Site icon Vistara News

Love marriage : ಅಂತರ್ಜಾತಿ ವಿವಾಹಕ್ಕೆ ಅಡ್ಡಿ; ಮಗಳನ್ನು ಧರಧರನೇ ಎಳೆದೊಯ್ದ ಪೋಷಕರು

Girls parents oppose inter caste marriage

ಚಿತ್ರದುರ್ಗ: ಪ್ರೀತಿಸಿ ಮದುವೆ ಆದ ಪ್ರೇಮಿಗಳಿಗೆ (Love marriage) ಪೋಷಕರೇ ವಿಲನ್ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ ಕೆರೆ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಹಾಗೂ ಪದ್ಮಜಾ ಎಂಬುವವರು ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವಾರವಷ್ಟೇ ದೇವಸ್ಥಾನದಲ್ಲಿ ಮದುವೆಯನ್ನೂ (Inter caste marriage) ಆಗಿದ್ದರು.

ಆದರೆ ಈ ಅಂತರ್ಜಾತಿ ವಿವಾಹಕ್ಕೆ ಯುವತಿ ಪೋಷಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮದುವೆ ಬಳಿಕ ರಿಜಿಸ್ಟರ್ ಮ್ಯಾರೇಜ್ ಆಗಲೂ ಬಂದಾಗ ಪದ್ಮಜಾಳನ್ನು ಆಕೆ ಪೋಷಕರು, ಸಂಬಂಧಿಗಳೆಲ್ಲರೂ ಸೇರಿ ಬಲವಂತವಾಗಿ ಕರೆದೊಯ್ದಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

ಇದನ್ನೂ ಓದಿ: Assault Case : ನಡುರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಗೆ ಮಚ್ಚು ಬೀಸಿದ ಪತಿ

ಬಿ.ಜಿ.ಕೆರೆ ಗ್ರಾಮದ ಪ್ರವೀಣ್ ನಾಯಕ ಸಮುದಾಯದವರಾದರೆ, ಕೋನಸಾಗರ ಗ್ರಾಮದ ಪದ್ಮಜಾ ಕುರುಬ ಸಮುದಾಯದವರು. ಪದ್ಮಜಾ ಮಂಗಳೂರು ಖಾಸಗಿ ನರ್ಸಿಂಗ್ ಕಾಲೇಜಲ್ಲಿ ಅತಿಥಿ ಉಪನ್ಯಾಸಕಿ ಕೆಲಸ ಮಾಡುತ್ತಿದ್ದರು. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರ ಮದುವೆಗೆ ಪೋಷಕರು ಒಪ್ಪದ ಕಾರಣಕ್ಕೆ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಬಳಿಕ ಈ ಮದುವೆಯನ್ನು ರಿಜಿಸ್ಟರ್ ಮಾಡಲು ಹೋದಾಗ ಅಲ್ಲಿಗೆ ಬಂದ ಯುವತಿಯ ಪೋಷಕರು, ಬಲವಂತದಿಂದ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಯುವ ಪ್ರೇಮಿ ಎಷ್ಟೇ ಅಂಗಲಾಚಿದರೂ ಬಿಡದೇ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ.

ಮತ್ತೊಂದು ಕಡೆ ಯುವತಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ನನಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರವೀಣ್‌ ಆರೋಪಿಸಿದ್ದಾನೆ. ಯುವತಿ ಅಣ್ಣ ಶ್ರೀನಿವಾಸ್‌ ಎಂಬಾತ ಪ್ರವೀಣ್‌ಗೆ ಬೆದರಿಕೆ ಕರೆ ಮಾಡುತ್ತಿದ್ದರಂತೆ. ತಂಗಿಗೆ ವಿಷ ಹಾಕಿ ಸಾಯಿಸುತ್ತೇವೆ ಹೊರತು, ನಿನಗೆ ಕೊಡಲ್ಲ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಹತ್ಯೆ ಮಾಡುವುದಾಗಿ ಮೆಸೇಜ್ ಬರುತ್ತಿದ್ದಂತೆ ಆತಂಕಗೊಂಡಿರುವ ಪ್ರವೀಣ್, ನಮ್ಮಿಬ್ಬರಿಗೂ ನ್ಯಾಯ ಕೊಡಿಸಿ ಎಂದು ಠಾಣೆಮೆಟ್ಟಿಲೇರಿದ್ದಾರೆ. ನಾವಿಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ, ದಯವಿಟ್ಟು ನಮ್ಮನ್ನು ಬದುಕಲು ಬಿಡಿ ಎಂದು ಬೇಡಿಕೆ ಕೊಳ್ಳುತ್ತಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version