ಚಿಕ್ಕಮಗಳೂರು: ಹಿಂದುಗಳನ್ನು ರಕ್ಷಣೆ ಮಾಡುವ ಸಲುವಾಗಿ ಮುಂದಿನ ಚುನಾವಣೆಯಲ್ಲಿ 25 ಪ್ರಖರ ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ.
ದತ್ತಪೀಠದ ದೇವಸ್ಥಾನದ ಬಾಗಿಲಲ್ಲಿ ಈ ಕುರಿತು ಸಂಕಲ್ಪ ಮಾಡಿದ ಪ್ರಮೋದ್ ಮುತಾಲಿಕ್, ದತ್ತಪೀಠ ಮುಕ್ತಿ, ಗೋಹತ್ಯೆ ನಿಲುಗಡೆ, ಮತಾಂತರ ಮುಕ್ತ, ಲವ್‍ಜಿಹಾದ್ ನಿಲ್ಲಿಸುತ್ತೇವೆ. ಬಿಜೆಪಿಯವರು 25 ವರ್ಷದಿಂದ ದತ್ತಪೀಠದ ಹೋರಾಟದ ಲಾಭ ಪಡೆದಿದ್ದಾರೆ. ಬಿಜೆಪಿ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ಪ್ರಾಮಾಣಿಕತೆಗಾಗಿ, ಪಾರ್ಲಿಮೆಂಟ್-ವಿಧಾನಸಭೆಯಲ್ಲಿ ಹಿಂದುಗಳ ರಕ್ಷಣೆಗೆ. ಮೋದಿ-ಯೋಗಿ ಬಿಟ್ಟರೆ ಹಿಂದುಗಳ ಉಳಿವಿಗಾಗಿ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.
ಇವತ್ತು ಹಿಂದುಗಳು ರೌಡಿಶೀಟರ್ ಆಗಿದ್ದಾರೆ, ಗೂಂಡಾ ಆ್ಯಕ್ಟ್‍ನಲ್ಲಿ ಓಡಾಡುತ್ತಿದ್ದಾರೆ, ಅದನ್ನು ತೆಗೆಯುವ ಕೆಲಸ ಮಾಡುತ್ತಿಲ್ಲ. ಹಿಂದು ಕಾರ್ಯಕರ್ತರು ಕೊಲೆಯಾಗಿದ್ದಾರೆ, ಹಿಂದುತ್ವದ ಹೆಸರಲ್ಲಿ ಗೆದ್ದವರು ಹಿಂದುಗಳ ರಕ್ಷಣೆ ಮಾಡಲು ಆಗಲಿಲ್ಲ. ಹಾಗಾಗಿ, ಪ್ರಖರ ಹಿಂದುವಾದಿಗಳು, ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡಿ ಹಿಂದುತ್ವ ಉಳಿಸುತ್ತೇವೆ ಎಂದರು.
ಮುಂದಿನ ವರ್ಷದ ದತ್ತಪೀಠದ ಅಭಿಯಾನ ಕೊನೆ ಅಭಿಯಾನವಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಇದನ್ನೂ ಓದಿ | Tippu jayanthi | ಈದ್ಗಾ ಮೈದಾನ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆ ನಾಯಕ ಮುತಾಲಿಕ್‌ಗೆ ತಡೆ