ಚಿಕ್ಕಮಗಳೂರು: ಅತ್ಯಾಚಾರದ ಆರೋಪದ (Physical Abuse) ಮೇಲೆ ಯೋಗ ಗುರು ಬಂಧನವಾಗಿದೆ. ಪ್ರದೀಪ್ ಉಲ್ಲಾಳ್ (53) ಬಂಧಿತ ಆರೋಪಿ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರದೀಪ್ ಉಲ್ಲಾಳ್ ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ. ಯೋಗ ತರಬೇತಿಗೆಂದು ಕ್ಯಾಲಿಫೋರ್ನಿಯಾದಿಂದ ಮಹಿಳೆಯೊಬ್ಬರು ಬಂದಿದ್ದರು.
ಕಳೆದ 4 ವರ್ಷದಿಂದಲೂ ಯೋಗ ಗುರು ಜತೆ ಮಹಿಳೆ ಸಂಬಂಧ ಹೊಂದಿದ್ದರು. ಬೇರೆ ಮಹಿಳೆಯರ ಜತೆಯೂ ಗುರುವಿನ ಸಂಬಂಧ ತಿಳಿದ ಮಹಿಳೆ ಜಗಳವಾಡಿದ್ದರು. ವಿದೇಶಿ ಮಹಿಳೆಯಿಂದ ಯೋಗ ಗುರು ಪ್ರದೀಪ್ ಸುಮಾರು 20 ಲಕ್ಷ ರೂ. ಹಣ ಕಿತ್ತಿದ್ದ ಎಂಬ ಆರೋಪವು ಇದೆ. ಇದೇ ವಿಚಾರವಾಗಿ ಯೋಗ ಗುರು ಹಾಗು ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿತ್ತು.
ವಿದೇಶಿ ಮಹಿಳೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Gold Smuggling: ಗುದದ್ವಾರದಲ್ಲಿತ್ತು ಕೋಟಿ ಮೌಲ್ಯದ ಚಿನ್ನ; ಶ್ರೀಲಂಕಾದಿಂದ ಬಂದವರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲಾಕ್
ಅರ್ಥವಾಗದ ಪಾಠವನ್ನು ಹೇಳಿಕೊಡುವುದಾಗಿ ವಿದ್ಯಾರ್ಥಿನಿಯನ್ನು ಕರೆಸಿ ಅತ್ಯಾಚಾರವೆಸಗಿದ ಉಪನ್ಯಾಸಕ
ಶಿವಮೊಗ್ಗ : ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಉಪನ್ಯಾಸಕನೊಬ್ಬ ಮದುವೆ ಆಗುವುದಾಗಿ (Physical Abuse) ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದ ಖಾಸಗಿ ಕಾಲೇಜಿನ ಉಪನ್ಯಾಸಕನಾಗಿರುವ ಪುನೀತ್ ಬಂಧಿತ ಆರೋಪಿಯಾಗಿದ್ದಾನೆ.
ಅರ್ಥವಾಗದ ವಿಷಯದ ಬಗ್ಗೆ ಅರ್ಥ ಮಾಡಿಸಿಕೊಡ್ತೇನೆ ಅಂತೇಳಿ ವಿದ್ಯಾರ್ಥಿನಿ ಜತೆ
ಸ್ನೇಹ ಬೆಳೆಸಿದ್ದ. ಸ್ನೇಹ ನಂತರ ಮದುವೆಯಾಗುವುದಾಗಿ ನಂಬಿಸಿದ್ದ ಉಪನ್ಯಾಸಕ ತದನಂತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಸದ್ಯ ಅತ್ಯಾಚಾರ ಕುರಿತು ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಉಪನ್ಯಾಸಕ ಪುನೀತ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಲೈಂಗಿಕ ದೌರ್ಜನ್ಯ; ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೇಲೆ ಎಫ್‌ಐಆರ್
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೇಲೆ ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 47 ವರ್ಷದ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು ಬಂದಿದೆ. ಬೆಂಗಳೂರಿನ ಪೈ ವಿಸ್ತಾ ಹೋಟೆಲ್ 2023 ರ ಜೂನ್ ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯದ ಫೋಟೊ, ಸೆಲ್ಫಿ, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ IPC 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್ ಕುಮಾರ್ ಪುತ್ತೂರು ವಿಧಾನಸಭಾ ಚುನಾವಣೆಗೆ ಹಿಂದುತ್ವದ ಹೆಸರಿನಲ್ಲಿ ಬಂಡಾಯ ಸ್ಪರ್ಧೆಯಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟು ಬಂಡಾಯ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಗೆ ಮಹಿಳೆ ಫಿದಾ ಆಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ಮುಖಂಡ ಅರುಣ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾರೆ. ಪುತ್ತೂರಿನ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ಸಿ ಕೋರ್ಟ್‌ನಿಂದ ಜಾಮೀನು ನೀಡಿದೆ. ಅರುಣ್ ಪುತ್ತಿಲ ತಮ್ಮ ವಕೀಲರ ಮೂಲಕ ನ್ಯಾಯಲಯಕ್ಕೆ ಹಾಜರಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ