ಚಿಕ್ಕಬಳ್ಳಾಪುರ: ಪರಸ್ಪರ ಪ್ರೀತಿಸುತ್ತಿದ್ದ ಅನ್ಯಜಾತಿಯ ಪ್ರೇಮಿಗಳು (Lovers from different Castes) ಮನೆ ಬಿಟ್ಟು ಪರಾರಿಯಾದ (Escape from home) ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapura News) ಗುಂಡಿಂಬಂಡೆ ತಾಲೂಕಿನ ಮೇಲಿನ ಅಪ್ಪಿ ರೆಡ್ಡಿ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ (Love Case) ಗ್ರಾಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಯುವಕನ ಸಂಬಂಧಿಯ ಆಟೋ ರಿಕ್ಷಾವನ್ನು ಸುಟ್ಟು ಹಾಕಲಾಗಿದೆ (Auto Rikshaw burnt).
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾ. ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ನಿವಾಸಿಗಳಾದ ಸುರೇಶ್ ಕುಮಾರ್ ಹಾಗೂ ಮೌನಿಕಾ ಪ್ರೀತಿಸಿ ಪರಾರಿಯಾದ ಜೋಡಿ. ರಾಮಕೃಷ್ಣಪ್ಪ-ಆನಂದಮ್ಮ ದಂಪತಿಗಳ ಪುತ್ರಿಯಾಗಿರುವ ಮೋನಿಕಾ ಮೇಲ್ವರ್ಗದ ಕುಟುಂಬಕ್ಕೆ ಸೇರಿದವಳಾಗಿದ್ದರೆ, ಅವುಲಪ್ಪ-ನಾರಾಯಣಮ್ಮ ದಂಪತಿಯ ಪುತ್ರ ಸುರೇಶ್ ಕುಮಾರ್ ಪರಿಶಿಷ್ಟ ಪಂಗಡಕ್ಕೆ ಸೇರಿದವರು.
ಪ್ರೇಮಿಗಳು ಓಡಿ ಹೋದ ಬಳಿಕ ಗ್ರಾಮದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಮುಖ್ಯವಾಗಿ ಎರಡೂ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ.
ಯುವಕ ಸುರೇಶ್ ಕುಮಾರ್ ಕಂಬಿ ಕೆಲಸ ಮಾಡುತ್ತಿದ್ದರೆ, ಮೋನಿಕಾ ಪಿಯೂಸಿ ಫೇಲ್ ಆಗಿ ಮನೆಯಲ್ಲೇ ಇದ್ದರು. ಇವರಿಬ್ಬರ ಮನೆಗಳು ಎದುರಾಬದುರಾಗಿ ಇವೆ. ಹೀಗಾಗಿ ಅವರ ನಡುವೆ ಪ್ರೇಮಾಂಕುರವಾಗಿ ಮನೆ ಬಿಟ್ಟು ಓಡಿ ಹೋಗುವ ಹಂತಕ್ಕೆ ಬಂದಿದೆ.
ರೊಚ್ಚಿಗೆದ್ದ ಹುಡುಗಿಯ ಪೋಷಕರು ಈಗ ಹುಡುಗನ ಕಡೆಯವರ ಆಟೋಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್‌ನ ಸಂಬಂಧಿ ಮೋಹನ್ ಕುಮಾರ್ ಎಂಬುವರಿಗೆ ಸೇರಿದ ಆಟೋಗೆ ಇದಾಗಿದೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ.
ಈ ಪ್ರಕರಣ ಪೊಲೀಸರಿಗೂ ಇಕ್ಕಟ್ಟು ತಂದಿಟ್ಟಿದೆ. ಆಟೋಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಪರಿಸರದಲ್ಲಿ ಸಂಘರ್ಷಮಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಾರಿಯಾಗಿ ಮದುವೆಯಾಗಿರುವ ಜೋಡಿ
ಪರಾರಿಯಾಗಿರುವ ಸುರೇಶ್ ಕುಮಾರ್ ಮತ್ತು ಮೌನಿಕಾ ಅವರು ಮದುವೆಯಾಗಿದ್ದಾರೆ ಎಂಬ ಸುದ್ದಿ ಹುಡುಗಿಯ ಕಡೆಯವರನ್ನು ಕೆರಳಿಸಿದೆ ಎನ್ನಲಾಗಿದೆ. ಈ ನಡುವೆ ಹುಡುಗಿ ಮನೆಯವರು ಅವರೆಲ್ಲಿದ್ದಾರೆ ಎಂಬ ಹುಡುಕಾಟಕ್ಕೂ ಇಳಿದಿದೆ.