Site icon Vistara News

Karnataka Rajyotsava: ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆಗೆ ಕರೆ, ಶಿವಸೇನೆ ಬೆಂಬಲ

black day by shiv sena

ಚಿಕ್ಕೋಡಿ: ಕನ್ನಡ ನಾಡು ಇಂದು ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಆಚರಿಸಿಕೊಳ್ಳುತ್ತಿದ್ದರೆ, ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್‌ ಹಾಗೂ ಶಿವಸೇನೆ ಕರಾಳ ದಿನ ಆಚರಣೆ ನಡೆಸಲು ಮುಂದಾಗಿವೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಡೆಸುತ್ತಿರುವ ಕರಾಳ ದಿನಾಚರಣೆಗೆ ಶಿವಸೇನೆ ಬೆಂಬಲ ನೀಡಿದೆ.

ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಸಂಘಟಿಸಲಾಗಿದೆ. ಬೆಳಗಾವಿ ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಕರಾಳ ದಿನಾಚರಣೆಗೆ ಎಂಇಎಸ್ ತಯಾರಿ ನಡೆಸಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣದಿಂದ ಇಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿ ಚಲೋಗೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಕರೆ ನೀಡಿದ್ದಾನೆ. ಇಂದು ಬೆಳಗ್ಗೆ 8ಕ್ಕೆ ಕೊಲ್ಹಾಪುರ ಜಿಲ್ಲೆ ಕಾಗಲ್ ಬಳಿ ಜಮಾವಣೆಯಾಗಲು ಕರೆ ನೀಡಿದ್ದು, ಭಗವಾಧ್ವಜದೊಂದಿಗೆ ಕಾಗಲ್‌‌ನ ಲಕ್ಷ್ಮೀ ಟೇಕ್ ಬಳಿ ಆಗಮಿಸುವಂತೆ ಕರೆ ನೀಡಲಾಗಿದೆ. ಕಾಗಲ್‌ನಿಂದ ಕೊಗನೊಳ್ಳಿ ಟೋಲ್‌ಗೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲು ನಿರ್ಧರಿಸಲಾಗಿದೆ.

ಶಿವಸೇನೆ ಕಾರ್ಯಕರ್ತರನ್ನು ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆ ನಿಪ್ಪಾಣಿ ಹೊರವಲಯದ ಕೊಗನೊಳ್ಳಿ ಟೋಲ್‌ಗೇಟ್ ಬಳಿಯೇ ತಡೆಯಲು ಪೊಲೀಸರು ನಿರ್ಧರಿಸಿದ್ದಾರೆ.

ಎಂಇಎಸ್‌ ಪ್ರತಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೂ ಕರಾಳ ದಿನ ಆಚರಿಸುತ್ತದೆ. ಅಂದು ಕಪ್ಪು ಬಾವುಟ ಹಾರಿಸುವುದು ಎಂಇಎಸ್‌ಗೆ ರೂಢಿಯಾಗಿದ್ದು, ಈ ಬಾರಿ ಶಿವಸೇನೆ ಕೂಡ ಈ ದ್ರೋಹಿಗಳಿಗೆ ಬೆಂಬಲ ನೀಡಿದೆ.

ಇದನ್ನೂ ಓದಿ: Karnataka Rajyotsava: ಬ್ಯಾಂಕ್​ ಜನಾರ್ದನ್​, ಡಿಂಗ್ರಿ ನಾಗರಾಜ್​ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ

Exit mobile version