ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆಯ ಹಾರಮಕ್ಕಿ ಗ್ರಾಮದಲ್ಲಿ ಬೈರೇಗೌಡ ಎಂಬುವರಿಗೆ ಸೇರಿದ ಅಡುಗೆ ಮನೆ (Chikkamagaluru rain) ಸಂಪೂರ್ಣ ಜಖಂ ಆಗಿದೆ. ಬೈರೇಗೌಡ ಅವರ ಕುಟುಂಬದವರು ಅಡುಗೆ ಮಾಡುತ್ತಿದ್ದಾಗ ಮನೆಯ ಚಾವಣಿ ಕಳಚಿ ಬಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಸತತ ಮಳೆಗೆ ಕೆಲವು ಮನೆಗಳ ಗೋಡೆಗಳು ಕುಸಿತಗೊಂಡಿದೆ. ಗಬಗಲ್, ಕೂವೆ, ನಿಡುವಾನೆ, ಬಾಳೂರು, ಕೊಟ್ಟಿಗೆಹಾರ ಹಾಗೂ ಬಣಕಲ್, ಕೋಳೂರು, ಬೆಟ್ಟಗೆರೆ ಗ್ರಾಮಗಳ ಜನರು ಅಪಾಯದಲ್ಲೇ ದಿನಕಳೆಯುವಂತಾಗಿದೆ.
ಅಪಾಯದ ಮಟ್ಟ ಮೀರಿ ಹೇಮಾವತಿ ನದಿ ಹರಿಯುತ್ತಿದ್ದು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ಇರುವಂತಾಗಿದೆ. ಜತೆಗೆ ಕೊಟ್ಟಿಗೆಹಾರ-ಬಣಕಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೂ ತೊಡಕುಂಟಾಗಿದೆ.
ಧರೆಗುರುಳಿದ ಬೃಹತ್ ಮರದಿಂದ ಮನೆಗಳಿಗೆ ಹಾನಿ
ಮೂಡಿಗೆರೆ ತಾಲೂಕಿನ ದೇವನಗುಲು ಗ್ರಾಮದಲ್ಲಿ ಮರ ಬಿದ್ದ ಪರಿಣಾಮ ಬಾಬು ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಅಕ್ಕಪಕ್ಕದ ಗೋಡೆಗಳಿಗೂ ಹಾನಿಯಾಗಿದ್ದು, ಕುಸಿದು ಬೀಳುವ ಆತಂಕ ಎದುರಾಗಿದೆ.
ಇದನ್ನೂ ಓದಿ | ಮಳೆಗೆ ಮನೆ ಕುಸಿದು ಮಹಿಳೆ ಸಾವು