Site icon Vistara News

Suicide | ಸರ್ಕಾರಿ ನೌಕರಿಗೆ ಕ್ರಿಮಿನಲ್‌ ಕೇಸ್‌ ಅಡ್ಡಿ; ನೊಂದ ಯುವತಿ ನೇಣಿಗೆ ಶರಣು

Suicide

ಚಿತ್ರದುರ್ಗ: ಸರ್ಕಾರಿ ಕೆಲಸ ನೇಮಕಕ್ಕೆ ಕ್ರಿಮಿನಲ್ ಕೇಸ್ ಅಡ್ಡಿಯಾಗಿದೆ ಎಂದು ನೊಂದ ಉದ್ಯೋಗಾಕಾಂಕ್ಷಿ ಯುವತಿ ಆತ್ಮಹತ್ಯೆ (Suicide) ಮಾಡಿಕೊಂಡ ಪ್ರಕರಣ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಯುವತಿ ಬರೆದಿಟ್ಟಿದ್ದ ಡೆತ್‌ನೋಟ್‌ ನಿಂದ ಆತ್ಮಹತ್ಯೆಯ ಕಾರಣ ಬಹಿರಂಗಗೊಂಡಿದೆ.

ಕಾಮಸಮುದ್ರ ಗ್ರಾಮದ ಉಷಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಯುವತಿಯ ತಾಯಿ ಯಶೋಧಮ್ಮ ಕುಟುಂಬ ಮತ್ತು ನಾಗರಾಜ ಎಂಬುವವರ ಕುಟುಂಬ ನಡುವೆ ಜಮೀನಿಗಾಗಿ ಜಗಳ ನಡೆದಿತ್ತು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಎ3 ಆರೋಪಿಯಾಗಿದ್ದ ಉಷಾ, ಪ್ರಕರಣದಲ್ಲಿ ರಾಜಿ ಆಗುವಂತೆ ದೂರುದಾರರಿಗೆ ಮನವಿ ಮಾಡಿದ್ದಳು. ಉಷಾ ಮತ್ತು ಕುಟುಂಬದವರ ಮನವಿಗೆ ದೂರುದಾರರು ಸ್ಪಂದಿಸದೆ ನಿಂದಿಸಿ ಕಳುಹಿಸಿದ್ದರು. ಬಳಿಕ ಚಾರ್ಜ್‌ಶೀಟ್‌ನಲ್ಲಿ ಹೆಸರು ಬಿಡಲು ಪೊಲೀಸರ ಬಳಿ ಯುವತಿ ಮನವಿ ಮಾಡಿದ್ದಳು.

ಕೇಸ್ ರಾಜಿ ಆಗದ ಕಾರಣ ಯುವತಿ ಆರೋಪಿಯಾಗಿಯೇ ಉಳಿದಿದ್ದರಿಂದ ಸರ್ಕಾರಿ ನೌಕರಿ ಪಡೆಯಲು ಆಕೆಗೆ ಸಮಸ್ಯೆಯಾಗುತ್ತಿತ್ತು. ಪೊಲೀಸ್ ವೆರಿಫಿಕೇಷನ್ ವೇಳೆ ನನಗೆ ಕೆಲಸ ದೊರೆಯದಂತಾಗುತ್ತದೆ ಎಂಬ ಭೀತಿಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಸಾವಿಗೆ ನನ್ನ ಕುಟುಂಬ ಕಾರಣವಲ್ಲ, ವ್ಯವಸ್ಥೆಯೇ ಕಾರಣ, “ನಾನು ಕೆಲಸಕ್ಕೋಸ್ಕರ ಸಾಯ್ತ ಇರೋದು ಬ್ಲಡಿ ಸಿಸ್ಟಮ್ʼʼ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಗರಾಜ್ ಮತ್ತಿತರರ ವಿರುದ್ಧ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ದಾಖಲಾಗಿದೆ.

ಇದನ್ನೂ ಓದಿ | Accident | ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸವಾರರ ಸಾವು

Exit mobile version