಗ ಆರೈಕೆ ಮಾಡುತ್ತಿದ್ದ ಕುಟುಂಬ, 2ನೇ ಬಾರಿಯೂ ಹೆಣ್ಣು ಮಗು ಹುಟ್ಟಿದಾಕ್ಷಣ ನಿರ್ಲಕ್ಷ್ಯ ತೋರಿದ್ದಾರೆ. ರಾಜಮ್ಮ ಚಿಕಿತ್ಸೆಗೆಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಬಂದಾಗ ಈ ನೋವಿನ ಪ್ರಕರಣವು ಬೆಳಕಿಗೆ ಬಂದಿದೆ.
ತಂದೆ- ತಾಯಿ ಕಳೆದುಕೊಂಡಿರುವ ರಾಜಮ್ಮರಿಗೆ ಅತ್ತ ತವರು ಮನೆ ಇಲ್ಲದೇ ಇತ್ತ ಗಂಡನ ಆಸರೆಯು ಇಲ್ಲದಂತಾಗಿದೆ. ಹೆತ್ತ ಮಗುವಿನ ಆರೈಕೆ ಮಾಡಲು ಆಗದ ಕಾರಣಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ದಾನ ಮಾಡಲು ರಾಜಮ್ಮ ಮುಂದಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತಿ ಲಕ್ಷ್ಮೀನಾರಾಣ ಪತ್ನಿ ರಾಜಮ್ಮ ಎಂದರೆ ತಾತ್ಸಾರ ಮನೋಭಾವ ತೋರುತ್ತಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ