Site icon Vistara News

Shobha Karandlaje : ಉಡುಪಿಯಲ್ಲಿ ಶೋಭಾ ಕರಂದ್ಲಾಜೇನೇ ಗೆಲ್ಲೋದು ಅಂದ್ರು ಬಿಎಸ್‌ವೈ; ಟಿಕೆಟ್‌ ಫಿಕ್ಸ್‌?

Shobha Karandlaje BS Yediyurappa

ಶಿವಮೊಗ್ಗ/ಚಿಕ್ಕಮಗಳೂರು: ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ (Udupi-Chikkamagaluru Constituency) ಶೋಭಾ‌ ಕರಂದ್ಲಾಜೆ (Shobha Karandlaje) ಅವರು ಕಳೆದ ಬಾರಿ 3.5 ಲಕ್ಷ ಮತಗಳಿಂದ ಗೆದ್ದಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ (BS Yediyurappa). ಶೋಭಾ ಕರಂದ್ಲಾಜೆಗೆ ಟಿಕೆಟ್‌ ಕೊಡುತ್ತಿಲ್ಲವಂತೆ (Parliament Elections 2024) ಎಂಬ ಸುದ್ದಿಗಳು, ಅವರ ವಿರುದ್ಧ ನಡೆಯುತ್ತಿರುವ ಗೋ ಬ್ಯಾಕ್‌ ಪತ್ರ ಚಳುವಳಿಗಳ ನಡುವೆ ಬಿಎಸ್‌ವೈ ಅವರ ಹೇಳಿಕೆ ಗಮನ ಸೆಳೆದಿದೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರು, ಶೋಭಾ ಕರಂದ್ಲಾಜೆ ವಿರುದ್ಧ ಪಿತೂರಿ ಮತ್ತು ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿರುವುದು ಯಾರು ಎನ್ನುವುದು ಎಲ್ಲರಿಗೂ ಗೊತ್ತು. ಅವರು ಯಾವುದಕ್ಕೂ ಧೃತಿಗೆಡುವುದಿಲ್ಲ., ಕೇಂದ್ರ ಸಚಿವೆಯಾಗಿ ಬಹಳ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ನರೇಂದ್ರ ಮೋದಿ ಅವರಿಂದಾಗಿ ದೇಶ, ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ನಾವು 28ಕ್ಕೆ 28 ಗೆಲ್ಲಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ, ಅದೇ ವಾತಾವರಣ ಇದೆ ಎಂದು ಹೇಳಿದ ಬಿ.ಎಸ್‌. ಯಡಿಯೂರಪ್ಪ ಅವರು, ಮಂಡ್ಯದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ.. ಇಂದು-ನಾಳೆಯಲ್ಲಿ ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Shobha Karandlaje: ಭ್ರಷ್ಟಾಚಾರ ಮಾಡಿಲ್ಲ, ಯಾರ ಹಣದಲ್ಲೂ ಚಹಾ ಕುಡಿದಿಲ್ಲ: ಶೋಭಾ ಕರಂದ್ಲಾಜೆ ಭಾವುಕ

Shobha Karandlaje : ಮೂರು ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆ

ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮೂರು ದಿನದಲ್ಲಿ ಬಿಡುಗಡೆ ಆಗಬಹುದು ಎಂದುಕೊಂಡಿದ್ದೇನೆ ಎಂದು ಬಿಎಸ್‌ವೈ ಹೇಳಿದರು.

Shobha Karandlaje : ನಾನೂ ಆಕಾಂಕ್ಷಿ ಎಂದ ಪ್ರಮೋದ್‌ ಮಧ್ವರಾಜ್‌

ʻʻನಾನೊಬ್ಬ ಟಿಕೆಟ್ ಆಕಾಂಕ್ಷಿ. ನನಗೆ ಅರ್ಹತೆ ಇದ್ದರೆ ಟಿಕೆಟ್ ಕೊಡಿ. ಹಿಂದುಳಿದ ವರ್ಗದ ಮೀನುಗಾರ ಸಮುದಾಯಕ್ಕೆ ಟಿಕೆಟ್ ಕೊಡಿʼʼ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗೆ ಹಕ್ಕೊತ್ತಾಯ ಮಂಡಿಸಿದ್ದಾರೆ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಬಿಜೆಪಿಗೆ ಬಂದ ಪ್ರಮೋದ್ ಮಧ್ವರಾಜ್.

ʻʻನನಗೆ ಜನಪ್ರಿಯತೆ ಇದ್ದರೆ, ಸರ್ವೆಗಳಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿ ಇದ್ದರೆ, ಕಾರ್ಯಕರ್ತರು ನನ್ನ ಹೆಸರನ್ನು ಸೂಚಿಸಿದರೆ ನನಗೆ ಟಿಕೆಟ್ ಕೊಡಿ. ಟಿಕೆಟ್ ಸಿಗದಿದ್ದರೂ ನನ್ನ ಜೀವಮಾನ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆʼʼ ಎಂದಿದ್ದಾರೆ ಪ್ರಮೋದ್‌.

ʻʻಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೇಳುವ ಎಲ್ಲಾ ಹಕ್ಕಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಹಕ್ಕಿದೆʼʼ ಎಂದು ಹೇಳಿದ ಅವರು, ಪತ್ರ ಚಳುವಳಿಯಲ್ಲಿ ನನಗೆ ನಂಬಿಕೆ ಇಲ್ಲ. ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ನುಣುಚಿಕೊಂಡರು.

Shobha Karandlaje ಶೋಭಕ್ಕನ ಟಿಕೇಟೇ ಪತನ ಎಂದು ಗೇಲಿ ಮಾಡಿದ ಎಂ.ಬಿ ಪಾಟೀಲ್‌

ವಿಜಯಪುರ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ ಸಚಿವ ಎಂ.ಬಿ. ಪಾಟೀಲ್‌. ಶೋಭಾ ಕರಂದ್ಲಾಜೆ ಅವರ ಕ್ಷೇತ್ರದಲ್ಲೆ ಕಾರ್ಯಕರ್ತರು ಟಿಕೇಟ್ ಕೊಡಬೇಡಿ ಅನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನ ಅಲ್ಲ, ಶೋಭಕ್ಕ ಟಿಕೇಟ್ ಪತನ ಆಗುತ್ತೆ ಎಂದಿದ್ದಾರೆ ಅವರು.

ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಸೋಲಿಸಿ ನಮಗೆ 135 ಸೀಟ್ ಕೊಟ್ಟಿದ್ದಾರೆ. ಅವರಿಗೆ ಆಪರೇಶನ್ ಕಮಲ ಮಾಡದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಮ್ಮ ಯಾವ ಶಾಸಕರೂ ಪಕ್ಷ ಬಿಟ್ಟು ಬಿಜೆಪಿಗೆ ಹೋಗೋದಿಲ್ಲ. ಹಾಗಿದ್ದರೆ ಶೋಭಕ್ಕ‌ 50 ಸೀಟ್ ಎಲ್ಲಿಂದ ತರ್ತಾರಂತೆ ಕೇಳಿ ಎಂದರು ಎಂ.ಬಿ. ಪಾಟೀಲ್‌. ಶೋಭಾ ಕರಂದ್ಲಾಜೆ ಅವರು ಮೊದಲು ತಮ್ಮ ಟಿಕೆಟ್‌ ಗಟ್ಟಿ ಮಾಡಿಕೊಳ್ಳಲಿ ಎಂದರು.

ಕಾಂಗ್ರೆಸ್ ಕಮ್ಯೂನಲ್ ಹಾಗೂ ಕ್ರಿಮಿನಲ್‌ ಪಕ್ಷ ಎಂಬ ಹಿರಿಯ ನಾಯ ಸಿ.ಟಿ ರವಿ ಹೇಳಿಕೆ‌ಗೂ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ ಪಾಟೀಲ್, ಸಿ.ಟಿ ರವಿ ಅವರನ್ನು ಇದೇ ಕಾರಣಕ್ಕೆ ಜನ ಸೋಲಿಸಿದ್ದಾರೆ ಎಂದರು.

Exit mobile version