ಚಿಕ್ಕಮಗಳೂರು: ಜಿಲ್ಲೆಯಲ್ಲಿ (Chikkamagaluru News) ಬೆಳಗ್ಗೆ ಬೆಳಗ್ಗೆಯೇ ಭೀಕರ ರಸ್ತೆ ದುರಂತವೊಂದು (Road accident) ಸಂಭವಿಸಿದೆ. ವಿಪರೀತ ವೇಗದಲ್ಲಿ ಸಾಗುತ್ತಿದ್ದ ಬಸ್ (Overspeading bus) ಒಂದು ನಿಯಂತ್ರಣ ತಪ್ಪಿ ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳ (Bus Rams into Children) ಮೇಲೆಯೇ ಹರಿದಿದೆ. ಒಮ್ಮಿಂದೊಮ್ಮೆಗೇ ನುಗ್ಗಿದ ಬಸ್ಸಿನಡಿ ಸಿಲುಕಿದ ಮಕ್ಕಳಲ್ಲಿ ಇಬ್ಬರ ಸ್ಥಿತಿ (Two childrens seriuosly injured) ಗಂಭೀರವಾಗಿದೆ.
ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಈ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳು ಮತ್ತು ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳು ಶಾಲೆಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಆಗ ಎಂಡಿಎಸ್ ಎಂಡ್ ಸನ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ಎಂದಿನಂತೆ ಬಂದಿತ್ತು. ಆದರೆ, ಅತಿಯಾದ ವೇಗದಲ್ಲಿದ್ದ ಪರಿಣಾಮವಾಗಿ ಮಕ್ಕಳ ಎದುರು ನಿಲ್ಲಬೇಕಾಗಿದ್ದ ಬಸ್ ಅವರ ಮೇಲೆಯೇ ಹರಿದಿದೆ.
ಕೊನೆಗೆ ಈ ಬಸ್ ಪಕ್ಕದ ಮನೆಗಳತ್ತ ಧಾವಿಸಿದ್ದು ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಚಾವಣಿ ಸಂಪೂರ್ಣ ಹಾನಿಯಾಗಿದೆ. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದರು.
ಈ ನಡುವೆ ಬಸ್ಸಿನಡಿ ಸಿಲುಕಿ ಕೆಲವು ಮಕ್ಕಳು ಗಾಯಗೊಂಡಿದ್ದು, ಅವರ ಪೈಕಿ ತುಳಸಿ (15), ನಿವೇದಿತ (14) ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅವರನ್ನು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ನಡುವೆ ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಭಾಗದಲ್ಲಿ ಖಾಸಗಿ ಬಸ್‌ಗಳು ವಿಪರೀತ ವೇಗದಿಂದ ಸಂಚರಿಸುತ್ತಿದ್ದು, ಇದರ ಬಗ್ಗೆ ಈಗಾಗಲೇ ಹಲವು ಬಾರಿ ದೂರು ನೀಡಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Murder Case : ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಕೊಂದ ಮಹಿಳೆ! ಇವಳೆಂಥಾ ಹಂತಕಿ!
ರಸ್ತೆ ಬದಿಯಲ್ಲಿ ನಿಂತಿದ್ದ ಮಗುವನ್ನು ಬಲಿ ಪಡೆದ ಟ್ರ್ಯಾಕ್ಟರ್
ದೊಡ್ಡಬಳ್ಳಾಪುರ: ಬೆಂಗಳೂರು ಮತ್ತು ಹೊರವಲಯದಲ್ಲಿ ಅಪಘಾತಗಳು (Road accident) ಒಂದೇ ಸಮನೆ ಹೆಚ್ಚುತ್ತಿವೆ, ಜೀವ ಬಲಿಯೂ ಜಾಸ್ತಿಯಾಗುತ್ತಿದೆ ಎಂಬ ಆಪಾದನೆಗಳ ನಡುವೆಯೇ ದೊಡ್ಡ ಬಳ್ಳಾಪುರದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಪುಟ್ಟ ಮಗುವೊಂದನ್ನು (Child dead) ಟ್ರ್ಯಾಕ್ಟರ್ ಬಲಿ ಪಡೆದಿದೆ.
ದೊಡ್ಡಬಳ್ಳಾಪುರದ ಡಿಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಘಟನೆಯಲ್ಲಿ ಮೃತಪಟ್ಟ ಮಗುವಿನ ಹೆಸರು ದರ್ಶನ್. ಕೇವಲ ಮೂರು ವರ್ಷ. ತೀವ್ರವಾಗಿ ಗಾಯಗೊಂಡ ಮಗು ಮತ್ತು ಅಜ್ಜಿ ಇಬ್ಬರನ್ನೂ ಸಮೀಪದ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಅಜ್ಜಿ ಕಮಲೇಶ್ ದೇವಿ ಅವರಿಗೂ ಗಂಭೀರ ಗಾಯಗಳಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿರುವ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.