Site icon Vistara News

Murder Case : ಆಸ್ತಿಗಾಗಿ ಸಹೋದರನ ಕಣ್ಣಿಗೆ ಖಾರದ ಪುಡಿ ಎರಚಿ, ಕೊಚ್ಚಿ ಸಾಯಿಸಿದ ರಾಕ್ಷಸಿ ಸಹೋದರಿಯರು!

murder case

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ (Murder Case) ಅಮಾನವೀಯ ಘಟನೆಯೊಂದು ನಡೆದಿದೆ. ಹಣ- ಆಸ್ತಿಗಾಗಿ ಜತೆಯಲ್ಲಿದ್ದವರೇ ಹೇಗೆ ರಾಕ್ಷಸರಾಗುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆಸ್ತಿಗಾಗಿ ಸ್ವಂತ ಸಹೋದರನನ್ನೇ ಮೂವರು ಸಹೋದರಿಯರು ಕೊಂದು ಹಾಕಿದ್ದಾರೆ. ರಾಘವೇಂದ್ರ (40) ಮೃತ ದುರ್ದೈವಿ.

ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ಘಟನೆ ನಡೆದಿದೆ. ರಾಘವೇಂದ್ರ ಮಂಚದ ಮೇಲೆ ಗಾಢ ನಿದ್ರೆಯಲ್ಲಿದ್ದರು. ಬೆಳಗಿನ ಜಾವ ಎಚ್ಚರವಾಗಿ ಮೈ ಮುರಿಯುತ್ತಾ ಎದ್ದೇಳಲು ಕಣ್ಣು ಉಜ್ಜಿಕೊಳ್ಳಲು ಮುಂದಾಗಿದ್ದರು. ಆದರೆ ಇದಕ್ಕೂ ಮೊದಲೇ ಸಹೋದರನನ್ನು ಸುತ್ತವರಿದಿದ್ದ ನರಹಂತಕಿ ಸಹೋದರಿಯರು ಆಯುಧಗಳನ್ನು ಹಿಡಿದು ನಿಂತಿದ್ದರು.

ರಾಘವೇಂದ್ರ ಎದ್ದೊಡನೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಆತ ಏನಾಯಿತು ಎಂದು ಯೋಚಿಸುವ ಮುನ್ನವೇ ಸಿಕ್ಕ ಸಿಕ್ಕ ಕಡೆಗಳಲ್ಲಿ ಚಾಕುವಿನಿಂದ ಕೊಚ್ಚಿ ಹಾಕಿದ್ದಾರೆ. ಇವರ ರಾಕ್ಷಸಿ ಕೌರ್ಯಕ್ಕೆ ರಾಘವೇಂದ್ರ ಚಿರಾಡುತ್ತಾ, ಪ್ರಾಣ ಉಳಿಸಿಕೊಳ್ಳಲು ಆಗದೆ ಕ್ಷಣ ಮಾತ್ರದಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ.

ಕೊಲೆಯಾದ ರಾಘವೇಂದ್ರ ಹಾಗೂ ಆಸ್ತಿಗಾಗಿ ಹಂತಕರಾದ ರಕ್ತ ಸಂಬಂಧಿಗಳು

ಆಸ್ತಿಗಾಗಿ ಕುಟುಂಬಸ್ಥರ ಜತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ಆಸ್ತಿ ಕೈ ತಪ್ಪಬಾರದೆಂದು ಯೋಜಿಸಿದ ಮೂವರು ಸಹೋದರಿಯರು ಬಾವನ ಜತೆಗೂಡಿ ಸಹೋದರ ರಾಘವೇಂದ್ರನನ್ನು ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಕೊಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕಂಡು ಪೊಲೀಸರೇ ತಬ್ಬಿಬ್ಬು ಆಗಿದ್ದರು. ಆಸ್ತಿಗಾಗಿ ಅಮಾನುಷವಾಗಿ ಅಣ್ಣನನ್ನೇ ಕೊಂದ ನಾಲ್ವರುನ್ನು ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: KPSC Exams : ಕೆಪಿಎಸ್‌ಸಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಸಂಚು ಪತ್ತೆ

ಶಿವಮೊಗ್ಗ : ಭದ್ರಾವತಿ ಶಾಸಕ (Bhadravathi MLA) ಬಿ.ಕೆ ಸಂಗಮೇಶ್ವರ (BK Sangameshwara) ಅವರ ಪುತ್ರನ ಹತ್ಯೆಗೆ ಸಂಚು (Murder attempt) ಎಸಗಿರುವುದು ಪತ್ತೆಯಾಗಿದೆ. ಶಾಸಕನ ಪುತ್ರ ಬಸವರಾಜ್ ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.

ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್‌, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್‌ ರೂಪಿಸಿದ್ದ ಕುರಿತು ಆರೋಪವಿದೆ.

ಮುಬಾರಕ್‌ ಅಲಿಯಾಸ್‌ ಡಿಚ್ಚಿ ಮುಬಾರಕ್‌ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ನೀಡಿದ್ದ. ಭದ್ರಾವತಿ ಗಾಂಧಿ ಸರ್ಕಲ್‌ ಬಳಿ ಬಸವರಾಜ್ ಅವರನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಮುಬಾರಕ್ ಕಳುಹಿಸಿದ್ದ. ಸುಫಾರಿ ಪಡೆದಿದ್ದ ಟಿಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಗುತ್ತಿಗೆದಾರ ಸುನಿಲ್‌ ಎಂಬವರು ದೂರು ನೀಡಿದ್ದಾರೆ. ಟಿಪ್ಪುವನ್ನು ಗುತ್ತಿಗೆದಾರ ಸುನಿಲ್‌ ಭೇಟಿಯಾದಾಗ ಆತನಿಗೆ ಕೂಡ ಡಿಚ್ಚಿ ಮುಬಾರಕ್‌ ಕರೆ ಮಾಡಿದ್ದಾನೆ. ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಮುಬಾರಕ್ ಹೇಳಿದ್ದಾನೆ. ಭದ್ರಾವತಿ ಹಳೆ‌‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version