ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಕರ್ತವ್ಯನಿರತ ಪಿಡಿಓ (PDO) ಮೇಲೆ ಹಲ್ಲೆ (Assault Case) ನಡೆದಿದೆ. ಪಿಡಿಓ ವಿವೇಕ್ ತೇಜಸ್ವಿ ಎಂಬುವವರು ಹಲ್ಲೆಗೊಳಗಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸ ಯಳನಾಡು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಘಟನೆ ನಡೆದಿದೆ. ಹಲ್ಲೆ ನಡೆಸುವ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಜೂನ್ 29ರ ಬೆಳಗ್ಗೆ ಹೊಸಯಳನಾಡು ಗ್ರಾಮ ಪಂಚಾಯತಿಗೆ ಆಲೂರು ಗ್ರಾಮದ ಬಾಲ ರಾಮಯ್ಯ, ಅಜ್ಜಯ್ಯ ಸಿದ್ದರಾಮೇಶ್ವರ, ಬೋರ್ ವೆಲ್ ರಾಮಚಂದ್ರಪ್ಪ ಎಂಬುವವರು ಬಂದಿದ್ದರು. ಕಚೇರಿಯೊಳಗೆ ನುಗ್ಗಿ ಬಂದವರೇ ಪಿಡಿಒ ವಿವೇಕ್ ತೇಜಸ್ವಿ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಿನ್ನಿಂದ ಆಲೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸರಿಯಾಗಿ ನೀರು ಸರಬಾರಜು ಆಗುತ್ತಿಲ್ಲ ಎಂದು ಹೇಳಿ ದರದರನೇ ಹೊರಗಡೆ ಎಳೆದುಹೋಗಿದ್ದಾರೆ.
ಬಳಿಕ ಹತ್ತಾರು ಮಂದಿ ವಿವೇಕ್ ಅವರನ್ನು ಸುತ್ತುವರೆದು ಜಗಳವಾಡಿ ಮನಬಂದಂತೆ ಥಳಿಸಿದ್ದಾರೆ. ಇತ್ತ ವಿವೇಕ್ ತೇಜಸ್ವಿ ಅವರ ಕೂಗಾಟ ಕೇಳಿ ಹೊರ ಬಂದ ಇತರೆ ಸಿಬ್ಬಂದಿ ಜಗಳವನ್ನು ಬಿಡಿಸಿದ್ದಾರೆ. ಈ ವೇಳೆ ನಿನಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದೇಳಿ ಬೆದರಿಕೆಯನ್ನು ಹಾಕಿದ್ದಾರೆ.
ಹಲ್ಲೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಐಪಿಸಿ 323, 504, 353, 506 ಅಟ್ರಾಸಿಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆಹಾಕಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!
ಬೆಂಗಳೂರಲ್ಲಿ ಮನೆ ಮುಂದೆ ಕಸ ಸುರಿದು ಪುಂಡಾಟ
ಹಳೆ ದ್ವೇಷಕ್ಕೆ ಆಟೋ ಚಾಲಕನೊಬ್ಬ ಮನೆ ಮುಂದೆ ಕಸ ಸುರಿದು ಪುಂಡಾಟ ಮೆರೆದಿದ್ದಾನೆ. ಆಟೋ ಚಾಲಕ ಶಿವಕುಮಾರ್ ಎಂಬಾತ ಈ ಕೀಟಲೆ ಮಾಡಿದ್ದಾನೆ. ಬೆಂಗಳೂರಿನ ಬನಶಂಕರಿ ವಾಟರ್ ಟ್ಯಾಂಕ್ ಬಳಿ ಇರುವ ವೆಂಕಟೇಶ್ ಎಂಬುವವರ ಮನೆ ಮುಂದೆ ಶಿವಕುಮಾರ್ ಕಸ ಸುರಿದು ಹೋಗಿದ್ದಾನೆ. ಮಾತ್ರವಲ್ಲದೇ ಕಸ ಸುರಿದ ಬಳಿಕ ಗೇಟಿಗೆ ಒದ್ದು ದುರ್ವರ್ತನೆ ತೋರಿದ್ದಾನೆ. ಸದ್ಯ ಆಟೋ ಚಾಲಕ ಶಿವಕುಮಾರ್ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೊ ಸಮೇತ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ