Site icon Vistara News

ಸರಣಿ ಅಪಘಾತ | ಕುಡಿದ ಮತ್ತಿನಲ್ಲಿ ಚಾಲನೆ; ಕ್ಯಾಂಟರ್‌ ಡಿಕ್ಕಿಯಾಗಿ ಒಬ್ಬ ಬೈಕ್‌ ಸವಾರ ಸಾವು, ಮತ್ತೊಬ್ಬ ಗಂಭೀರ

ಸರಣಿ ಅಪಘಾತ

ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಕ್ಯಾಂಟರ್ ಚಾಲಕನಿಂದ ಸರಣಿ ಅಪಘಾತ ನಡೆದಿದ್ದು, ಒಬ್ಬ ಬೈಕ್‌ ಸವಾರ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊದಲಿಗೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಬಳಿ ಶುಕ್ರವಾರ ಚಿಂತಾಮಣಿ-ಕೋಲಾರ ರಸ್ತೆಯಲ್ಲಿ ಕ್ಯಾಂಟರ್‌ ಡಿಕ್ಕಿಯಾಗಿ ಗ್ರಾಮಸ್ಥ ಅಮೀನುಲ್ಲಾ ಎಂಬುವವರು ಮೃತಪಟ್ಟಿದ್ದಾರೆ. ನಂತರ ಇದೇ ಕ್ಯಾಂಟರ್ ಕುರುಬೂರು ಫಾರಂ ಬಳಿ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದ್ದರಿಂದ ಆದಿಗೆರೆ ಗ್ರಾಮದ ಬೈಕ್‌ ಸವಾರ ಸಾಬೀರ್ ಖಾನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Road Accident | ಶಬರಿಮಲೆಗೆ ತೆರಳಿದ್ದವರ ಮಿನಿ ಬಸ್‌ಗೆ ಲಾರಿ ಡಿಕ್ಕಿ; ಅಪಘಾತದಲ್ಲಿ 23 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

Exit mobile version