Site icon Vistara News

Murder Case : ಪತ್ನಿಗೆ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ನೀಚ

Husband stabs wife to death

ಚಿಕ್ಕಬಳ್ಳಾಪುರ: ಶಿವರಾತ್ರಿ ಜಾಗರಣೆ ವೇಳೆ ಹುಲ್ಲು ತರಲು ಪತ್ನಿಯನ್ನು ಕರೆದೊಯ್ದ ಪತಿಗೆ ಅದ್ಯಾವ ಭೂತ ಒಳಹೊಕ್ಕಿತ್ತೋ ಏನೋ ಪತ್ನಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾನೆ.

ನರಸಮ್ಮ (45) ಎಂಬಾಕೆ ಪತಿಯಿಂದಲೇ ಕೊಲೆಯಾದ ದುರ್ದೈವಿ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರಸಮ್ಮ ಪತಿ ಗಂಗುಲಪ್ಪ ಎಂಬಾತ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಹಾಕಿದ್ದಾನೆ.

ಕೊಲೆಯಾದ ಸ್ಥಿತಿಯಲ್ಲಿ ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಾತಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದಿಲ್ಲ. ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Chikkamagaluru News : ತುಡಕೂರು ಮಂಜುಗೆ ಗಡಿಪಾರು ನೋಟಿಸ್! ವೈಯಕ್ತಿಕವಾಗಿ ಟಾರ್ಗೆಟ್ ಎಂದು ಕಿಡಿ

ಮೈಸೂರಿನಲ್ಲಿ ಫ್ಲೆಕ್ಸ್‌ಗಾಗಿ ಕೊಲೆ; ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷನ ಮೇಲೆ FIR

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮಾಜಿ ಕಾಂಗ್ರೆಸ್ ಸದಸ್ಯ (Former Mysore Corporator) ನಯಾಜ್ ಪಾಷಾ ಅಲಿಯಾಸ್‌ ಪಂಡು ಅವರ ಸಹೋದರ ಮೌಲಾನಾ ಅಕ್ಮಲ್‌ ಎಂಬಾತನನ್ನು ಶುಕ್ರವಾರ ರಾತ್ರಿ ನಗರದ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ (Murder Case) ಘಟನೆಯ ಹಿನ್ನೆಲೆ ಬಯಲಾಗಿದೆ. ಇದು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಫ್ಲೆಕ್ಸ್‌ ವಿವಾದದಿಂದ (Flex Controversy) ಸಂಭವಿಸಿದ ಕೊಲೆ ಎನ್ನಲಾಗಿದೆ.

ಕೊಲೆ ಸಂಬಂಧ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ (KMDC President) ಮೊಹಮ್ಮದ್‌ ಅಲ್ತಾಫ್ ಹಾಗೂ ಮೈಸೂರು ಪಾಲಿಸ ಸದಸ್ಯ ಬಷೀರ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಅಲ್ತಾಫ್‌ ಅಭಿನಂದನಾ ಫ್ಲೆಕ್ಸ್‌ ಈ ಕೊಲೆಯ ಕೇಂದ್ರ ಬಿಂದು ಎನ್ನಲಾಗಿದೆ.

ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್‌ ಅಲ್ತಾಫ್‌ ಬಳಿಕ ಮೊದಲ ಬಾರಿ ಮೈಸೂರಿಗೆ ಆಗಮಿಸುವ ಹೊತ್ತಲ್ಲಿ ಸ್ವಾಗತ ಕೋರಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಮಹಾನಗರ ಪಾಲಿಕೆ ಸದಸ್ಯ ಮೊಹಮ್ಮದ್‌ ಬಶೀರ್‌ ಈ ಫ್ಲೆಕ್ಸ್‌ ಹಾಕಿಸಿದ್ದರು. ಇದಕ್ಕೆ ಸಂಬಂಧಿಸಿ ಕಳೆದ ನಾಲ್ಕು ದಿನಗಳಿಂದ ಗಲಾಟೆ ನಡೆಯುತ್ತಿತ್ತು.

ಅಲ್ತಾಫ್‌ಗೆ ಸ್ವಾಗತ ಕೋರಿ ಮೊಹಮ್ಮದ್‌ ಬಶೀರ್‌ ಫ್ಲೆಕ್ಸ್ ಅಳವಡಿಸಿದ್ದನ್ನು ಮೌಲಾನಾ ಅಕ್ಮಲ್‌ ಆಕ್ಷೇಪಿಸಿದ್ದ. ಮಾತ್ರವಲ್ಲ ಇದನ್ನು ಪ್ರಶ್ನೆ ಮಾಡಿ ಪಾಲಿಕೆಗೆ ದೂರು ಕೂಡಾ ನೀಡಿದ್ದ. ಇದರಿಂದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ನಡುವೆ ಅಕ್ಮಲ್‌ ಅಲ್ತಾಫ್ ಖಾನ್ ವಿರುದ್ಧ ವಿಡಿಯೊ ಮಾಡಿ ಹರಿಹಾಯ್ದಿದ್ದ. ಇದೆಲ್ಲದರ ಒಟ್ಟು ಪರಿಣಾಮವಾಗಿ ಬಶೀರ್‌ ಮತ್ತು ಅಕ್ಮಲ್‌ ಟೀಮ್‌ಗಳ ನಡುವೆ ಜಿದ್ದಾಜಿದ್ದಿ ನಡೆದಿತ್ತು.

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ಈ ನಡುವೆ, ಶುಕ್ರವಾರ ರಾತ್ರಿ ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತದ ಸಮೀಪ ನಿಂತಿದ್ದ ಮೌಲಾನಾ ಅಕ್ಮಲ್‌ನ ಕೊಲೆಯಾಗಿದೆ. ಮೂರು ಬೈಕ್‌ನಲ್ಲಿ ಬಂದ 6 ಜನರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಹಂತಕರು ಬೆಂಗಳೂರಿನಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈಗ ಎಫ್‌ಐಆರ್‌ ಆಗಿರುವವರ ಬಂಧನ ನಡೆದು ವಿಚಾರಣೆ ವೇಳೆ ಎಲ್ಲ ವಿವರ ಬಹಿರಂಗವಾಗಲಿದೆ. ಈ ನಡುವೆ ಅಕ್ಮಲ್‌ ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿದ್ದು, ಆ ಕಾರಣಕ್ಕಾಗಿ ಕೊಲೆ ನಡೆದಿರಬಹುದು ಎಂಬ ಶಂಕೆಯೂ ಇತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version