Site icon Vistara News

ಶೃಂಗೇರಿ ಶಾಸಕರ ವಿರುದ್ಧದ ಪ್ರಕರಣ ವಾಪಸ್‌: ಡಿ.ಎನ್‌. ಜೀವರಾಜ್‌ ದಾರಿತಪ್ಪಿಸಿದ್ದರು ಎಂದ ವಕೀಲ

shringeri mla td rajegowda challenges to jeevaraj

ಚಿಕ್ಕಮಗಳೂರು: ಆಸ್ತಿ ಖರೀದಿ ವೇಳೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟುಮಾಡುತ್ತಿದ್ದಾರೆ ಎಂದು ದಾಖಲಿಸಿದ್ದ ಪ್ರಕರಣವನ್ನು ವಾಪಸ್‌ ಪಡೆಯುವುದಾಗಿ ವಕೀಲ ವಿಜಯಾನಂದ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಾನಂದ, ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಸ್ತಿ ಖರೀದಿಯಲ್ಲಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ದೂರಲಾಗಿತ್ತು. ದಿವಂಗತ ಸಿದ್ದಾರ್ಥ್ ಅವರ ಕಾಫಿತೋಟ ಖರೀದಿ ಮಾಡಿದ್ದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ, ಡಿ.ಎನ್. ಜೀವರಾಜ್ ಅವರ ಆಮಿಷಕ್ಕೆ ಒಳಗಾಗಿ ದೂರು ನೀಡಿದ್ದೆ ಎಂದಿದ್ದಾರೆ.

ಜೀವರಾಜ್ ಅವರು ದೂರರ್ಜಿಯ ವಿವರಣೆ, ಪ್ರತಿಯನ್ನಾಗಲಿ ನನಗೆ ತೋರಿಸಿಲ್ಲ ಎಂದ ವಿಜಯಾಣಂದ, ಅವರ ಆಸ್ತಿ ಖರೀದಿ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಜೀವರಾಜ್ ರವರು ಬೀಸಿದ ಆಮಿಷದ ಬಲೆಗೆ ನಾನು ಬಲಿಯಾಗಿ ಸಹಿ ಮಾಡಿದ್ದೇನೆ. ನಾನು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರನ್ನು ವಾಪಸ್ ಪಡೆಯುತ್ತೇನೆ ಎಂದಿದ್ದಾರೆ.

ಈ ವಿವಾದದ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಎರಡು ದಿನದ ಹಿಂದೆ ಪ್ರತಿಕ್ರಿಯೆ ನೀಡಿದ್ದರು. ಸಿದ್ಧಾರ್ಥ ಅವರ ನಿಧನದ ನಂತರ, ಕಂಪನಿಯ ಸಾಲಗಳನ್ನು ತೀರಿಸಲು ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವೇಳೆ ಒಂದು ಸ್ಥಿರಾಸ್ತಿಯನ್ನು ಶಾಸಕ ಟಿ.ಡಿ. ರಾಜೇಗೌಡ ಖರೀದಿ ಮಾಡಿದ್ದಾರೆ. ಈ ವ್ಯವಹಾರದಲ್ಲಿ ನಮಗೆ ಯಾವುದೇ ಮೋಸ, ಅನ್ಯಾಯ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ | Threatening Phone Calls | ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡಗೆ ಜೀವ ಬೆದರಿಕೆ

Exit mobile version