ಚಿಕ್ಕಮಗಳೂರು: ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು (Women employee) ತಾನು ವಾಸಿಸುವ ವಸತಿಗೃಹಕ್ಕೆ ಕರೆಸಿಕೊಂಡು ಲೈಂಗಿಕ ಕಿರುಕುಳ (Sexual harrassment) ನೀಡಿದ ತಾಲೂಕು ವೈದ್ಯಾಧಿಕಾರಿಗೆ (Taluk health officer) ಹಿಗ್ಗಾಮುಗ್ಗಾ ಥಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ (Chikkamagaluru News) ಎನ್.ಆರ್. ಪುರ (NRPura Taluk health officer thrashed) ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿದು ಮುಖ-ಮೂತಿ ನೋಡದೆ ಚಚ್ಚಿದ್ದಾರೆ.
ಬಾಳೆಹೊನ್ನೂರಿನಲ್ಲಿ ವಾಸವಾಗಿರುವ ಎನ್.ಆರ್ ಪುರ ತಾಲೂಕು ಆರೋಗ್ಯಾಧಿಕಾರಿಯಾಗಿರುವ ಡಾ.ಎಲ್ಡೋಸ್ ಎಂಬವರೇ ಈ ರೀತಿಯಲ್ಲಿ ಹಲ್ಲೆಗೆ ಒಳಗಾದವರು.
ಡಾ. ಎಲ್ಡೋಸ್ ತಾಲೂಕು ಆರೋಗ್ಯಾಧಿಕಾರಿಗಳಿಗಾಗಿ ಬಾಳೆಹೊನ್ನೂರಿನಲ್ಲಿರುವ ಸರ್ಕಾರಿ ಅಸ್ಪತ್ರೆ ವಸತಿ ಗೃಹದಲ್ಲಿ ವಾಸವಾಗಿದ್ದ. ಅಲ್ಲಿನ ಆಸ್ಪತ್ರೆಯ ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು ಕರೆಸಿಕೊಂಡಿದ್ದ. ಇದು ಆಕೆಯ ಮನೆಯವರಿಗೆ ತಿಳಿದಿತ್ತು. ಆತ ಏನು ಮಾಡುತ್ತಾನೆ ಎಂದು ಗಮನಿಸುವುದಕ್ಕಾಗಿ ಅವರು ವಸತಿಗೃಹದ ಸುತ್ತ ಠಳಾಯಿಸುತ್ತಿದ್ದರು.
ಈ ನಡುವೆ, ಮನೆ ಕೆಲಸಕ್ಕೆಂದು ಕರೆಸಿಕೊಂಡಿದ್ದ ಡಿ ಗ್ರೂಪ್ ಸಿಬ್ಬಂದಿ ಮಹಿಳೆಯನ್ನು ಡಾ. ಎಲ್ಡೋಸ್ ಕೋಣೆಯೊಂದರಲ್ಲಿ ಕೂಡಿ ಹಾಕಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ.
ಈ ಸದ್ದು ಕೇಳಿದ ಆಕೆಯ ಮನೆಯವರು, ಸಂಬಂಧಿಕರು ಮನೆಯ ಕಡೆಗೆ ಓಡಿ ಬಂದಿದ್ದಾರೆ. ಈ ವೇಳೆ ಎಲ್ಡೋಸ್ ಹೊರಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಆತನ ಯತ್ನ ಫಲ ನೀಡಿಲ್ಲ. ಒಬ್ಬ ಯುವಕ ಅವನನ್ನು ಹಿಡಿದು ಚೆನ್ನಾಗಿ ಹಲ್ಲೆ ಮಾಡಿದ್ದಲ್ಲದೆ, ನೆಲಕ್ಕೆ ಉರುಳಿಸಿದ್ದ. ಈ ಸಂದರ್ಭದಲ್ಲಿ ಅವನ ಆಕ್ರೋಶ ನೋಡಿದ ಇತರರೇ ಆತನ ಕೈಯಿಂದ ಡಾಕ್ಟರ್‌ನನ್ನು ಬಿಡಿಸಿದರು.
ಟಿ.ಎಚ್.ಓ. ಡಾ. ಎಲ್ಡೋಸ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಆತನ ವಿರುದ್ಧ ಈಗ ಕೇಸ್ ದಾಖಲಾಗಿದೆ.
ಡಾ.ಎಲ್ಡೋಸ್ ವಿರುದ್ಧ ಈ ರೀತಿಯ ಅತಿರೇಕದ ನಡೆಗಳ ಆರೋಪ ಕೇಳಿಬರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಒಬ್ಬ ನರ್ಸ್‌ಗೆ ಹೊಡೆದ ಪ್ರಕರಣದಲ್ಲೂ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬ್ಬಂದಿಗಳನ್ನು ಮನೆಗೆ ಕರೆಸಿಕೊಳ್ಳುವುದೇ ಅಪರಾಧ
ಕೆಳಗಿನ ಸಿಬ್ಬಂದಿಗಳನ್ನು ಅಧಿಕಾರಿಗಳು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದೇ ಒಂದು ದೊಡ್ಡ ಅಪರಾಧ ಎಂದು ಸ್ಥಳೀಯರು ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಅಧಿಕಾರ, ಆಮಿಷದ ಮೂಲಕ ಹೆಣ್ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲು ಈ ಕ್ರಮ ಅವಕಾಶ ನೀಡುತ್ತದೆ. ಅಧಿಕಾರಿಗಳು ಬೇಕೆಂದರೆ ಬೇರೆಯವರನ್ನು ನೇಮಿಸಿಕೊಳ್ಳಲಿ. ಕೆಳ ಹಂತದ ಸಿಬ್ಬಂದಿಯನ್ನು ಅದರಲ್ಲೂ ಮಹಿಳೆಯರನ್ನು ಮನೆ ಕೆಲಸಕ್ಕೆ ಬಳಸಲು ಅವಕಾಶ ನೀಡಬಾರದು ಎಂದು ಮಹಿಳೆಯ ಮನೆಯವರೂ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Karwar News: ದಲಿತ ಮುಖಂಡನಿಂದ ಹಿಂದು ದೇವರ ಅವಹೇಳನ ಪ್ರಕರಣ; ವಿಡಿಯೊ ಮಾಡಿದ ಯುವಕನ ಮೇಲೆ ಹಲ್ಲೆ