Site icon Vistara News

ಕರ್ನಾಟಕ ಯಾರ ಫಾದರ್‌ ಮನೆ ಪ್ರಾಪರ್ಟಿ ಅಲ್ಲ: M.B. ಪಾಟೀಲ್‌ ತವರಲ್ಲೇ ಮಾತಾಡುತ್ತೇನೆ ಎಂದು ಸವಾಲೆಸೆದ C.T. ರವಿ

CT Ravi

ಚಿಕ್ಕಮಗಳೂರು: ಅಲ್ಪಸಂಖ್ಯಾತರನ್ನು ಓಲೈಸುವ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌ ಎಂದು ಸಂಬೋಧಿಸಿದ್ದನ್ನು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಸಿ. ಟಿ. ರವಿ ಈ ರೀತಿ ಮಾತನಾಡುವುದನ್ನು ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಬೆದರಿಕೆ ಹಾಕ್ತಾರಾ? ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯೋಲ್ಲ.

ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ. ಪಾಳೆಗಾರ ಮನೆತನದವನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ವೋಟ್. ಈ ಪಾಳೇಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು.

ಸಿದ್ರಾಮುಲ್ಲಾಖಾನ್ ಎಂದೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಮೈ ಉರಿ ಹತ್ತಿದೆ. ಹೀಗೆ ಉರಿ ಹತ್ತುತ್ತೆ ಎಂದು ಗೊತ್ತಿದ್ದರೆ 10 ವರ್ಷ ಮೊದಲೇ ಹೇಳುತ್ತಿದ್ದೆ. ನೀವು ಪ್ರಧಾನಿಗೆ ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದಿರಿ. ಸಿದ್ರಾಮುಲ್ಲಾಖಾನ್ ಅನ್ನೋದು ಬೈಗುಳವಾ? ಅದು ಬೈಗುಳ ಅಲ್ಲಾ. ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದು. ಬಿ.ಎಸ್‌. ಯಡಿಯೂರಪ್ಪ ಅವರನ್ನು ರಾಜಾಹುಲಿ ಎನ್ನುತ್ತಾರೆ, ಸಿದ್ದರಾಮಯ್ಯ ಅವರನ್ನು ಹುಲಿಯಾ ಎನ್ನುತ್ತಾರೆ. ಇದು ಹಾಗೇ ಒಂದು ಬಿರುದು. ಹಿಂದೂಗಳಿಗೆ ಅನ್ಯಾಯ ಮಾಡಿದ್ದೆ, ಟಿಪ್ಪು ಜಯಂತಿ ಪರ ಇದ್ದೆ ಎಂದು ಕೊಟ್ಟ ಬಿರುದು ಎಂದು ಭಾವಿಸುತ್ತಾರೆ ಎಂದು ತಿಳಿದಿದ್ದೆ ಎಂದರು.

ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ಚಾಲೆಂಜ್ ಸ್ವೀಕರಿಸುತ್ತೀನಿ, ನಿಮ್ಮೂರಿಗೆ ಬರುತ್ತೀನಿ. ನಾನು ಏನು ಹೇಳಬೇಕು ಅಂದುಕೊಂಡಿದ್ದೇನೆಯೋ ಅದನ್ನ ನಿಮ್ಮೂರಿನಲ್ಲೇ ಹೇಳುತ್ತೇನೆ. ನಿಮ್ಮ‌ ಮುಖದ ಎದುರೇ ಹೇಳುತ್ತೇನೆ.

ನಿಮ್ಮಷ್ಟು ಶ್ರೀಮಂತಿಗೆ ನನ್ನ ಬಳಿ ಇಲ್ಲ ನನಗೆ ಗೊತ್ತು. ಆದರೆ, ನಿಮ್ಮ ಶ್ರೀಮಂತಿಕೆ ದರ್ಪವನ್ನು ಜನರ ಮೇಲೆ ತೋರಿಸಬೇಡಿ. ನಿಮ್ಮ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯೋಲ್ಲ. ಕರ್ನಾಟಕ ಯಾರ ಅಪ್ಪನ ಸ್ವತ್ತೂ ಅಲ್ಲ. ಯಾರಾದರೂ ಫಾದರ್ ಮನೆ ಪ್ರಾಪರ್ಟಿ ಅಂತ ತಿಳಿದುಕೊಂಡಿದ್ದರೆ ಅದು ತಪ್ಪು ಎಂದರು.

ಇದನ್ನೂ ಓದಿ | CT Ravi | ಸಿದ್ರಾಮುಲ್ಲಾ ಹೇಳಿಕೆಗೆ ಕಾಂಗ್ರೆಸ್‌ ಕೆಂಡ, ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ; ತಾಕತ್ತಿದ್ದರೆ ರಸ್ತೆ ದಾಟಿ ಎಂದ ಬಿಜೆಪಿ

Exit mobile version