Site icon Vistara News

Doctor death | ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ರೂಪಾ ಅಸಹಜ ಸಾವು, ಕಾಲು ಜಾರಿ ಬಿದ್ದರೇ?

Doctor Roopa

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ (Doctor death) ಅವರು ಸೋಮವಾರ ಬೆಳಗ್ಗೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಮನೆಯಲ್ಲಿ ಕಾಲು ಜಾರಿ ಬಿದ್ದು ಸಾವು ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಕಾಲು ಜಾರಿ ಬಿದ್ದಾಗ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವದಿಂದ ಸಾವು ಸಂಭವಿಸಿದೆ. ಜಿಲ್ಲಾಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಚಿತ್ರದುರ್ಗದ ವಿ.ಪಿ ಎಕ್ಸ್‌ಟೆನ್ಷನ್ ಬಡಾವಣೆಯ‌ ಮನೆಯಲ್ಲಿ ಘಟನೆ ನಡೆದಿದ್ದು, ಡಾ.ರೂಪಾ ಪತಿ ಡಾ. ರವೀಂದ್ರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಆಸ್ಪತ್ರೆಗೆ ತೆರಳುವ ಮುನ್ನ ಈ ಘಟನೆ ನಡೆದಿದೆ. ಹೊರಡುವ ಅವಸರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಇದುವೇ ನಿಜವೇ ಅಥವಾ ಇದರ ಹಿಂದೆ ಬೇರೇನಾದರೂ ಘಟನೆಗಳು ನಡೆದಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Officer death | ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ನಿಗೂಢ ಸಾವು: ಮಲಗಿದಲ್ಲೇ ಮೃತ್ಯು, ಗೊತ್ತಾಗಿದ್ದು ಒಂದೂವರೆ ದಿನದ ಬಳಿಕ!

Exit mobile version