ಚಿಕ್ಕಬಳ್ಳಾಪುರ: ನಿತ್ಯವೂ ಸಣ್ಣ ಸಣ್ಣ ಕಾರಣಕ್ಕೆ (Family Problem) ಜಗಳವಾಡಿಕೊಂಡಿದ್ದ ದಂಪತಿ ನಡುವಿನ ವೈಮನಸ್ಸು ಅಂತಿಮವಾಗಿ ಇಬ್ಬರೂ ಪರಸ್ಪರ ಬೆಂಕಿ ಹಚ್ಚಿಕೊಂಡು (Couple ends life after putting on fire) ಸಾಯುವಲ್ಲಿಗೆ ಅಂತ್ಯಗೊಂಡಿದೆ. ಚಿಕ್ಕಬಳ್ಳಾಫುರ ಜಿಲ್ಲೆ (Chikkaballapura News) ಬಾಗೇಪಲ್ಲಿ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಹಿಂದುಕೊರಳಪಲ್ಲಿ ಗ್ರಾಮದ ಮಂಜುನಾಥ್ ಹಾಗೂ ಪ್ರಮೀಳಾ ಮೃತ ದಂಪತಿ. ಅವರಿಬ್ಬರೂ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವು ತಂದುಕೊಂಡಿದ್ದಾರೆ.
ಕೌಟುಂಬಿಕ ಕಾರಣಗಳಿಗಾಗಿ ಜಗಳವಾಡುತ್ತಿದ್ದ ಅವರಿಬ್ಬರೂ ಪರಸ್ಪರ ಸೀಮೆ ಎಣ್ಣೆ ಎರಚಿಕೊಂಡಿದ್ದಾರೆ. ಕೊನೆಗೆ ಒಬ್ಬರು ಬೆಂಕಿ ಕೊಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಸಿಲುಕಿ ಬೆಂದು ಹೋಗಿದ್ದಾರೆ. ಸುಟ್ಟ ಗಾಯಗಳಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ದಂಪತಿಯನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಬದುಕುಳಿಯಲಿಲ್ಲ.
ಇದನ್ನೂ ಓದಿ : Self Harming : 14 ವರ್ಷದ ಮಗ ನೇಣಿಗೆ ಶರಣಾದ 13ನೇ ದಿನಕ್ಕೆ ತಂದೆ ಕೂಡಾ ಆತ್ಮಹತ್ಯೆ
ಇಬ್ಬರು ಹೆಣ್ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಚಿಕ್ಕೋಡಿ: ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಮಕ್ಕಳ ಜತೆ (Mother ends life with two Childrens) ಬಾವಿಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ (Belagavi News) ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಈ ಮನಕುಲಕುವ ಘಟನೆ ನಡೆದಿದೆ.
ಸರಸ್ವತಿ ಕಿರವೆ (26) ಎಂಬವರೇ ತಮ್ಮ ಪುಟಾಣಿ ಮಕ್ಕಳಾದ ದೀಪಿಕಾ (7) ಹಾಗೂ ರಿತಿಕಾ (4) ಅವರನ್ನು ಹಿಡಿದುಕೊಂಡು ಬಾವಿಗೆ ಹಾರಿದ ದುರ್ದೈವಿ ಮಹಿಳೆ. ಕೌಟುಂಬಿಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದ ಆಕೆ ಕೊನೆಗೆ ಸಾವೇ ದಾರಿಯೆಂದು ಬಗೆದು ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾರೆ.
ಸುಲ್ತಾನಪುರ ಗ್ರಾಮದ ಸರಸ್ವತಿ ಎಂಬವರನ್ನು 2016ರಲ್ಲಿ ಮಹಾರಾಷ್ಟ್ರ ಸಾಂಗ್ಲಿಯ ಕಿರಣ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆಕೆಯ ಸಂತೋಷ ತುಂಬ ದಿನ ಉಳಿಯಲಿಲ್ಲ. ಮದುವೆಯಾದ ದಿನದಿಂದಲೇ ಹಿಂಸೆಯನ್ನು ಅನುಭವಿಸುತಿದ್ದರು. ಗಂಡ ಆಕೆಯ ಪಾಲಿಗೆ ಕಿರಾತಕನಾಗಿದ್ದ. ಇದರ ನಡುವೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು. ಮಕ್ಕಳು ಹುಟ್ಟಿದ ಮೇಲೂ ಗಂಡನ ಕಿರುಕುಳ ನಿಲ್ಲಲೇ ಇಲ್ಲ.
ಕೊನೆಗೆ ಇದಮ್ಮ ಸಹಿಸಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕಾಗಿ ಎಂಟು ತಿಂಗಳ ಹಿಂದೆ ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದರು ಸರಸ್ವತಿ. ತವರು ಮನೆಯಲ್ಲಿದ್ದ ಆಕೆಗೆ ತನ್ನ ಬದುಕು ಹೀಗೆ ಹಾಳಾದ ಬಗ್ಗೆಯೇ ಆತಂಕವಿತ್ತು ಎನ್ನಲಾಗಿದೆ. ಇಬ್ಬರು ಹೆಣ್ಮಕ್ಕಳ ಬದುಕಿನ ಬಗ್ಗೆ ಸದಾ ಯೋಚಿಸಿ ಆತಂಕಪಡುತ್ತಿದ್ದ ಆಕೆ ಅಂತಿಮವಾಗಿ ಎಲ್ಲರೂ ಜತೆಯಾಗಿ ಪ್ರಾಣ ಕಳೆದುಕೊಳ್ಳುವ ನಿರ್ಧಾರದೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮನೆಯವರನ್ನು ವಿಚಾರಣೆ ನಡೆಸಿದ್ದಾರೆ. ಗಂಡನನ್ನೂ ಕರೆಸಲಾಗಿದೆ.