Site icon Vistara News

Chakravarti Soolibele : ಸೂಲಿಬೆಲೆ ನಮೋಭಾರತ್‌ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ನಿಂದ ವಿರೋಧ

Chakravarti soolibele speach at Chikkamagaluru

ಚಿಕ್ಕಮಗಳೂರು: ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Soolibele) ಅವರ ನೇತೃತ್ವದಲ್ಲಿ ಚಿಕ್ಕಮಗಳೂರಿನ (Chikkamagaluru News) ವಿಜಯನಗರದಲ್ಲಿ ಆಯೋಜಿಸಲಾದ ನಮೋಭಾರತ್‌ (Namo Bharat) ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಕಾರ್ಯಕರ್ತರಿಂದ (Congress activists protest) ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ, ಪ್ರತಿಭಟನೆಯ ನಡುವೆಯೇ ಕಾರ್ಯಕ್ರಮ ನಡೆದಿದೆ.

ನಮೋ ಭಾರತ್‌ ಕಾರ್ಯಕ್ರಮವನ್ನು ಚಿಕ್ಕಮಗಳೂರಿನ ವಿಜಯನಗರ ಬಡಾವಣೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಬಿಜೆಪಿಯವರಿಂದ ಪ್ರತಿರೋಧ ವ್ಯಕ್ತವಾಯಿತು.

ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೇ ಕಾಂಗ್ರೆಸ್‌ನ ಹತ್ತಾರು ಕಾರ್ಯಕರ್ತರು ಧಾವಿಸಿದ್ದು, ಚಕ್ರವರ್ತಿ ಅವರಿಗೆ ಕಪ್ಪು ಬಾವುಟ ತೋರಿಸಿದರು. ಈ ವೇಳೆ ಅವರನ್ನು ಪೊಲೀಸರು ತಡೆದರು. ಕಾಂಗ್ರೆಸ್ ಕಾರ್ಯಕರ್ತರು ಮಹಡಿ ಮೇಲೆ ನಿಂತು ಬಾವುಟ ಪ್ರದರ್ಶಿಸಿದ್ದಲ್ಲದೆ, ರಸ್ತೆಗೂ ಬಂದು ಪ್ರತಿಭಟಿಸಿದರು. ಅವರ ಆಕ್ರೋಶ ಮಾಜಿ ಸಚಿವ ಸಿ.ಟಿ. ರವಿ ಅವರ ಮೇಲೂ ತಿರುಗಿತ್ತು.

Chakravarti Soolibele

ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಇದರ ನಡುವೆಯೇ ವೇದಿಕೆಯಲ್ಲಿದ್ದ ಸಿ.ಟಿ. ರವಿ ಅವರು ಕೂಡಾ ವೇದಿಕೆಯಿಂದ ಕೆಳಗೆ ಇಳಿದುಬಂದು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರ ಆಕ್ರೋಶ ಯಾವ ಮಟ್ಟಿಗೆ ಇದೆ ಎಂದರೆ ಕೆಲವು ಬಿಜೆಪಿ ಕಾರ್ಯಕರ್ತರು ಲೈಟ್ ಕಂಬ ಹತ್ತಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುಡುಕಿದರು. ಒಂದು ಹಂತದಲ್ಲಿ ಪೊಲೀಸರು-ಬಿಜೆಪಿಗರ ಮಧ್ಯೆ ಮಾತಿನ ಚಕಮಕಿ, ನೂಕಾಟ-ತಳ್ಳಾಟವೂ ನಡೆಯಿತು.

ಇದನ್ನೂ ಓದಿ : Chakravarthy Sulibele: ಖರ್ಗೆ ʼಅಯೋಗ್ಯʼ ಹೇಳಿಕೆ; ಚಕ್ರವರ್ತಿ ಸೂಲಿಬೆಲೆಗೆ ಬಂಧನ ಭೀತಿ

ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ವೇದಿಕೆಯ ಹಿಂಬದಿಯಲ್ಲಿ ಬಂದು ಗದ್ದಲವೆಬ್ಬಿಸಿದರು. ಆಗಲೂ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಕೊನೆಗೆ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು.

ಅದಾದ ಬಳಿಕ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಕಾರ್ಯಕ್ರಮ ಮುಂದುವರಿಯಿತು. ಸೂಲಿಬೆಲೆ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.

Exit mobile version