Site icon Vistara News

Bison Attack : ಹಸು ಹುಡುಕಲು ಹೋದ ವ್ಯಕ್ತಿಯನ್ನು ಅಟ್ಟಾಡಿಸಿ ಕಾಡುಕೋಣ ದಾಳಿ

Man who went in search of cow attacked by bison

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡುಕೋಣ ಹಾವಳಿ (Bison Menace) ಮುಂದುವರಿದಿದೆ. ಹಸು ಹುಡುಕಲು ಹೋದಾಗ ವ್ಯಕ್ತಿಗೆ ಕಾಡುಕೋಣವು ದಾಳಿ (Bison Attack ) ಮಾಡಿದೆ. ಕೊಪ್ಪ ತಾಲೂಕಿನ ಅತ್ತಿಕುಡಿಗೆಯ ನೇರಳೆ ಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಭಾಕರ್‌ (45) ಕಾಡುಕೋಣ ತಿವಿತಕ್ಕೆ ಒಳಗಾದವರು.

ಪ್ರಭಾಕರ್‌ ಅವರನ್ನು ಓಡಿಸಿಕೊಂಡು ಬಂದು ಕಾಡುಕೋಣ ದಾಳಿ ಮಾಡಿದೆ. ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆನ್ನು, ತೊಡೆ, ಹೊಟ್ಟೆಯ ಭಾಗಕ್ಕೆ ಕೋಣ ತಿವಿದಿದ್ದು, ಗಂಭೀರ ಗಾಯಗೊಂಡಿರುವ ಪ್ರಭಾಕರ್‌ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಮಂಗಳೂರಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Road Accident : ಬೈಕ್‌ಗೆ ಕಾರು ಡಿಕ್ಕಿ; ವಾಟರ್‌ ಮ್ಯಾನ್‌ ಸಾವು

ರಸ್ತೆಯಲ್ಲಿ ಅಡ್ಡ ನಿಂತ ಕಾಡುಕೋಣ ಹಿಂಡು

ಈ ಹಿಂದೆ ಫೆ.16ರಂದು ಸುಮಾರು 15ಕ್ಕೂ ಅಧಿಕ ಕಾಡುಕೋಣಗಳು ರಸ್ತೆಯ ಪಕ್ಕದಲ್ಲಿ (Bison at Road Side) ನಿಂತು ಆತಂಕ ಮೂಡಿಸಿತ್ತು. ಚಿಕ್ಕಮಗಳೂರು ತಾಲೂಕಿನ (Chikkamagaluru News) ಬೆಟ್ಟದ ಮರಡಿ ಗ್ರಾಮದಲ್ಲಿ ಕಾಡು ಕೋಣಗಳ ಹಿಂಡು ರಸ್ತೆ ಪಕ್ಕದಲ್ಲಿ ಬಂದು ನಿಂತಿತ್ತು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು.

ಒಂದು ಕಡೆ ಕಾಡಾನೆಗಳ ಕಾಟದ ನಡುವೆ ಕಾಡೆಮ್ಮೆಗಳ ಕಾಟದಿಂದ ಜನರು ಕಂಗೆಡುವಂತಾಗಿತ್ತು. ಕಾಡಿನ ಭಾಗದಿಂದ ಇಳಿದು ಬಂದಿರುವ ಈ ಕಾಡುಕೋಣಗಳು ನಗರ ಪ್ರದೇಶದತ್ತ ಬರುತ್ತಿರುವುದರಿಂದ ಜನರಿಗೆ ಆತಂಕ ಹೆಚ್ಚಿಸಿತ್ತು. ಇದು ರಸ್ತೆಯಲ್ಲೇ ಸಾಗುವ ಅಪಾಯವಿರುವುದರಿಂದ ಯಾವ ಸಮಯದಲ್ಲಿ ಯಾರ ಮೇಲೆ ದಾಳಿ ಮಾಡುತ್ತೋ ಎಂಬ ಭಯದಲ್ಲಿ ಜನ ಇದ್ದರು. ಈ ಭಾಗದಲ್ಲಿ ಪದೇಪದೆ ಕಾಡು ಕೋಣಗಳ ದಂಡು ಪ್ರತ್ಯಕ್ಷವಾಗುತ್ತಿದ್ದರಿಂದ , ತೋಟದ ಕೆಲಸ ಹಾಗೂ ಇತರ ಕೆಲಸಗಳಿಗೂ ಹೋಗಲು ಜನರು ಭಯ ಪಡುವಂತಾಗಿತ್ತು.

ಹಿಂಡು ಹಿಂಡಾಗಿ ಬರುತ್ತಿರುವ ಕಾಡುಕೋಣಗಳನ್ನು ಓಡಿಸಲು ಪ್ರಯತ್ನ ಮಾಡಿದ ಸ್ಥಳೀಯರು ಅದರಲ್ಲಿ ಸಣ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದ್ದರು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಈ ಕಾಡುಕೋಣಗಳೇ ನೇರಳೆ ಕಟ್ಟೆ ಗ್ರಾಮಕ್ಕೂ ಬಂದಿರಬಹುದು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version