ಚಿಕ್ಕಮಗಳೂರು: ಹಿಂದು ಶಬ್ದಕ್ಕೆ ಕೆಟ್ಟ ಅರ್ಥವಿದೆ ಎಂದಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, ಎರಡು ಬಾರಿ ಅವಾಚ್ಯ ಶಬ್ದವನ್ನೂ ಬಳಕೆ ಮಾಡಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯಲ್ಲಿ (Janasankalpa yatre) ಮಾತನಾಡಿದ್ದಾರೆ.
ಸಿ.ಟಿ. ರವಿ, ಕಾಂಗ್ರೆಸ್ ಹೇಳುತ್ತೆ ಹಿಂದೂ ಕೆಟ್ಟ ಶಬ್ದ ಎಂದು. ಸೈನಿಕರು ಭೇಟಿಯಾದರೆ ಜೈ ಹಿಂದ್ ಅನ್ನುತ್ತಾರೆ. ಮುಟ್ಹಾಳ ಕಾಂಗ್ರೆಸ್‌ಗೆ ಗೊತ್ತಾಗುವಂತೆ ಕೂಗಿ ಹೇಳಿ ಇದನ್ನು.
ವಿಜಯನಗರ ಸಾಮಾಜ್ರ್ಯ ಸ್ಥಾಪನೆಯಾಗಿದ್ದು ಹಿಂದು ರಕ್ಷಣೆಗಾಗಿ. ನಮಗೆ ಹಿಂದು ಮತ ಬೇಡ ಎಂದು ಅವರಿಗೆ ತಾಕತ್ತಿದ್ದರೆ ಹೇಳಲಿ. ನಿಜವಾಗಿ ಹಿಂದು ಎಂದು ಯಾರಾದರೂ ಗುರುತಿಸಿಕೊಂಡಿದ್ದರೆ ಅಂಥವರು ಕಾಂಗ್ರೆಸ್‌ಗೆ ಓಟ್ ಹಾಕಬಾರದು. ಹಿಂದು ಎನ್ನುವುದು ಕೆಟ್ಟ ಶಬ್ದ ಎಂದು ಅಪಪ್ರಚಾರ ಮಾಡುತ್ತಿರುವ ನಿಮ್ಮಂಥ ನಾಮರ್ದರಿಗೆ, ನಿಮ್ಮಂಥ ನಾಮರ್ದರಿಗೆ ಓಟ್ ಕೊಡುವುದಿಲ್ಲ ಎಂದು ನಾವು ಹೇಳಬೇಕು ಎಂದರು ವಾಗ್ದಾಳಿ ನಡೆಸಿದರು.
ರೈತ, ಸೈನಿಕ ಹಾಗೂ ಕಾರ್ಮಿಕ ನಮ್ಮ ದೇಶದ ಆಧಾರ ಎಂದು ಬಿಜೆಪಿ ಸರ್ಕಾರ ರೂಪಿಸಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ಅಂತಹ ಯೋಜನೆಗಳನ್ನು ರೂಪಿಸಿದೆ. ತನ್ನ ತಂದೆ ಯಾರು ಎಂಬ ಬಗ್ಗೆ ಅಪನಂಬಿಕೆ ಇರುವವರು ಸೈನಿಕರನ್ನ ಅನುಮಾನಿಸುತ್ತಾರೆ. ಸೈನಿಕರನ್ನೂ ಕಾಂಗ್ರೆಸ್‌ನವರು ಅನುಮಾನಿಸುತ್ತಾರೆ. ಬಾಂಬ್ ಹಾಕುವವರಿಗೆ ಬಿರಿಯಾನಿ ಕೊಡುವುದು ಕಾಂಗ್ರೆಸ್ ನೀತಿ ಎಂದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ. ರವಿ, ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದುಗಳ ಹತ್ಯೆ ಆಗುತ್ತದೆ. ನಾವು ಬಂದರೆ ಹಿಂದು ಅರ್ಚಕರ ನೇಮಕವಾಗುತ್ತದೆ. ಎಲೆಕ್ಷನ್ ಬಂದಾಗ ನಾನು ಹಿಂದು. ಆಮೇಲೆ ಕುಂಕುಮ ಕಂಡರೆ ಆಗಲ್ಲ ಎನ್ನುತ್ತಾರೆ. ಈಗ ಇರುವವರು ಇಟಲಿ ಗಾಂಧಿಗಳು ಎಂದರು.
ಸರ್ಕಾರ ಬಂದರೆ ಮುಸ್ಲಿಂ ಸಿಎಂ ಮಾಡುತ್ತೇವೆ ಎಂದ ಜೆಡಿಎಸ್ ಮಾತಿಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಅವರಪ್ಪನಾಣೆ ಅಧಿಕಾರಕ್ಕೆ ಬರಲ್ಲ. ಮುಸ್ಲಿಮರಿಗೆ ತುಪ್ಪವನ್ನು ನೆಕ್ಕಲು ಅಲ್ಲ, ಮೂಸೋದಕ್ಕೂ ಬಿಡಲ್ಲ. ಟಿಪ್ಪು ಯೂನಿವರ್ಸಿಟಿ ಮಾಡಿ ಜಿಹಾದಿ ಹೇಳಿ ಕೊಡುತ್ತಾರಂತೆ. ಟಿಪ್ಪು ಯೂನಿವರ್ಸಿಟಿಗೆ ಕಲ್ಲು ಹಾಕೋದಕ್ಕೂ ಬಿಡಲ್ಲ. ಮೈಸೂರಿಗೆ ನೀವು ಮಾಡ್ತಿರೋ ಮೋಸಕ್ಕೆ ಜನ ಉತ್ತರ ಕೊಡ್ತಾರೆ ಎಂದು ಸಿ.ಟಿ. ರವಿ ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮನಮೋಹನ್ ಸಿಂಗ್ ವಿದೇಶಕ್ಕೆ ಹೋದರೆ ಮರ್ಯಾದೆ ಹೋಗ್ತಿತ್ತು. ಇವತ್ತು ನರೇಂದ್ರ ಮೋದಿಯನ್ನ ಜಗತ್ತೇ ಮೆಚ್ಚಿ ಕೊಂಡಾಡುತ್ತಿದೆ. ಅಡಿಕೆ ಬೆಳೆಗಾರರ ಸಮಸ್ಯೆಗೆ ಕಾರಣ ಕಾಂಗ್ರೆಸ್ ಸರ್ಕಾರ. ಅಡಿಕೆ ಸಮಸ್ಯೆಗೆ ಸುಪ್ರೀಂ ಕೋರ್ಟ್‌ಗೆ ಹೋಗಲು ಇದೇ ಕಾಂಗ್ರೆಸ್ ಕಾರಣ. ಅಡಿಕೆ ರಕ್ಷಣೆ ನನ್ನ ಜವಾಬ್ದಾರಿ ಎಂದು ಮೋದಿ ಹೇಳಿದ್ದರು. ಅದೇ ರೀತಿ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಉಳಿಸಲು ಹೋರಾಡುತ್ತಿದೆ. ಕಸ್ತೂರಿ ರಂಗನ್ ವರದಿಗೆ ಕಾರಣ ಇದೇ ಕಾಂಗ್ರೆಸ್. ಇವತ್ತು ಕಸ್ತೂರಿ ರಂಗನ್ ವರದಿ ಪರವಾಗಿ ಮಾತನಾಡುತ್ತಿದೆ ಕಾಂಗ್ರೆಸ್ ಎಂದು ಆರೋಪ ಮಾಡಿದರು.
ಇದನ್ನೂ ಓದಿ | ಸವಿಸ್ತಾರ ಅಂಕಣ | ಮುಸ್ಲಿಂ ಪ್ರತ್ಯೇಕತೆ ಹೋಗಲಾಡಿಸಲು ಇದು ಪರಿಹಾರ ಆಗಬಲ್ಲದೇ?