Site icon Vistara News

Murder Case: ಪ್ರಿಯಕರನ ಬಾಡಿಗೆ ರೂಂನಲ್ಲಿ ವಿವಾಹಿತೆಯ ಕತ್ತು ಕೊಯ್ದು ಕೊಲೆ

Man kills married woman in rented room

ಚಿಕ್ಕಬಳ್ಳಾಪುರ: ಬಾಡಿಗೆ ರೂಂನಲ್ಲಿ ವಿವಾಹಿತ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ (Murder Case) ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkabalapura News) ನಡೆದಿದೆ. ದೀಪಾ ಹತ್ಯೆಯಾದವರು.

ದೀಪಾ ತನ್ನ ಪ್ರಿಯಕರನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ದಿವಾಕರ್‌ ಎಂಬಾತ ಹಂತಕ ಎನ್ನಲಾಗಿದೆ. ದಿವಾಕರ್‌ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ತರಕಾರಿ ತರುವುದಾಗಿ ಹೇಳಿದ ದೀಪಾ ಈಗ ದಿವಾಕರ್‌ ಮನೆಯ ಅಡುಗೆ ಕೋಣೆಯಲ್ಲಿ ಕೊಲೆಯಾಗಿದ್ದಾಳೆ. ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗಿದೆ. ದೀಪಾಳನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ರೂಮಿಗೆ ಬೀಗ ಜಡಿದು ದಿವಾಕರ್‌ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಕಳೆದ ಬುಧವಾರ ಫೆ.7ರಂದು ಹತ್ಯೆಯಾಗಿದ್ದು, ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ. ರೂಮಿನಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣಕ್ಕೆ ಸ್ಥಳೀಯರು ಅನುಮಾನಗೊಂಡು ಕಿಟಕಿಯಿಂದ ನೋಡಿದ್ದಾರೆ. ಈ ವೇಳೆ ದೀಪಾ ಸತ್ತು ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ದೀಪಾಳ ಮೃತದೇಹವು ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರೂಮಿನ ಮಾಲೀಕರಿಂದ ಹೆಚ್ಚಿನ ಮಾಹಿತಿ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇತ್ತ ದೀಪಾಳ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.

ಅಳಿಯ- ಮಗಳ ಜಗಳ ಬಿಡಿಸಲು ಹೋಗಿ ಕೊಲೆಯಾದ ಮಹಿಳೆ

ತುಮಕೂರು: ಅಳಿಯ ಮತ್ತು ಮಗಳ ಜಗಳ ಬಿಡಿಸಲು ಹೋದ ಅತ್ತೆಯೊಬ್ಬ ಕೊಲೆಯಾದ (Murder Case ) ಘಟನೆ ತುಮಕೂರು ಜಿಲ್ಲೆಯ ಮಧುಗಿರಿ (Madhugiri) ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಅಶ್ವಿತ್ ಉನ್ನಿಸಾ (58) ಕೊಲೆಯಾದವರು. ಅವರು ತಾಲೂಕಿನ ಬೆಳಗುಂಬ ನಿವಾಸಿಯಾಗಿದ್ದಾರೆ. ಸೈಯದ್ ಸುಹೈಲ್​ ಕೊಲೆ ಆರೋಪಿ.

ಅಶ್ವಿತ್ ಉನ್ನಿಸಾ ತಮ್ಮ ಮಗಳನ್ನು ಕೊಡಿಗೇನಹಳ್ಳಿ ನಿವಾಸಿ ಸೈಯದ್ ಸುಹೇಲ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು. ಕೌಟುಂಬಿ ಕಲಹದ ಹಿನ್ನೆಲೆಯಲ್ಲಿ ಪ್ರತಿದಿನ ದಂಪತಿ ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ತಿರುಗಿದ ಕಾರಣ ತವರು ಮನೆಯಲ್ಲಿದ್ದ ತಾಯಿಯನ್ನ ಪೋನ್ ಮಾಡಿ ಮಗಳು ಕರೆಸಿಕೊಂಡಿದ್ದಳು.

ಅಂತೆಯೇ ಮನಗೆ ಬಂದ ಅಶ್ಚಿತ್ ಉನ್ನಿಸಾ ಜಗಳ ಬಿಡಿಸಲು ಹೋದ ವೇಳೆ ಸುಹೈಲ್​ ದೊಣ್ಣೆಯಿಂದ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಶ್ವಿತ್ ಉನ್ನಿಸಾ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version