Site icon Vistara News

Triple Murder: ಪತ್ನಿಯ ಅಕ್ರಮ ಸಂಬಂಧ, ಪತ್ನಿ ಸೇರಿ ಇಬ್ಬರು ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ತಂದೆ

Triple Murder

ಚಿಕ್ಕಬಳ್ಳಾಪುರ: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ, ಪತ್ನಿಯನ್ನೂ ಸೇರಿಸಿ ಇಬ್ಬರು ನಿಷ್ಪಾಪಿ ಮಕ್ಕಳನ್ನೂ ಕೊಲೆ ಮಾಡಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಯಣ್ಣೂರು ಗ್ರಾಮದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಪತ್ನಿ- ಮಕ್ಕಳನ್ನು ಕೊಂದ ತಂದೆ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬದುಕುಳಿದಿದ್ದಾನೆ.

ಸದ್ಯ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಸೊಣ್ಣಪ್ಪ (50) ಈ ಕೃತ್ಯ ನಡೆಸಿದ ಪಾಪಿ. ಈತನ ಪತ್ನಿ ನೇತ್ರಾ (40), ಮಕ್ಕಳಾದ ಸ್ನೇಹ (09) ಹಾಗೂ ವರ್ಷಿತ (12) ಮೃತ ದುರ್ದೈವಿಗಳು. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Murder case: ಹಣಕ್ಕಾಗಿ ತಂದೆಯನ್ನೇ ಕೊಲೆಗೈದ ಮಗ ಅಂದರ್‌

Exit mobile version