Site icon Vistara News

Love Case : ಮದುವೆ ಆಗಲು ತಿರಸ್ಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ; ವಿಷ್ಯ ತಿಳಿದು ವಿಷ ಕುಡಿದ ಪೊಲೀಸ್‌ ಪೇದೆ

Love case

ಚಿಕ್ಕಬಳ್ಳಾಪುರ: ಪ್ರೀತಿಸಿ (Love case) ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವ ಘಟನೆ ನಡೆದಿದೆ. ಪೊಲೀಸ್ ಪೇದೆಯಿಂದ ವಿದ್ಯಾರ್ಥಿನಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಪೇದೆ ವಂಚಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇತ್ತ ಪೊಲೀಸ್ ಪೇದೆ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪೊಲೀಸ್ ಪೇದೆ ತಿಮ್ಮಣ್ಣರಾಮಪ್ಪಭೂಸರೆಡ್ಡಿ ಎಂಬಾತನಿಂದ ವಂಚನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪೇದೆಯಾಗಿದ್ದಾರೆ. ಪೊಲೀಸ್ ಪೇದೆ ಹಾಗೂ ಯುವತಿ ಶಿರಿಷಾ ಇಬ್ಬರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಎಸ್‌ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್‌ಪಿ ಕುಶಾಲ್‌ ಪೊಲೀಸ್ ಪೇದೆ ಹಾಗೂ ಯುವತಿ ಶಿರಿಷಾ ವಿಚಾರಣೆ ನಡೆಸಿದ್ದಾರೆ. ಯುವತಿ ಶಿರಿಷಾ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ನಿವಾಸಿಯಾಗಿದ್ದಾಳೆ. ಇವರಿಬ್ಬರು ಚಿಕ್ಕಬಳ್ಳಾಪುರ ಮುನಿಸಿಪಾಲ್ ಕಾಲೇಜಿನಲ್ಲಿ ಕರೆಸ್ಪಾಂಡೆನ್ಸ್‌ನಲ್ಲಿ ಪದವಿ ಮಾಡುತ್ತಿದ್ದರು. ಕಾಲೇಜಿನಲ್ಲಿ ಇಬ್ಬರಿಗೂ ಪರಿಚಯವಾಗಿದ್ದು ಬಳಿಕ ಪ್ರೇಮಕ್ಕೆ ತಿರುಗಿತ್ತು. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ದೈಹಿಕ ಸಂರ್ಪಕ ಬೆಳೆಸಿದ್ದ. ಆದರೆ ಮದುವೆ ಆಗು ಅಂದರೆ ಅಂತರ್ಜಾತಿ ಎಂಬ ನೆಪವೊಡ್ಡಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ. ಇದರಿಂದ ಮನನೊಂದ ಯುವತಿ‌ ಶಿರಿಷಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸುದ್ದಿ ಕೇಳಿ ಪೊಲೀಸ್‌ ಪೇದೆ ತಮ್ಮಣ್ಣ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ: KAS Exam : ಕೆಎಎಸ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಮರು ಪರೀಕ್ಷೆಗೆ ಅಭ್ಯರ್ಥಿಗಳ ಒತ್ತಾಯ

ಗನ್‌ ತೆಗೆದಿಡುವಾಗ ಮಿಸ್‌ ಫೈರ್‌; ಬಲಗಣ್ಣಿನಿಂದ ಹೊರಬಂತು ಗುಂಡು!

ಗನ್ ತೆಗೆದಿಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಗುಂಡು ನೇರವಾಗಿ ಬಲಗಣ್ಣಿನ ಒಳಗಿನಿಂದ ಹೊರಬಂದಿದೆ. ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ಘಟನೆ ನಡೆದಿದೆ. ಕಳವಾಸೆ ಗ್ರಾಮದ ಅರುಣ್ (47) ಮೃತ ದುರ್ದೈವಿ. ಶೆಡ್‌ನಲ್ಲಿದ್ದ ಗನ್ ಒಳಗಿಡಲು ಒರೆಸುವಾಗ ಗುಂಡು ಸಿಡಿದಿದೆ. ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಅನ್ನೋದು ಸ್ಪಷ್ಟವಾಗಿಲ್ಲ. ಪರೀಕ್ಷೆಗಾಗಿ ಮೃತದೇಹವನ್ನು ಹಾಸನದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೆಡ್‌ನಲ್ಲಿ ಈ ದುರಂತ ನಡೆದಿದೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version