Site icon Vistara News

Child Death: ಆಟವಾಡುತ್ತಾ ಹೋದ ಆರು ವರ್ಷದ ಬಾಲಕಿ ಲಿಫ್ಟ್‌ಗಾಗಿ ತೋಡಿದ್ದ ಗುಂಡಿಗೆ ಬಿದ್ದು ಸಾವು

#image_title

ಬೆಂಗಳೂರು: ಇಲ್ಲಿನ ಸುಲ್ತಾನ್ ಪೇಟೆ ಬಳಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌ನ ಗುಂಡಿಗೆ ಬಿದ್ದು ಮಗುವೊಂದು ಮೃತಪಟ್ಟಿರುವ (Child Death) ಘಟನೆ ಶುಕ್ರವಾರ (ಫೆ. ೨೪) ತಡರಾತ್ರಿ ನಡೆದಿದೆ.

ಕಟ್ಟಡ ಕಾಮಗಾರಿಗಾಗಿ ಬಂದಿದ್ದ ಕೂಲಿ ಕಾರ್ಮಿಕ ದಂಪತಿ ಇಲ್ಲಿಗೆ ಬಂದಿದ್ದರು. ಈ ವೇಳೆ ಇವರ ಆರು ವರ್ಷದ ಮಗಳು ಆಟವಾಡುತ್ತಾ ಹೋಗಿ ಗುಂಡಿಗೆ ಬಿದ್ದು ಮೃತಪಟ್ಟಿದ್ದಾಳೆ.

ಮಹೇಶ್ವರಿ (6) ಮೃತ ಹೆಣ್ಣುಮಗಳು ಎಂದು ಗುರುತಿಸಲಾಗಿದೆ. ಕಮಲಮ್ಮ ಮತ್ತು ಮಲ್ಲಪ್ಪ ದಂಪತಿಯ ೨ನೇ ಪುತ್ರಿಯಾಗಿದ್ದಾಳೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಹೇಶ್ವರಿ ಶುಕ್ರವಾರ ಆಟವಾಡುತ್ತಿದ್ದಳು. ಇತ್ತ ಐದು ಅಂತಸ್ತಿನ ಕಡ್ಡಡ ಕಾಮಗಾರಿ ನಡೆಯುತ್ತಿತ್ತು. ಮಹೇಶ್ವರಿ ಆಟವಾಡುತ್ತಾ ಹೊರಗಡೆ ಹೋಗಿದ್ದು, ಈ ವೇಳೆ ಅವಘಡ ಸಂಭವಿಸಿದೆ.

ಇದನ್ನೂ ಓದಿ: Karnataka Election 2023: ಪ್ರಚಾರಕ್ಕೆ ಹೋಗಿದ್ದ ಎನ್‌.ಆರ್‌. ಸಂತೋಷ್‌ಗೆ ತರಾಟೆ; ಹಲ್ಲೆಗೆ ಮುಂದಾದರೇ ಗ್ರಾಮಸ್ಥರು?

ಈ ದಂಪತಿ ಯಲಹಂಕದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಲ್ಲಪ್ಪನ ಕಣ್ಣಿನ ಚಿಕಿತ್ಸೆಗೆಂದು ಇವರು ಬಂದಿದ್ದರು ಎನ್ನಲಾಗಿದೆ. ಈ ವೇಳೆ ಸಂಬಂಧಿಕರು ಅಲ್ಲೇ ಕೆಲಸ ಮಾಡುತ್ತಿದ್ದ ಕಾರಣ ಅವರ ಜತೆಯೇ ಉಳಿದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಲೇಶ್ವರಿ ತಾಯಿ, ಸಂಜೆ ನಾನು ನನ್ನ ಇನ್ನೊಂದು ಮಗುವಿಗೆ ಹಾಲು ಕುಡಿಸುತ್ತಿದ್ದೆ. ಈ ವೇಳೆ ಮಹೇಶ್ವರಿ ಹೊರಗೆ ಆಟವಾಡುತ್ತಿದ್ದಳು. ಒಂದೆರಡು ಬಾರಿ ನಾನು ಹೊರಗಡೆಗೆ ಬಂದು ನೋಡಿಕೊಂಡು ಹೋದೆ. ಆಗಲೂ ಅಲ್ಲಿಯೇ ಕುಳಿತು ಆಡುತ್ತಿದ್ದಳು. ಮೂರನೇ ಬಾರಿಗೆ ಬಂದು ನೋಡುವಾಗ ಮಹೇಶ್ವರಿ ಕಾಣಿಸಲಿಲ್ಲ.

ಆದರೆ, ಮೂರನೇ ಬಾರಿ ಬಂದು ನೋಡಿದಾಗ ಮಗು ಇರಲಿಲ್ಲ. ಅಲೆಲ್ಲ ಹುಡುಕಿದರೂ ಕಾಣಿಸಲಿಲ್ಲ. ಕೊನೆಗೆ ಗುಂಡಿಯೊಳಗೆ ಇಣುಕಿ ನೋಡಿದೆ. ನಾಲ್ಕಡಿ ಗುಂಡಿ ಇತ್ತು, ನೀರು ತುಂಬಿಕೊಂಡಿತ್ತು. ನಾನು ನೋಡಿದಾಗ ಮಗು ತಲೆ ಕಾಣುತ್ತಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡುವ ಬಂದೆವು. ಆದರೆ, ಬರುವಷ್ಟರಲ್ಲಿ ನನ್ನ ಮಗಳು ಬದುಕಿರಲಿಲ್ಲ ಎಂದು ಗೋಳಿಟ್ಟಿದ್ದಾರೆ.

ಸ್ಥಳಕ್ಕೆ ಕೆ.ಆರ್. ಮಾರ್ಕೆಟ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Exit mobile version