Site icon Vistara News

C T Ravi | ದತ್ತ ಪೀಠದ ದಾರಿಯಲ್ಲಿ ಮೊಳೆಗಳನ್ನು ಚೆಲ್ಲಿದ ಪ್ರಕರಣದಲ್ಲಿ ಇಬ್ಬರ ಬಂಧನ ಪ್ರಶಂಸಾರ್ಹ: ಸಿ.ಟಿ. ರವಿ

CT Ravi's advice to Araga Jnanendra If there is any doubt about the definition of love jihad we will tell you

ಚಿಕ್ಕಮಗಳೂರು: ದತ್ತ ಜಯಂತಿ ಸಂದರ್ಭದಲ್ಲಿ ಬಾಬಾಬುಡನ್‌ ಗಿರಿಯ ದತ್ತ ಪೀಠಕ್ಕೆ ಬರುವ ಭಕ್ತರ ವಾಹನ ಅಪಘಾತಕ್ಕೀಡಾಗಬೇಕೆನ್ನುವ ದುರುದ್ದೇಶದಿಂದ ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೋಲೀಸರ ಕ್ರಮ ಅತ್ಯಂತ ಸ್ವಾಗತಾರ್ಹ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ (C T Ravi) ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಂದುಗಳ ಧಾರ್ಮಿಕ ಆಚರಣೆಯಾದ ದತ್ತ ಜಯಂತಿ ಸಂದರ್ಭದಲ್ಲಿ ಇಂತಹ ಕೃತ್ಯವನ್ನು ನಡೆಸಿ ಹಿಂದು ಮತ್ತು ಮುಸ್ಲಿಮರ ನಡುವೆ ಇರುವ ಸಾಮರಸ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿದೆ. ಈ ಕೃತ್ಯದ ಹಿಂದೆ ಇನ್ನೂ ಕೆಲವು ಕಾಣದ ಕೈಗಳು ಕೆಲಸ ಮಾಡಿರುವ ಶಂಕೆಯಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕೆಂದು ತಿಳಿಸಿದ್ದಾರೆ.

ಪ್ರತಿ ವರ್ಷ ಡಿಸೆಂಬರ್‌ನಲ್ಲಿ 3 ದಿನಗಳ ಕಾಲ ದತ್ತ ಜಯಂತಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ. ಈ ಬಾರಿ ದತ್ತ ಜಯಂತಿ ನಡೆದಿದ್ದನ್ನು ಸಹಿಸದ ಕೆಲವು ಹಿಂದು ವಿರೋಧಿ ಶಕ್ತಿಗಳು ಈ ಕೃತ್ಯ ನಡೆಸಿರುವ ಅನುಮಾನವಿದ್ದು, ಈ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದತ್ತ ಜಯಂತಿ ಸಮಯದಲ್ಲಿ ಕೈಮರದಿಂದ ಪೀಠದವರೆಗೆ ತಿರುವುಗಳಲ್ಲಿ ಕೆಲವೆಡೆ ಮೊಳೆಗಳನ್ನು ಎಸೆದಿರುವುದು ಕಂಡುಬಂದಿದ್ದು, ಇದರ ಹಿಂದೆ ಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶವಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೃತ್ಯವೆಸೆಗಿದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಡಿಕೆಶಿ-ಸಿದ್ದು ಒಗ್ಗಟ್ಟಿನ ಮಂತ್ರ: ಕುಷ್ಟಗಿಯಿಂದ ಸ್ಪರ್ಧೆಯಿಲ್ಲ ಎಂದು ಘೋಷಿಸಿದ ಸಿದ್ದರಾಮಯ್ಯ

Exit mobile version