ಚಿಕ್ಕಬಳ್ಳಾಪುರ: ʻʻಪ್ರದೀಪಾ.. ನೀನು ಡೈಲಾಗ್ ಹೊಡೆದು ಬಂದಿದ್ದೀಯಾ.. ಮುನಿಸ್ವಾಮಿ ಏನೂ ಅಲ್ಲ ಅಂತ ಹೇಳ್ತೀಯಾ.? ನೀನು ಹುಟ್ಟಿದಾಗಲೇ ನಾನು ಗ್ರಾಮ ಪಂಚಾಯತಿ ಸದಸ್ಯ. ನನ್ನ ಮುಂದೆ ನೀನು ಬಚ್ಚಾ…: ಹೀಗೆಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಕೋಲಾರ ಸಂಸದ ಮುನಿಸ್ವಾಮಿ (MP Muniswamy).
ಚಿಕ್ಕಬಳ್ಳಾಪುರದಲ್ಲಿ ನಡೆದ ರೈತರ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ಸಾವಿರ ಕೋಟಿ ಹಣ ತಂದು ಅಭಿವೃದ್ಧಿ ಮಾಡಿದವರನ್ನ ಬಿಟ್ಟು. ಬಿಗ್ ಬಾಸ್‌ಗೆ ಹೋಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನು ಹೊಗೋಳೋನಿಗೆ ಓಟ್ ಹಾಕ್ಬಿಟ್ರಿ. ಇನ್ನೆರಡು ದಿನ ಅಲ್ಲೇ ಬಿಡಬೇಕಿತ್ತು ಅವರನ್ನು. ನಾವು ವಿರೋಧ ಮಾಡ್ತಿದ್ದಂತೆ ವಾಪಸ್ ಓಡಿ ಬಂದಿದ್ದಾನೆʼʼ ಎಂದು ಹೇಳಿದರು.
ʻʻಮರಳು ದಂಧೆ, ಯಾವ ಅಕ್ರಮ, ಎಲ್ಲಿ ನೋಡಿದ್ರೂ ಯಾವ ಆಫೀಸ್‌ನಲ್ಲಿ ನೋಡಿದರೂ ಅವರ ಕಡೆಯವರೆ.. ಎಲ್ಲಿ ನೋಡಿದ್ರೂ ಕಾಸು, ಕಾಸು, ಕಾಸುʼʼ ಎಂದು ಪ್ರದೀಪ್ ಈಶ್ವರ್ ಮೇಲೆ ವಾಗ್ದಾಳಿ ನಡೆಸಿದರು.
ʻʻʻಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರೋರನ್ನು ಡಾಕ್ಟರ್ ಮಾಡ್ತೀನಿ ಅಂದೆ, ಎಷ್ಟು ಜನರನ್ನು ಡಾಕ್ಟರ್ ಮಾಡಿದ್ಯಪ್ಪ ಈಶ್ವರೂ..?ʼʼ ಎಂದು ಪ್ರಶ್ನಿಸಿದ ಮುನಿಸ್ವಾಮಿ, ಇಲ್ಲಿರೋ ಪ್ರದೀಪ್ ಈಶ್ವರ್‌ಗೆ ಪ್ರಶ್ನೆ ಮಾಡ್ತೀನಿ. ಸಿಎಂ ಅವರಿಂದ ಒಂದು ಕೋಟಿ ಅನುದಾನ ಪಡೆದ ಒಂದೇ ಒಂದು ಲೆಟರ್ ತೋರಿಸುʼʼ ಎಂದು ಸವಾಲು ಹಾಕಿದರು. ʻʻಒಂದೋ ನೀನು ತೋರಿಸು.. ಇಲ್ಲದಿದ್ದರೆ ಪ್ರತೀ ಕಚೇರಿಯಲ್ಲಿ ವಸೂಲಿ ಮಾಡ್ತಿರೋದನ್ನು ನಾನು ತೋರಿಸ್ತೇನೆ. ನೀನು ಕೂಡಲೇ ನಿನ್ನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕುʼʼ ಎಂದರು.
ʻʻವಿಧಾನಸಭೆಗೆ ಇವತ್ತು ಚುನಾವಣೆ ನಡೆದ್ರೂ 135 ಸ್ಥಾನ ಬಿಜೆಪಿ ಗೆಲ್ಲುತ್ತೆ. ಚಿಕ್ಕಬಳ್ಳಾಪುರದಲ್ಲಿ ಲಕ್ಷ ಮತಗಳಿಂದ ಸುಧಾಕರ್ ಗೆಲ್ತಾರೆʼʼ ಎಂದು ಹೇಳಿದ ಮುನಿಸ್ವಾಮಿ, ʻʻನಮ್ಮ ಪ್ರಧಾನಿ ಮೋದಿ ಮಾಡಿದ ಯೋಜನೆ ಇಂದು ಇಲ್ಲಿ ಎಲ್ಲರ ಕೈ ಹಿಡೀತಿದೆ. ಅಭಿವೃದ್ಧಿ ಮಾಡಿದವರನ್ನ ಬಿಟ್ಟು, ಅವನ್ಯಾರೋ ಕೈ ಹಿಡಿದ್ರಿʼʼ ಎಂದು ಮತ್ತೆ ಹೇಳಿದರು.
ʻʻಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಅವರು ತಂದಿದ್ದ ಕಾನೂನು ಜಾತಿ. ಆದರೆ ಮೋದಿ ತಂದ ಯಾವುದೇ ಯೋಜನೆಯಲ್ಲಿ ನೀವು ಯಾವ ಜಾತಿ ಅಂತ ಕೇಳಲಿಲ್ಲ. ಬೆಂಗಳೂರು ಅಭಿವೃದ್ಧಿ ಮಾಡಿದವರು ಕೆಂಪೇಗೌಡರು. ಕೆಂಪೇಗೌಡರಿಗೆ ಅವಮಾನ ಮಾಡಿದವರಿಗೆ ನೀವು ಓಟ್ ಹಾಕಿದ್ದೀರಿʼʼ ಎಂದು ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ: BJP Protest : ರೈತರಿಗೆ 7 ಗಂಟೆ ಕರೆಂಟ್ ಕೊಡದಿದ್ದರೆ ವಿದ್ಯುತ್ ಕಚೇರಿಗಳಿಗೆ ಬೀಗ: ಬೊಮ್ಮಾಯಿ
ನಾವು ಊರಿಗೊಂದು ಆಸ್ಪತ್ರೆ ಮಾಡಿದ್ರೆ ಇವರು ಮದ್ಯದಂಗಡಿ ಮಾಡ್ತಾರೆ!
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕೆ. ಸುಧಾಕರ್ ಅವರು, ನಾನು ಊರಿಗೊಂದು ಆಸ್ಪತ್ರೆ ಮಾಡಿದರೆ ಇವರು ಊರಿಗೊಂದು ಮದ್ಯದಂಗಡಿ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.
ʻʻಚಿಕ್ಕಬಳ್ಳಾಪುರ ಮಂಚೇನಹಳ್ಳಿಯಲ್ಲಿ ತಾಯಿ ಮಗುವಿನ ಆಸ್ಪತ್ರೆ ಮಾಡಿಕೊಟ್ಟಿದ್ದೇನೆ. ವೈದ್ಯಕೀಯ ಕಾಲೇಜು ಬೇರೆ ಜಿಲ್ಲೆಗೆ ಹೋಗಬೇಕಿತ್ತು. ಆದರೆ ನಮ್ಮ ಜಿಲ್ಲೆಯ ಜನತೆಗೆ ತಂದು ಕೊಟ್ಟಿದ್ದೇನೆ. ಸಿದ್ಧವಾಗಿರೋ ಕಾಲೇಜು, ಆಸ್ಪತ್ರೆಯನ್ನು ಇನ್ನೂ ಉದ್ಘಾಟನೆ ಮಾಡಿಲ್ಲ. ಶಾಸಕ ಆಗಲು ನಿಮಗೆ ನಾಚಿಕೆ ಆಗಲ್ವಾ.?ʼʼ ಎಂದು ಶಾಸಕ ಪ್ರದೀಪ್ ಈಶ್ವರ್ ಅವರನ್ನು ಪ್ರಶ್ನೆ ಮಾಡಿದರು. ʻʻನಾನು ಮಾಡಿದ ಕೆಲಸಗಳನ್ನು ಇವರು ಹೋಗಿ ಟೇಪ್ ಕಟ್ ಮಾಡೋದು. ಅಷ್ಟೇ ಇವರ ಕೆಲಸʼʼ ಎಂದು ಸುಧಾಕರ್ ಕೆಂಡ ಕಾರಿದರು.
ನವೆಂಬರ್ 30ರೊಳಗೆ ಚಿಕ್ಕಮಗಳೂರಿಗೆ ಹಾಲು ಒಕ್ಕೂಟ ರಚಿಸಬೇಕು, ಇಲ್ಲದಿದ್ದರೆ ಡಿಸೆಂಬರ್‌ನಲ್ಲಿ ವಿಧಾನಸೌಧ ಚಲೋ ನಡೆಸುವುದಾಗಿ ಸುಧಾಕರ್ ಹೇಳಿದರು.