Site icon Vistara News

ಬೆಟ್ಟದ ಮೇಲಿನ ದೇವೀರಮ್ಮ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನಸಾಗರ

deviramma

ಚಿಕ್ಕಮಗಳೂರು: ಇಲ್ಲಿಗೆ ಸಮೀಪದ ಬಿಂಡಿಗ ದೇವೀರಮ್ಮ ದೇವಾಲಯದ ಬಾಗಿಲು ತೆರೆದಿದ್ದು, ದೇವಿಯ ದರ್ಶನ ಪಡೆಯಲು ಬೆಟ್ಟದ ತುಂಬಾ ಭಕ್ತರ ನೂಕುನುಗ್ಗಲು ನಡೆದಿದೆ.

ಬೆಟ್ಟದ ಮೇಲಿರುವ ಈ ದೇವಿ ದೇವಾಲಯದ ಬಾಗಿಲು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವೀರಮ್ಮನನ್ನು ಕಣ್ತುಂಬಿಸಿಕೊಳ್ಳಲು ಭಕ್ತಸಾಗರ ಕಾತರವಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವೀರಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಈ ವರ್ಷ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ. ಮುಂಜಾನೆಯ ದರ್ಶನಕ್ಕಾಗಿ ರಾತ್ರಿಯಿಂದಲೂ ಭಕ್ತ ಸಮೂಹ ಬೆಟ್ಟವನ್ನೇರುತ್ತಿದೆ. ಕಲ್ಲು ಮುಳ್ಳಿನ ಹಾದಿಯನ್ನು ಲೆಕ್ಕಿಸದೇ ಬರಿಗಾಲಿನಲ್ಲಿ ಬೆಟ್ಟವನ್ನು ಜನ ಏರುತ್ತಿದ್ದಾರೆ.

ಈ ಬಾರಿ ಇದೇ ಬೆಟ್ಟದ ಸನಿಹದಲ್ಲಿರುವ ಮುಳ್ಳಯ್ಯನಗಿರಿ ಆಸುಪಾಸಿನಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಅರಳುವ ನೀಲಕುರಿಂಜಿ ಹೂ ಕೂಡ ಅರಳಿದ್ದು, ಇದನ್ನೂ ನೋಡಲು ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದರು. ಈ ಬಾರಿ ದೀಪಾವಳಿಯ ಸಾಲು ರಜೆಗಳು ಕೂಡ ಆಗಮಿಸಿರುವುದರಿಂದ, ಭಕ್ತಾದಿಗಳ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳವಾಗಿದೆ.

Exit mobile version