Site icon Vistara News

Road Accident | ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಕೆರೆಗೆ ಉರುಳಿದ ಶಾಲಾ ವಾಹನ, ಒಬ್ಬರು ಸಾವು, ಐವರಿಗೆ ಗಾಯ

Road Accident

ಚಿಕ್ಕಬಳ್ಳಾಪುರ: ಚಿಂತಾಮಣಿ-ಶ್ರೀನಿವಾಸಪುರ‌ ರಸ್ತೆಯ ಗೋಪಸಂದ್ರ ಬಳಿ ಶಾಲಾ ವಾಹನವೊಂದು ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದ್ದರಿಂದ (Road Accident) ಒಬ್ಬರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಸರಣಿ ಅಪಘಾತದ ನಂತರ ಶಾಲಾ ವಾಹನ ಗೋಪಸಂದ್ರ ಕೆರೆಗೆ ಉರುಳಿದೆ.

ಶ್ರೀನಿವಾಸಪುರ ತಾಲೂಕಿನ ಆಲವಾಟದ ನಿವಾಸಿ ಮಂಜುನಾಥ್‌ ಮೃತ. ಜೋಗೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ, ಶೋಭಾ, ಸೋನಿಯಾ ಸೇರಿ ಐವರು ಗಾಯಗೊಂಡಿದ್ದಾರೆ. ಖಾಸಗಿ ಶಾಲಾ ವಾಹನದ ಚಾಲಕ ಮೂರು ಕಾರುಗಳಿಗೆ ಡಿಕ್ಕಿ ಹೊಡೆದ ಬಳಿಕ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Shootout In Bangalore | ತೆಲುಗಿನ ಇಂದ್ರ ಸಿನಿಮಾ ಹೋಲುವ ದ್ವೇಷ; 24 ಗಂಟೆಯೊಳಗೆ ಶೂಟ್‌ಔಟ್‌ ಆರೋಪಿಗಳ ಸೆರೆ

Exit mobile version