Site icon Vistara News

ಹೂಳೆತ್ತದೆ ಹಣ ಡ್ರಾ ಮಾಡಿದ್ದ ಇಂಜಿನಿಯರ್‌ ಸಸ್ಪೆಂಡ್‌

ಇಂಜಿನಿಯರ್‌ ಸಸ್ಪೆಂಡ್‌

ಚಿಕ್ಕಮಗಳೂರು: 37 ಕೆರೆಗಳ ಹೂಳೆತ್ತದೆ ಖಾತೆಯಿಂದ ಹಣ ಹೊರಕ್ಕೆ ಪಡೆದಿದ್ದ ಇಂಜಿನಿಯರ್‌ ಸಸ್ಪೆಂಡ್‌ ಆಗಿದ್ದಾರೆ. ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಎಇಇ ಮಂಜುನಾಥ್‍ ಹಣ ಡ್ರಾ ಮಾಡಿ ಆಂಆನತಾಗಿರುವವರು.

37 ಕೆರೆಗಳ ಅಭಿವೃದ್ಧಿಗೆ 23 ಲಕ್ಷ ರೂ. ಬಿಡುಗಡೆಯಾಗಿತ್ತು. ಬಳಕೆ ಮಾಡದಿದ್ದರೆ ಹಣ ವಾಪಸ್‌ ಹೋಗುತ್ತದೆ ಎಂದು ಮಾರ್ಚ್ 15ರಂದೇ ಇಂಜಿನಿಯರ್‌ ಹಣ ಡ್ರಾ ಮಾಡಿದ್ದರು ಎನ್ನಲಾಗಿದೆ. ಕೆಲಸವನ್ನೇ ಮಾಡದ ಗುತ್ತಿಗೆದಾರನ ಖಾತೆಗೆ ಇಂಜಿನಿಯರ್ ಮಂಜುನಾಥ್ ಹಣ ಜಮೆ ಮಾಡಿದ್ದರು.

ದಾಖಲೆಗಾಗಿ 37 ಕೆರೆಗಳಲ್ಲಿ 20 ಕೆರೆಗಳ ಬಳಿ ಜೆಸಿಬಿ, ಟ್ರ್ಯಾಕ್ಟರ್ ನಿಲ್ಲಿಸಿ ಫೋಟೊ ತೆಗೆಸಿದ್ದರು. ಉಳಿದ 17 ಕೆರೆಗಳ ಬಳಿಯೂ ಹೋಗದೆ, ಕೆರೆ ಬಳಿ ಸ್ಥಳಿಯರು ತೋಡಿದ್ದ ಗುಂಡಿಯನ್ನು ತಾವೇ ತೋಡಿದ್ದು ಎಂದು ಬಿಲ್‌ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ | ಹಿಜಾಬ್‌ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ನೋಟಿಸ್‌ ಜಾರಿ: ಅಮಾನತು ಸಾಧ್ಯತೆ

ಈ ಕುರಿತು ಅನುಮಾನಗೊಂಡಜಿಲ್ಲಾ ಪಂಚಾಯಿತಿ ಸಿಇಓ, ಸ್ಥಳ ಮಹಜರು ವರದಿ ನೀಡುವಂತೆ ತಾಪಂ ಇಓ ನಯನಾ ಅವರಿಗೆ ಸೂಚನೆ ನೀಡಿದ್ದರು. ಮೊದಲ ಏಳು ಕೆರೆಯ ಸ್ಥಳ ಮಹಜರಿನಲ್ಲಿಯೇ ಇಂಜಿನಿಯರ್ ಮಂಜುನಾಥ್‌ ಅಕ್ರಮ ಬಯಲಾಗಿದ್ದು, ಎಇಇ ಮಂಜುನಾಥ್‌ನನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಓ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | ಉಡುಪಿಯಲ್ಲಿ ಗ್ರಾ.ಪಂ. ಪಿಡಿಒ ಅಮಾನತು; ಅಧಿಕಾರಿಗಳ ಸಂಘದ ವಿರೋಧ

Exit mobile version