Site icon Vistara News

ಭಗತ್‌ ಸಿಂಗ್‌ ಪಾತ್ರದ ರಿಹರ್ಸಲ್‌ ಮಾಡಲು ಹೋಗಿ ನೇಣು ಬಿಗಿದುಕೊಂಡ ಬಾಲಕ

chitradurga death

ಚಿತ್ರದುರ್ಗ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಶಾಲೆಯಲ್ಲಿ ಭಗತ್‌ ಸಿಂಗ್‌ ಪಾತ್ರವನ್ನು ನಿರ್ವಹಣೆ ಮಾಡಲು ರಿಹರ್ಸಲ್‌ ಮಾಡಲು ಹೋಗಿ ಏಳನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಎಸ್‌ಎಲ್‌ವಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂಜಯ್‌ ಗೌಡ( 12) ಮೃತ ದುರ್ದೈವಿ.

ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶಾಲೆಯಲ್ಲಿ ವಿವಿಧ ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಚಿತ್ರದುರ್ಗದ ನಗರದ ಕೆಳಗೋಟೆ ಬಡಾವಣೆಯ ನಿವಾಸಿಯಾಗಿದ್ದ ಸಂಜಯ್‌ ಭಗತ್‌ ಸಿಂಗ್‌ ಪಾತ್ರ ಮಾಡುವುದಿತ್ತು.

ಶಾಲೆಯಲ್ಲಿ ರಿಹರ್ಸಲ್‌ ಮಾಡಿದ್ದರ ಜತೆಗೆ ಮನೆಯಲ್ಲೂ ರಿಹರ್ಸಲ್‌ ಮಾಡಲು ಮುಂದಾಗಿದ್ದಾನೆ. ಭಗತ್‌ ಸಿಂಗ್‌ನನ್ನು ಬ್ರಿಟಿಷರು ನೇಣಿಗೇರಿಸುವಂತೆ ರಿಹರ್ಸಲ್‌ ಮಾಡಲು ಫ್ಯಾನಿಗೆ ನೂಲಿನ ಹಗ್ಗ ಕಟ್ಟಿ ಮಂಚದ ಮೇಲೆ ನಿಂತಿದ್ದಾನೆ. ಉಲ್ಲನ್‌ ಟೋಪಿ ಹಾಕಿಕೊಂಡು ಜಿಗಿದಿದ್ದಾನೆ.

ಮನೆಯಿಂದ ಹೊರಗೆ ಹೋಗಿದ್ದ ಪೋಷಕರು ಬಂದು ನೋಡಿದ್ದಾರೆ. ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಈ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಅಕ್ರಮ | ಕೋಲಾರ ಜಿಲ್ಲೆಯಲ್ಲಿ 25, ಚಿತ್ರದುರ್ಗದಲ್ಲಿ ಐವರು ವಶಕ್ಕೆ; ಸಿಐಡಿ ತನಿಖೆ ಚುರುಕು

Exit mobile version