ಚಿಕ್ಕಬಳ್ಳಾಪುರ: ವಿಧವೆಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದ ಗಂಡನ ಸ್ನೇಹಿತನೊಬ್ಬ ಆಕೆಗೆ ಬಾಳು ನೀಡುತ್ತೇನೆ ಎಂದು ಪ್ರೀತಿಸಿ ಕೊನೆಗೆ ಆಕೆಯನ್ನು ಕಂಟ್ರೋಲ್ ಮಾಡಲು ನೋಡಿದ್ದ. ಆದರೆ, ಆಕೆ ಆತ ಹೇಳಿದ ಹಾಗೆ ಕೇಳಲಿಲ್ಲ ಎಂದು ಮನನೊಂದು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾನೆ.
ಎಸ್.ಎನ್.ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಗರದ 15ನೇ ವಾರ್ಡ್‌ನ ಸುಮಾ ಎಂಬ ಮಹಿಳೆ ನಗರ ಸಭೆಯಲ್ಲಿ ಬಿಲ್ ಕಲೆಕ್ಟರ್ ಜತೆ ವಿವಾಹವಾಗಿದ್ದಳು. ಆದರೆ, ಆತ ಕಳೆದ ವರ್ಷ ಕೊರೊನಾ ಸೋಂಕಿಗೆ ಬಲಿಯಾಗಿದ್ದ. ಗಂಡ ಸತ್ತ ಮೇಲೆ ಸುಮಾಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬರುತ್ತಿದ್ದ ಆಕೆಯ ಪತಿಯ ಸ್ನೇಹಿತ ಎಸ್.ಎನ್.ಪ್ರಶಾಂತ್ ಸಲುಗೆಯಿಂದ ಮಾತನಾಡುತ್ತಿದ್ದ. ಈತ ಕೂಡಾ ವಿಚ್ಛೇದಿತ ಎನ್ನಲಾಗಿದೆ. ಸುಮಾಳಿಗೆ ಬಾಳು ನೀಡುವುದಾಗಿ ಹೇಳಿ ಆಕೆಯನ್ನು ಪ್ರೀತಿಸಿದ್ದ. ಆದರೆ, ಆಕೆ ತನ್ನನ್ನು ಬಿಟ್ಟು ಬೇರೆಯವರ ಜತೆ ಸಲುಗೆಯಿಂದ ಇದ್ದಾಳೆ ಎಂದು ಮನನೊಂದು ಭಾನುವಾರ ರಾತ್ರಿ ಸುಮಾ ಒಡೆತನದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಯುವುದಕ್ಕೂ ಮುನ್ನ ಸ್ಥಳೀಯ ನಗರಸಭಾ ಸದಸ್ಯ ಅಂಬರೀಶನೆ ತನ್ನ ಸಾವಿಗೆ ಕಾರಣ ಎಂದು ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಪ್ರಶಾಂತ್ ಸಾವಿಗೆ ಸುಮಾ ಹಾಗೂ ಅಂಬರೀಶನೇ ಕಾರಣ ಎಂದು ಆರೋಪಿಸಿ ಸಂಬಂಧಿಕರು ಆರೋಪಿಸಿದ್ದಾರೆ. ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಹೋಗಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಉ. ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ, ಎಂಟು ಮಂದಿ ಬಲಿ, 15 ಮಂದಿಗೆ ಗಾಯ