ಚಿಕ್ಕಮಗಳೂರು: ಕಾಮಗಾರಿ ಮುಗಿದರೂ ರಸ್ತೆ ಬಂದ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದ ಬಿಜೆಪಿ ಸದಸ್ಯರ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಪೂರ್ಣಗೊಂಡಿದ್ದರೂ ಶಾಸಕರಿಂದ ಉದ್ಘಾಟನೆ ಆಗುವವರೆಗೆ ಬಂದ್ ಆಗಿರಲಿ ಎಂದು ಇರಿಸಿದ್ದ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ.
ಕಳಸ ತಾಲೂಕಿನ ಮಾವಿನಹೊಲ ಗ್ರಾಮದಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಕ್ತಾಯವಾಗಿತ್ತು. ಆದರೆ ರಸ್ತೆಯನ್ನು ಶಾಸಕ ಎಂ.ಪಿ. ಕುಮಾರಸ್ವಾಮಿಯವರೇ ಉದ್ಘಾಟನೆ ಮಾಡಬೇಕೆಂದು ಬಿಜೆಪಿ ಸದಸ್ಯರು ಬಯಸಿದ್ದರು. ಅದಕ್ಕಾಗಿ ರಸ್ತೆಗೆ ಬೃಹತ್ ಬಂಡೆಗಳನ್ನು ಇಟ್ಟು, ಬ್ಯಾರಿಕೇಡ್‌ಗೆ ಬೀಗ ಹಾಕಿಟ್ಟಿದ್ದರು.
ಕಾಮಗಾರಿ ಮುಗಿದು ಒಂದು ತಿಂಗಳು ಕಳೆದರೂ ರಸ್ತೆಯನ್ನು ಬಂದ್ ಮಾಡಲಾಗಿದ್ದರಿಂದ, ಜನರಿಗೆ ಅನಾನುಕೂಲವಾಗಿತ್ತು. ಮಾವಿನಹೊಲ-ಮಣ್ಣಿನಪಾಲ್-ಕವನಹಳ್ಳ ಸಂಪರ್ಕ ಬಂದ್ ಆಗಿತ್ತು. ಈ ರಸ್ತೆ ಮೂಲಕ ಕ್ರಮಿಸಬಹುದಾದ ಕೇವಲ 6 ಕಿಲೋಮೀಟರ್ ದೂರವನ್ನು 40 ಕಿಲೋಮೀಟರ್ ಸುತ್ತಿ ಸಂಚರಿಸಬೇಕಿತ್ತು.
ಹೀಗಾಗಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಸ್ಥಳೀಯರು ತಾವೇ ಹೊಸ ಕಾಂಕ್ರಿಟ್ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬೃಹತ್ ಬಂಡೆಗಳನ್ನು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ| ತಾವೇ ಕರೆಸಿಕೊಂಡ ಇನ್ಸ್‌ಪೆಕ್ಟರನ್ನು ತೆಗಳಿದ ಶಾಸಕ: ಎಂ.ಪಿ. ಕುಮಾರಸ್ವಾಮಿ ಹೇಳಿಕೆ ಕುತೂಹಲ