ಚಿಕ್ಕಮಗಳೂರು: ಪ್ರೇಮಿ ಜೊತೆ ಸೇರುವುದಕ್ಕಾಗಿಯೇ (Illicit relationship) ಪತ್ನಿಯೊಬ್ಬಳು ಪತಿಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ತಂದು ಕೆರೆಗೆ ಎಸೆದು ಸಾಯಿಸಿದ (Murder Case) ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ಈಕೆ ಪಾವನ ಎಂಬ ಹೆಸರಿಟ್ಟುಕೊಂಡು ಪಾತಕದ ಕೆಲಸ ಎಸಗಿದ್ದಾಳೆ. ನವೀನ್ (28) ಪತ್ನಿಯ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯ ಮೇಲೆ ಅನುಮಾನ ಮೂಡಿತ್ತು.
ಪ್ರೇಮಿ ಸಂಜಯ್ ಎಂಬಾತನ ಜೊತೆ ಅನೈತಿಕ ವ್ಯವಹಾರ ಇಟ್ಟುಕೊಂಡಿದ್ದ ಪಾವನಳ ಕಣ್ಣಾಮುಚ್ಚಾಲೆ ಆಟಕ್ಕೆ ಪತಿ ನವೀನ್ ಅಡ್ಡಗಾಲಾಗುತ್ತಿದ್ದ. ಆತನನ್ನು ನಿವಾರಿಸಿಕೊಳ್ಳಲು ಪ್ರೇಮಿ ಸಂಜಯ್ ಜೊತೆ ಸೇರಿ ಪತಿಯನ್ನು ಮುಗಿಸಲು ಪಾವನ ಸಂಚು ಹೂಡಿದ್ದಳು. ಊಟದಲ್ಲಿ ನಿದ್ರೆ ಮಾತ್ರೆ (sleeping pills) ಹಾಕಿ ಜ್ಞಾನ ತಪ್ಪಿಸಿದ್ದಳು. ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ ಬೈಕಿನಲ್ಲಿ ತಂದು ಕೆರೆಗೆ ಎಸೆದಿದ್ದಳು. ಪೊಲೀಸರ ತನಿಖೆಯಲ್ಲಿ ಪಾವನ ಮತ್ತು ಸಂಜಯ್ ಈ ವಿಚಾರ ಬಾಯಿಬಿಟ್ಟಿದ್ದಾರೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Murder Attempt : JDS ಮುಖಂಡನ ಕೊಲೆಗೆ ಪ್ರಾಣ ಸ್ನೇಹಿತನಿಂದಲೇ ಸುಪಾರಿ! ಬೆಂಗಳೂರಿಂದ ಬಂದಿದ್ದರು KILLERS