ಚಿಕ್ಕಮಗಳೂರು/ಬೆಂಗಳೂರು: ಚಿಕ್ಕಮಗಳೂರಿನ ಕಡೂರು (Kadur Murder Case) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರ್ಶನ್ ಎಂಬಾತನ ಬರ್ಬರ ಹತ್ಯೆ (Murder Case) ಆಗಿತ್ತು. ಇದೀಗ ಪೊಲೀಸರು ಕೊಲೆಯ ಸೀಕ್ರೆಟ್ ರಿವಿಲ್ (chikkamagaluru News) ಮಾಡಿದ್ದಾರೆ. ಮಧುಗಿರಿ ಮೂಲದ ದರ್ಶನ್‌ನನ್ನು ಆತನ ಸ್ನೇಹಿತರೇ ಕತ್ತು ಸೀಳಿದ್ದರು.
ಕೊಲೆ ಯತ್ನ ಆರೋಪದಡಿ ಬೇಲ್ ಪಡೆದಿದ್ದ ದರ್ಶನ್ ಕಡೂರು ತಾಲೂಕಿನ ಮಾಡಾಳು, ಹೊಸೂರು ಗ್ರಾಮದ ಅಜ್ಜಿಯ ಮನೆಯಲ್ಲಿ ವಾಸವಿದ್ದ. ದರ್ಶನ್ ಜತೆಗೆ ಪುಡಿ ರೌಡಿಗಳಾದ ಮನೋಜ್, ಕೌಶಿಕ್ ಕೂಡ ತಂಗಿದ್ದರು. ದರ್ಶನ್ ಜತೆಗಿದ್ದುಕೊಂಡೆ ಕೊಲೆಗೆ ಸ್ಕೆಚ್ ಹಾಕಿದ್ದರು. ಒಂದು ತಿಂಗಳ ಕಾಲ ದರ್ಶನ್ ಅಜ್ಜಿಯ ಮನೆಯಲ್ಲಿ ಮನೋಜ್, ಕೌಶಿಕ್ ಒಂದೇ ತಟ್ಟೆಯಲ್ಲಿ ಊಟ ಮಾಡಿ ಮುಹೂರ್ತವನ್ನು ಇಟ್ಟಿದ್ದರು.
ದರ್ಶನ್ ಮುಂದೊಂದು ದಿನ ನಮಗಿಂತ ಹೆಸರು ಮಾಡುತ್ತಾನೆ ಎನ್ನುವ ಭಯದೊಂದಿಗೆ ಈಗಲೇ ನಮಗೆ ದರ್ಶನ್ ಅವಾಜ್ ಹಾಕುತ್ತಾನೆ ಎಂದು ಸಿಟ್ಟಾಗಿದ್ದರು. ಹೀಗಾಗಿ ಬೆಂಗಳೂರಲ್ಲಿ ಕೂತು ಕೌಶಿಕ್, ಮನೋಜ್, ಕಿರಣ್, ರಾಜು ಕೊಲೆಗೆ ಪ್ಲ್ಯಾನ್ ಮಾಡಿದ್ದರು. ಅಂದರಂತೆ ಜನವರಿ 15ರ ಮಧ್ಯರಾತ್ರಿ ಮಾಡಳು ಹೊಸೂರು ಗ್ರಾಮಕ್ಕೆ ಬಂದು ದರ್ಶನ್‌ನನ್ನು ಬಾ ಮಗ ಎಣ್ಣೆ ಕುಡಿಯೋಣ ಎಂದು ಕರೆಸಿಕೊಂಡಿದ್ದರು.
ದರ್ಶನ್ ಕುಡಿದು ಟೈಟ್ ಆದ್ಮೇಲೆ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದರು. ಇತ್ತ ಕೊಲೆ ನಡೆದು 12 ಗಂಟೆಯಲ್ಲೇ ಕಡೂರು ಪೊಲೀಸರು ಎಲ್ಲ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದರು.
ಇದನ್ನೂ ಓದಿ: Blackmail Case : ಬೆತ್ತಲೆ ಫೋಟೊ ಕಳಿಸಿ ಹಣಕ್ಕೆ ಡಿಮ್ಯಾಂಡ್; ಕಿರಾತಕರ ಸೆರೆಹಿಡಿದ ಸಿಸಿಬಿ
ಹತ್ಯೆಯಾಗಬಹುದೆಂದು ಸೂಚನೆ ಕೊಟ್ಟಿದ್ರಾ ಸಿಸಿಬಿ ಅಧಿಕಾರಿಗಳು!
ಕಡೂರು ಕೊಲೆ ಕೇಸ್‌ನ ಮತ್ತೊಂದು ಆಯಾಮವು ಇದೆ. ಸ್ನೇಹಿತರೊಟ್ಟಿಗೆ ಮಾತುಕತೆ ಜತೆಗೆ ಎಣ್ಣೆ ಪಾರ್ಟಿಗೆ ಹೋಗಿದ್ದ ದರ್ಶನ್ ಶವವಾಗಿಬಿಟ್ಟಿದ್ದ. ಹಳೇ ದ್ವೇಷವೇ ಕೊಲೆಗೆ ಕಾರಣವಾಗಿತ್ತಾ? ಕೊಲೆಯಾಗಬಹುದು ಎಂಬ ಸೂಚನೆ ಪೊಲೀಸರಿಗೆ ಮುಂಚೆಯೇ ಇತ್ತಾ, ಹಾಗಾದರೆ ಪೊಲೀಸರ ನಿರ್ಲಕ್ಷ್ಯವೇ ಕೊಲೆಗೆ ಕಾರಣವಾಯಿತಾ ಎಂಬ ಅನುಮಾನವೂ ಇದೆ. ಇಷ್ಟಕ್ಕೂ ಕಡೂರಿನಲ್ಲಿ ನಡೆದ ದರ್ಶನ್ ಕೊಲೆಗೂ ಬೆಂಗಳೂರಿಗೂ ಸಂಬಂಧ ಇಲ್ಲಿದೆ ನೋಡಿ.
ಶ್ರೀಧರ ಮತ್ತು ಶ್ರೀಕಾಂತ ಇವರಿಬ್ಬರು ಅಣ್ಣ-ತಮ್ಮಂದಿರು. ಒಡಹುಟ್ಟಿದವರಾದರೂ ಹುಟ್ಟು ದ್ವೇಷಿಗಳಂತೆ ವರ್ತಿಸುತ್ತಿದ್ದರು. ಕಳೆದ ಜನವರಿ 21ರಂದು ನಗರದ ಡಿಎಸ್ ಮ್ಯಾಕ್ಸ್ ರಸ್ತೆ ಬಳಿ ಶ್ರೀಕಾಂತ ಅಲಿಯಾಸ್ ಕಾಂತ ಮತ್ತು ಶರತ್ ಅಲಿಯಾಸ್ ಸೊಳ್ಳೆ ಇಬ್ಬರು ಕಾರಿನಲ್ಲಿ ಹೋಗುತ್ತಿದ್ದರು. ಹಿಂದಿನಿಂದ ಕಾರಿನಲ್ಲಿ ವೇಗವಾಗಿ ಬಂದಿದ್ದ ಶ್ರೀಧರ್, ಶ್ರೀಕಾಂತನ ಕಾರಿಗೆ ಗುದ್ದಿ ಅಟ್ಯಾಕ್ ಮಾಡಿದ್ದ. ಆದರೆ ಶ್ರೀಧರನ ಕಾರೇ ಪಲ್ಟಿಯಾದ ಕಾರಣಕ್ಕೆ ಎಲ್ಲರೂ ವಿಚಲಿತರಾಗಿ ಹಲ್ಲೆ ನಡೆಸಲು ಆಗಿರಲಿಲ್ಲ. ನಂತರ ಶ್ರೀಕಾಂತನ ಜತೆಯಲ್ಲಿದ್ದ ಶರತ್ @ ಸೊಳ್ಳೆ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಶ್ರೀಧರನ ವಿರುದ್ಧ ಕೊಲೆ ಯತ್ನ ಎಂದು ದೂರು ನೀಡಿದ್ದ.
ಈ ಘಟನೆಯ ನಂತರ ಆರೋಪಿಗಳಿಗೆ ಬಲೆಬೀಸಿದ ಸಿಸಿಬಿ ಪೊಲೀಸರು ಶ್ರೀಧರನನ್ನು ಬಂಧಿಸಿದ್ದರು. ಶ್ರೀಧರನ ಸಹಚರರ ಮೇಲೆ ಶ್ರೀಕಾಂತನ ಕಡೆಯವರು ಹಲ್ಲೆ ನಡೆಸಬಹುದು ಎಂಬ ಸಂಶಯದ ಮೇಲೆ ಸಿಸಿಬಿ ಇನ್ನುಳಿದ ಆರೋಪಿಗಳನ್ನು ಬಂಧಿಸಿ ಎಂದು ಆರ್.ಆರ್ ನಗರ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎನ್ನಲಾಗುತ್ತಿದೆ. ಆದರೆ ಇವರೆಗೂ ಹಲ್ಲೆಗೆ ಯತ್ನಿಸಿದ್ದ ಶ್ರೀಧರನ ಸಹಚರರನ್ನು ಬಂಧಿಸಿರಲಿಲ್ಲ. ಈಗ ಅದರಲ್ಲಿ ಒಬ್ಬನಾಗಿದ್ದ ದರ್ಶನ್‌ನ್ನು ಕಡೂರಿನಲ್ಲಿ ಹತ್ಯೆಯಾಗಿದ್ದ. ಮಾತುಕತೆಗೆಂದು ತಡರಾತ್ರಿ ದರ್ಶನ್‌ನನ್ನು ಕರೆದೊಯ್ದ ಹುಡುಗರು ಹತ್ಯೆ ಮಾಡಿದ್ದು, ಅವರೆಲ್ಲೂ ಶ್ರೀಕಾಂತನ ಕಡೆಯ ಹುಡುಗರು ಎಂಬ ಅನುಮಾನವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ