Site icon Vistara News

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

Murder Case

ಚಿತ್ರದುರ್ಗ: ನೀರಿನ‌ ತೊಟ್ಟಿ ಪಕ್ಕ ಅನುಮಾನಸ್ಪದವಾಗಿ ತಾಯಿ-ಮಗಳ ಶವ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ (Chitradurga News) ಕೆಳಗೋಟೆಯ ತಿಪ್ಪೇರುದ್ರಸ್ವಾಮಿ ಮಠದಲ್ಲಿ ನಡೆದಿದ್ದು, ಶವಗಳನ್ನು ಕಂಡು ತಂದೆ-ಮಗ ಗಾಬರಿಯಾಗಿದ್ದಾರೆ. ನೀರಿನಲ್ಲಿ ಮುಳುಗಿ ತಾಯಿ, ಮಗಳು ಪ್ರಾಣಬಿಟ್ಟರಾ ಅಥವಾ ಕೊಲೆ ಮಾಡಲಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಕೆಳಗೋಟೆ ನಿವಾಸಿ ಸುರೇಶ್ ಎಂಬುವವರ ಪತ್ನಿ ಗೀತಾ(42), ಮಗಳು ಪ್ರಿಯಾಂಕಾ(20) ಮೃತರು, ನಗರದ ಕೆಳಗೋಟೆ ತಿಪ್ಪೇರುದ್ರಸ್ವಾಮಿ ಮಠದ ತೊಟ್ಟಿ ಪಕ್ಕ ಮೃತರ ಶವಗಳು ಪತ್ತೆಯಾಗಿವೆ. ನೀರಿನಲ್ಲಿ ಮುಳುಗಿ ತಾಯಿ-ಮಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತವಾಗಿವೆ. ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಇದನ್ನೂ ಓದಿ | Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳನನ್ನು (Theft Case) ಬಂಧಿಸಿದ್ದಾರೆ. ದೀಪಕ್ ಅಲಿಯಾಸ್‌ ದೀಪು ಬಂಧಿತ ಆರೋಪಿಯಾಗಿದ್ದಾನೆ. ದೀಪಕ್‌ ಸ್ವಿಗ್ಗಿ ಡೆಲಿವರಿ ಬಾಯ್ (Swiggy Boy) ಆಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 14 ಪ್ರಕರಣ ದಾಖಲಾಗಿವೆ.

ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ. ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೈಕ್‌ ಮಾರಾಟಕ್ಕೂ ಮೊದಲು ದಾಖಲಾತಿಯನ್ನೆಲ್ಲ ನಂತರ ಕೊಡುತ್ತೇನೆ ಎಂದು ಯಮಾರಿಸಿ, ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದ.

23 ವರ್ಷದ ದೀಪಕ್ ತನ್ನ 18ನೇ ವಯಸ್ಸಿನಲ್ಲೇ ಹತ್ತಕ್ಕೂ ಹೆಚ್ಚು ಗಾಡಿಗಳನ್ನು ಕದ್ದು ರಿಮ್ಯಾಂಡ್ ಹೋಮ್‌ ಸೇರಿದ್ದ. ಇಲ್ಲಿಂದ ಹೊರಬಂದ ದೀಪಕ್‌ ಹೊಸ ಜೀವನ ಕಟ್ಟಿಲಿಲ್ಲ, ಬದಲಿಗೆ ಈ ದಾರಿಯಲ್ಲಿ ಮತ್ತಷ್ಟು ಪಳಗಿ ನಟೋರಿಯಸ್‌ ಆಗಿದ್ದ. ದುಡಿಮೆ ಈತನಿಗೆ ಪಾರ್ಟ್ ಟೈಂ ಕೆಲಸವಾದರೆ, ಕದಿಯುವುದನ್ನೂ ಪ್ರವೃತ್ತಿ ಮಾಡಿಕೊಂಡಿದ್ದ.

ಬೆಂಗಳೂರಿನ ಬನಶಂಕರಿ ನಿವಾಸಿಯಾದ ದೀಪಕ್‌ಗೆ ತಂದೆ ಇಲ್ಲ. ತಾಯಿ ಇದ್ದರೂ ಅವರನ್ನು ಈತ ನೋಡಿಕೊಳ್ಳುತ್ತಿರಲಿಲ್ಲ. ದೀಪಕ್‌ ಹೆಚ್ಚು ಮಾವನ ಆಸರೆಯಲ್ಲೆ ಬೆಳೆದಿದ್ದ. ದೀಪಕ್ ಮಾವ ಮಂಜುನಾಥ್ ಅವರು ಬಿಜಿಎಸ್ ಮಠದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ನಂತರ ಅಮೇರಿಕಾದಲ್ಲಿರುವ ಬಿಜಿಎಸ್‌ನ ಬ್ರಾಂಚ್‌ಗೆ ಶಿಫ್ಟಾಗಿದ್ದರು. ಇದಾದ ಬಳಿಕವೇ ದೀಪಕ್ ದಾರಿ ತಪ್ಪಿದ್ದ. ಮೊದಲ ಬಾರಿ ಜೆಪಿ ನಗರದಲ್ಲಿ ರಾಬರಿ ಮಾಡಿ ರಿಮ್ಯಾಂಡ್ ಹೋಂ ಸೇರಿದ್ದ. ಒಮ್ಮೆ ಕಳ್ಳತನದ ರುಚಿ ಸವಿದ ನಂತರ ಇದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಸುಮಾರು 73ಕ್ಕೂ ಹೆಚ್ಚು ಬೈಕ್ ಹಾಗೂ ಟಾಟಾ ಏಸ್ ಗಾಡಿ ಕದ್ದಿರುವುದು ಬೆಳಕಿಗೆ ಬಂದಿದೆ.

ಅಷ್ಟೆ ಅಲ್ಲದೆ ವಿದ್ಯಾರಣ್ಯಪುರದಲ್ಲಿ ಮನೆ ಕಳ್ಳತನ ಮಾಡಿ ಜೈಲು ಸೇರಿದವನು 15 ದಿನಗಳ ಹಿಂದಷ್ಟೇ ಹೊರ ಬಂದಿದ್ದ. ಜೈಲಿನಲ್ಲಿದ್ದಾಗ ರಘು ಅಲಿಯಾಸ್‌ ಪೆಪ್ಸಿ ಎಂಬಾತ ಪರಿಚಯವಾಗಿದ್ದ. ಕಳ್ಳತನಕ್ಕೆ ಒಂದಷ್ಟು ಮನೆಗಳನ್ನು ಹುಡುಕು ಎಂದಿದ್ದ ಎನ್ನಲಾಗಿದೆ. ಅದರಂತೆ ಈತ ಬನಶಂಕರಿಯಲ್ಲಿ ಮೂರ್ನಾಲ್ಕು ಮನೆಗಳನ್ನೂ ಹುಡುಕಿಕೊಟ್ಟಿದ್ದನಂತೆ. ಇನ್ನು ಈತ ಫುಲ್ ಟೈಂ ಕಳ್ಳನಾಗಿದ್ದು, ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಆಗಾಗ ಕೆಲಸ ಮಾಡುತ್ತಿದ್ದ. ಸ್ವಿಗ್ಗಿ ಡೆಲಿವರಿ ಮಾಡುತ್ತಾ ಮನೆಗಳನ್ನು ಹಾಗು ಬೈಕ್‌ಗಳನ್ನು ಗುರುತಿಸಿ, ರಾತ್ರಿ ವೇಳೆ ಕದಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ .‌

ಇದನ್ನೂ ಓದಿ | Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

ಸದ್ಯ ಬೈಯ್ಯಪ್ಪನಹಳ್ಳಿ ಪೊಲೀಸರು ಈ ಖತರ್ನಾಕ್‌ ಕಳ್ಳನಿಂದ ಮೂರು ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version