Site icon Vistara News

Assault Case: ಚಿಂತಾಮಣಿಯಲ್ಲಿ ನಗರಸಭೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ; ಉದ್ವಿಗ್ನ ಸ್ಥಿತಿ ನಿರ್ಮಾಣ

CMC Member Agrahara murali

ಚಿಕ್ಕಬಳ್ಳಾಪುರ: ಮಾರಣಾಂತಿಕ ಹಲ್ಲೆ (Assault Case) ಮಾಡಿದ್ದರಿಂದ ನಗರಸಭೆ ಸದಸ್ಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

26ನೇ ವಾರ್ಡ್‌ ಸದಸ್ಯ ಅಗ್ರಹಾರ ಮುರುಳಿ ಗಾಯಾಳು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಬೆಂಬಲಿತ ಕುಮಾರ್ ರೆಡ್ಡಿ ಆಪ್ತ ಜಾನ್ ಎಂಬಾತನ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಅಗ್ರಹಾರ ಮುರುಳಿ ಅವರು ಜೆಡಿಎಸ್‌ನ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬೆಂಬಲಿಗರಾಗಿದ್ದಾರೆ. ಹಲ್ಲೆಯಿಂದ ಅವರ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ನಗರಸಭೆ ಸದಸ್ಯ ಜಗದೀಶ್ ರೆಡ್ಡಿ ಸಹೋದರ ಕುಮಾರ್ ರೆಡ್ಡಿ ಗ್ಯಾಂಗ್‌ ವಿರುದ್ಧ ಕೊಲೆ ಯತ್ನ ಆರೋಪ ಕೇಳಿಬಂದಿದ್ದು, ಚಿಕ್ಕಬಳ್ಳಾಪುರ ಎಸ್‌ಪಿ ಡಿ.ಎಲ್. ನಾಗೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರಸಭೆ ಸದಸ್ಯನ ಮೇಲೆ ಹಲ್ಲೆಗೆ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರಿಂದ ಚಿಂತಾಮಣಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

ಇದನ್ನೂ ಓದಿ | Shivamogga News: ವಿದ್ಯುತ್ ತಗುಲಿ ಕಗ್ಗುಂಡಿ ಗ್ರಾಮದಲ್ಲಿ ವೃದ್ಧೆ ಸಾವು

ವಿದ್ಯುತ್‌ ಬಿಲ್ ಕಲೆಕ್ಟರ್‌ ಬರ್ಬರ ಹತ್ಯೆ

ಧಾರವಾಡ: ವಿದ್ಯುತ್‌ ಬಿಲ್ ಕಲೆಕ್ಟರ್‌ನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಧಾರವಾಡ ಹೊರವಲಯದ ಹಳಿಯಾಳ್ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ರಜಾಕ್ ಕವಲಗೇರಿ ಮೃತ ವ್ಯಕ್ತಿ. ಹಳಿಯಾಳ್ ಸೇತುವೆ ಬಳಿ ಬೈಕ್ ಮೇಲೆ ಬಂದಿದ್ದ ಯುವಕರು, ರಜಾಕ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Exit mobile version