Site icon Vistara News

Prewedding Shoot : ಆಪರೇಷನ್‌ ಥಿಯೇಟರ್‌ನಲ್ಲೇ ಪ್ರಿ ವೆಡ್ಡಿಂಗ್‌ ಶೂಟ್‌; ಕೆಲಸದಿಂದ ಡಾಕ್ಟರ್‌ ವಜಾ

Prewedding Shoot doctor1

ಚಿತ್ರದುರ್ಗ: ಪ್ರಿವೆಡ್ಡಿಂಗ್‌ ಶೂಟ್‌ (Prewedding Shoot) ಹೆಸರಲ್ಲಿ ಎಲ್ಲೆಲ್ಲೋ ಹೋಗುವುದು, ಹೇಗೇಗೋ ವಿಡಿಯೋ ಮಾಡುವುದು, ಅಶ್ಲೀಲವಾಗಿ ನಡೆದುಕೊಳ್ಳುವುದನ್ನು ನೋಡಿದ್ದೇವೆ. ಹೀಗಾಗಿಯೇ ಹಲವಾರು ಕಡೆಗಳಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ಗೆ ಅನುಮತಿ ನಿರಾಕರಿಸಲಾಗಿದೆ. ಈ ನಡುವೆ, ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನಲ್ಲೇ (Operation Theatre) ವೈದ್ಯರೊಬ್ಬರು ಪ್ರಿ ವೆಡ್ಡಿಂಗ್‌ ಶೂಟ್‌ ನಡೆಸಿ ವಿವಾದಕ್ಕೆ ಒಳಗಾಗಿದ್ದಾರೆ. ಅವರಿಗೆ ಈಗ ಕೆಲಸದಿಂದ ವಜಾ ಮಾಡುವ ಶಿಕ್ಷೆಯೂ (Doctor Dismissed) ಸಿಕ್ಕಿದೆ.

ಭರಮಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅಭಿಷೇಕ್‌ ಅವರು ತಮ್ಮ ಭಾವಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಫೋಟೊ ಶೂಟ್‌ ಮಾಡಿದ್ದು ವೈರಲ್‌ ಆಗಿತ್ತು.

ಪ್ರೀವೆಡ್ಡಿಂಗ್‌ ಶೂಟ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಇದೀಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರು ಹೊರಗುತ್ತಿಗೆ ವೈದ್ಯ ಡಾ. ಅಭಿಷೇಕ್‌ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊವನ್ನು ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ಮಾಡಲಾಗಿದೆ. ಡಾ. ಅಭಿಷೇಕ್‌ ಅವರು ಆಪರೇಷನ್‌ ದಿರಸಿನಲ್ಲಿದ್ದಾರೆ. ಅವರು ಆಪರೇಷನ್‌ ಟೇಬಲ್‌ನಲ್ಲಿ ಮಲಗಿದ ಯಾರಿಗೋ ಆಪರೇಷನ್‌ ಮಾಡುತ್ತಿರುವಂತೆ ಅವರ ಪತ್ನಿ ಎದುರು ನಿಂತು ಸಹಾಯ ಮಾಡುವಂತೆ ಚಿತ್ರೀಕರಣ ನಡೆಸಲಾಗಿದೆ. ಈ ಶೂಟಿಂಗ್‌ ವೇಳೆ ಅವರ ಸಹಾಯಕರು ಮತ್ತು ಇತರರ ನಗುತ್ತಿದ್ದಾರೆ.

ಆಪರೇಷನ್‌ ಥಿಯೇಟರನ್ನು ಇಂಥ ಕೆಲಸಗಳಿಗೆ ಬಳಸಿಕೊಂಡು ಅದರ ಘನತೆಯನ್ನು ಕಡಿಮೆ ಮಾಡಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿ ಖಾಸಗಿ ಶೂಟಿಂಗ್‌ ನಡೆಸಬಾರದಿತ್ತು ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ : Love Case : ಒಂದೇ ಶಾಲೆಯ ಶಿಕ್ಷಕ-ಶಿಕ್ಷಕಿ ಲವ್ವಿ ಡವ್ವಿ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಹೆಂಡ್ತಿ!

ಗೆಳೆಯರ ಜತೆ ಜಲಾಶಯಕ್ಕೆ ಹೋಗಿದ್ದ ಬೆಂಗಳೂರಿನ ಯುವಕ ನೀರುಪಾಲು

ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Shrinivasa sagara Jalashaya) ಬೆಂಗಳೂರು ಮೂಲದ ಯುವಕನೊಬ್ಬ (Young Man from Bangalore) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ (Drowned in Pond). ಸ್ನೇಹಿತರ ಜತೆ ಬಂದಿದ್ದ ಯುವಕ ಮೋಜು ಮಸ್ತಿ ಮಾಡುತ್ತಾ ನೀರಿಗಿಳಿದಾಗ ಮುಳುಗಿ ಮೃತಪಟ್ಟಿದ್ದಾನೆ.

ಬೆಂಗಳೂರಿನ ಬಾಬೂಸಾಪಾಳ್ಯ ನಿವಾಸಿಯಾಗಿರುವ 23 ವರ್ಷದ ಅಭಿ ಮೃತ ಯುವಕ. ಆತ ತನ್ನ ಗೆಳೆಯರ ಜತೆ ಚಿಕ್ಕ ಬಳ್ಳಾಪುರ ತಾಲೂಕಿನ (Chikkaballapura News) ಶ್ರೀನಿವಾಸ ಸಾಗರ ಜಲಾಶಯ ನೋಡಲು ಬಂದಿದ್ದ. ಜಲಾಶಯದ ನೀರಿನಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶವ ಶೋಧಕಾರ್ಯ ನಡೆಯುತ್ತಿದೆ.

ತಂದೆತಾಯಿಗೆ ಒಬ್ಬನೆ ಮಗನಾಗಿದ್ದ ಅಭಿ ನೀರುಪಾಲಾಗಿರುವುದರಿಂದ ಕುಟುಂಬ ಕಣ್ಣೀರಿಡುತ್ತಿದೆ. ಮನೆಯವರು ಕೂಡಾ ಆಗಮಿಸಿದ್ದು ಶವದ ಹುಡುಕಾಟ ಮುಂದುವರಿದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.

Exit mobile version