ಚಿಕ್ಕಬಳ್ಳಾಪುರ: ಅಪ್ರಾಪ್ತೆ ಮೇಲೆ ಯುವಕನೊರ್ವ ಲೈಂಗಿಕ ದೌರ್ಜನ್ಯವನ್ನು (Physical relationship) ಎಸಗಿದ್ದಾನೆ. 7ನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈಗ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Physical Abuse) ಘಟನೆ ನಡೆದಿದೆ.
7ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಂಬಂಧಿ ಯುವಕನಿಂದಲೇ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಈ ಬಗ್ಗೆ ತಿಳಿದು ಬಾಲಕಿಯ ಪಾಲಕರು ಕಂಗಾಲಾಗಿದ್ದಾರೆ.
ಈ ವಿಚಾರವನ್ನು ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಓದುವ ವಯಸ್ಸಿನಲ್ಲಿ ಗರ್ಭಿಣಿಯಾದ ಅಪ್ರಾಪ್ತೆಯನ್ನು ರಕ್ಷಿಸಿ ಸರ್ಕಾರಿ ಬಾಲಕಿಯರ ಬಾಲಮಂದಿರಲ್ಲಿ ಆರೈಕೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Assault Case : ಗಂಡನ ಮೇಲೆ ಸಿಟ್ಟು; ಪ್ರಿಯಕರನ ಜತೆ ಸೇರಿ ಮಕ್ಕಳನ್ನು ಕಚ್ಚಿದ ಕ್ರೂರಿ ತಾಯಿ!
ಪೋಕ್ಸೋ ಪ್ರಕರಣದಲ್ಲಿ ಬಾಲಮಂಜುನಾಥ ಸ್ವಾಮೀಜಿ ಬಂಧನ
ತುಮಕೂರು: ಅಪ್ರಾಪ್ತ ವಯಸ್ಸಿನ ಹುಡುಗಿಗೆ ಲೈಂಗಿಕ ಕಿರುಕುಳ (physical abuse) ನೀಡಿದ ಸ್ವಾಮೀಜಿಯೊಬ್ಬನನ್ನು ತುಮಕೂರು (Tumkur news) ಪೊಲೀಸರು ಪೋಕ್ಸೋ ಕೇಸ್ (POCSO Case) ದಾಖಲಿಸಿ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಮಂಜುನಾಥ ಸ್ವಾಮೀಜಿ (Balamanjunatha Swamiji) ಬಂಧಿತ ಆರೋಪಿ. ಈತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ತಡರಾತ್ರಿ ಬಂಧಿಸಲಾಗಿದೆ.
ಕಳೆದ ಫೆಬ್ರುವರಿ 10ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಸ್ವತಃ ಸ್ವಾಮೀಜಿಯೇ ಒಂದು ದೂರು ದಾಖಲಿಸಿದ್ದ. ಇದರಲ್ಲಿ, ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದ.
ಸ್ವಾಮೀಜಿಯ ಸೇವಕನಾಗಿದ್ದ ಅಭಿಷೇಕ್ ಮತ್ತು ಟೀಂನಿಂದ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್ ಇಡಲಾಗಿದೆ ಎಂದು, ತನ್ನ ಆಪ್ತ ಸಹಾಯಕನಾಗಿದ್ದ ಅಭಿಲಾಷ್ ಎಂಬಾತನಿಂದ ಎಫ್ಐಆರ್ ದಾಖಲು ಮಾಡಿಸಿದ್ದ. ಒಟ್ಟು 6 ಜನರ ಮೇಲೆ ದೂರು ನೀಡಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಸ್ವಾಮೀಜಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರ ಪರಿಶೀಲನೆ ವೇಳೆ ಸ್ವಾಮೀಜಿಯ ಅಸಲಿ ಮುಖವಾಡ ಬಯಲಾಗಿದೆ.
ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಲಾಗಿದ್ದು, ತಡರಾತ್ರಿ ಇಬ್ಬರನ್ನು ಬಂಧಿಸಿದ್ದಾರೆ. ತುಮಕೂರು ಎಸ್‌ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಬಂಧನ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ