ಚಿಕ್ಕಬಳ್ಳಾಪುರ: ಕೆರೆಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ (Chikkaballapur News) ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಗೂಳ್ಯ ಗ್ರಾಮದ ನಿವಾಸಿ ಅನಸೂಯಮ್ಮ ಆತ್ಮಹತ್ಯೆಗೆ ಯತ್ನಿಸಿದವರು.
ಪತಿ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ನೊಂದು ಅನಸೂಯಮ್ಮ ಸಂಕ್ರಾಂತ್ರಿ ಹಬ್ಬದ ದಿನವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇತ್ತ ಕೆರೆಗೆ ಹಾರಿದವಳನ್ನು ಅಲ್ಲಿದ್ದವರು ಕೂಡಲೇ ರಕ್ಷಿಸಿದ್ದಾರೆ. ಅನಸೂಯ ಕೆರೆಗೆ ಹಾರುವಾಗ ಕಲ್ಲಿನ ಮೇಲೆ ಬಿದ್ದಿದ್ದಾರೆ. ಪರಿಣಾಮ ಬಲಗಾಲಿನ ಮೂಳೆಯೇ ಮುರಿದುಹೋಗಿದೆ.
ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಅನುಸೂಯ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿಕ್ಕಬಳ್ಳಾಪುರ ನಗರ ಪೊಲೀಸರು, ಅಗ್ನಿಶಾಮಕ ದಳದವರು ಸಂಬಂಧಿಕರಿಗೆ ಮಹಿಳೆಯನ್ನು ಒಪ್ಪಿಸಿದ್ದಾರೆ.
ಇದನ್ನೂ ಓದಿ:Karnataka Weather : ಕೈ ಕಟ್ಟಿ ಕೂರುವಂತೆ ಮಾಡ್ತಿದೆ ತಂಪು ಗಾಳಿ; ಈ ವಾರ ಹೇಗಿರಲಿದೆ ವಾತಾವರಣ
Love Jihad: ಹಿಂದೂ ಬಾಲಕಿ ಜೊತೆ ಮುಸ್ಲಿಂ ಯುವಕ ಪರಾರಿ; ಲವ್ ಜಿಹಾದ್ ಆರೋಪ, ಪ್ರತಿಭಟನೆ
ಮಂಡ್ಯ : ಮಂಡ್ಯದಲ್ಲಿ ಲವ್ ಜಿಹಾದ್ (Love Jihad) ನಡೆಸಲಾಗುತ್ತಿದೆ ಎಂದು ರೊಚ್ಚಿಗೆದ್ದಿರುವ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಂಡ್ಯದ (Mandya news) ಕೆ.ಆರ್.ಪೇಟೆ ಪಟ್ಟಣದಲ್ಲಿ ಈ ಘಟನೆ ನಡೆದಿತ್ತು.
ಕೆ.ಆರ್.ಪೇಟೆ ಪಟ್ಟಣದ 15 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯ ಜತೆ ಪಟ್ಟಣದ 19 ವರ್ಷದ ಯುವಕ ಸೈಯದ್ ತಬ್ರೀಜ್ ಎಂಬಾತ ಸಲಿಗೆ ಬೆಳೆಸಿಕೊಂಡಿದ್ದ. ಪ್ರೀತಿಯ ಹೆಸರಿನಲ್ಲಿ ಈತ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂಬುದು ಹಿಂದೂ ಸಂಘಟನೆಗಳು ಆರೋಪವಾಗಿದೆ.
ಹಿಂದೂ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ ಕರೆದೊಯ್ದಿರುವ ಯುವಕನೂ ಅಪ್ರಾಪ್ತ ವಯಸ್ಕನೇ ಆಗಿದ್ದಾನೆ. ಬಾಲಕಿ ಪೋಷಕರಿಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಾಗಿದೆ. ದೂರಿನ ಬಳಿಕ ಪಟ್ಟಣ ಪೊಲೀಸರು ಬಾಲಕಿ ಹಾಗೂ ಯುವಕನನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ.
ಇದಾದ ಬಳಿಕ ಹಿಂದೂ ಸಂಘಟನೆಗಳಿಂದ ಠಾಣೆ ಮುಂದೆ ಪ್ರತಿಭಟನೆ ನಡೆದಿದೆ. ಈ ಪ್ರಕರಣದ ಹಿಂದೆ ಅನ್ಯ ಕೋಮಿನವರು ಲವ್ ಜಿಹಾದ್‌ಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಪಟ್ಟಣದಲ್ಲೂ ಅನ್ಯಧರ್ಮೀಯರಿಂದ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಟಾರ್ಗೆಟ್ ಆಗುತ್ತಿದೆ. ಪ್ರಕರಣವನ್ನು NIAಗೆ ವಹಿಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ಬಂದಿದೆ. ಬಾಲಕಿಯನ್ನು ಕರೆದೊಯ್ದ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸರಿಂದ ಪೋಸ್ಕೋ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Elephant Attack : ಕಾಫಿ ಗಿಡದ ಮರೆಯಲ್ಲಿ ನಿಂತು ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ ಒಂಟಿಸಲಗ
ಹಿಂದೂ ಜಾಗರಣ ವೇದಿಕೆ ಸಂಚಾಲಕನ ಮೇಲೆ ಹಲ್ಲೆ
ಶಿವಮೊಗ್ಗ: ಹಿಂದೂ ಜಾಗರಣಾ ವೇದಿಕೆ ಸಹ ಸಂಚಾಲಕನ ಮೇಲೆ ಯುವಕರಿಂದ ಹಲ್ಲೆ ನಡೆದಿದೆ. ನಡುರಸ್ತೆಯಲ್ಲಿ ಅಡ್ಡಗಟ್ಟಿ ಯುವಕರಿಂದ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದ ದೃಶ್ಯ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ಶಿವಕುಮಾರ್ ಮೇಲೆ ಶಿವಮೊಗ್ಗ ನಗರದ ತೀರ್ಥಹಳ್ಳಿ ಮುಖ್ಯರಸ್ತೆಯ ವಿಜಯ ಮೋಟಾರ್ಸ್ ಮುಂಭಾಗದ ರಸ್ತೆಯಲ್ಲಿ ಹಲ್ಲೆ ನಡೆದಿದೆ. ಏರ್ಪೋರ್ಟ್‌ನನಲ್ಲಿ ಟ್ಯಾಕ್ಸಿ ಡ್ರೈವಿಂಗ್ ಕೆಲಸ ಮಾಡುತ್ತಿರುವ ಸಂತೆಕಡೂರು ಗ್ರಾಮದ ಶಿವಕುಮಾರ್, ಸರ್ಕಾರಿ ಬಸ್ ನಿಲ್ದಾಣಕ್ಕೆ ಪ್ಯಾಸೆಂಜರ್ ಡ್ರಾಪ್ ಮಾಡಿ ಹೋಗುವಾಗ ಹಲ್ಲೆ ನಡೆಸಲಾಗಿದೆ.
ಸ್ಕೂಟಿ ಹಾಗೂ ಬೈಕಿನಲ್ಲಿ ಬಂದ 4 ಜನ ಯುವಕರಿಂದ ಹಲ್ಲೆ ನಡೆದಿದ್ದು, ಅವಾಚ್ಯವಾಗಿ ನಿಂದಿಸಿ, ದಾಳಿ ಮಾಡಲಾಗಿದೆ. ನಿನ್ನ ಗಾಡಿ ನಂಬರ್ ನೋಡಿಕೊಂಡಿದ್ದೇವೆ, ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಲಾಗಿದೆ. ನಡುರಸ್ತೆಯಲ್ಲಿ ಹಲ್ಲೆ ಮಾಡುತ್ತಿರುವುದನ್ನು ಸ್ಥಳೀಯರು ತಡೆದಿದ್ದು, ಗಾಯಗೊಂಡ ಶಿವಕುಮಾರ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಶಿವಕುಮಾರ್, ಪಾರ್ಕ್‌ನಲ್ಲಿ ಕುಳಿತ ಮುಸ್ಲಿಂ ಯುವಕ-ಹಿಂದೂ ಯುವತಿಯರ ಬಗ್ಗೆ ಮಾಹಿತಿ ನೀಡುತ್ತಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ವಿಚಾರ ತಿಳಿಸುತ್ತಿದ್ದ. ಇದೇ ಕಾರಣಕ್ಕೆ ಯುವಕರ ಗುಂಪು ಫಾಲೋ ಮಾಡಿ ಹಲ್ಲೆ ಮಾಡಿರುವ ಶಂಕೆ ಇದೆ. ವೈಯಕ್ತಿಕ ಕಾರಣಗಳಿರುವ ಸಾಧ್ಯತೆ ಹಿನ್ನೆಲೆಯೂ ಪೊಲೀಸರಿಂದ ತನಿಖೆಯಾಗುತ್ತಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ