Site icon Vistara News

Murugha mutt : ಮುರುಘಾ ಮಠದಲ್ಲಿ ಕಳುವಾಗಿದ್ದ ಬೆಳ್ಳಿ ಮೂರ್ತಿ ಪತ್ತೆ; ಗೋಣಿ ಚೀಲದಲ್ಲಿ ತಂದಿಟ್ಟು ಕಾಲ್ಕಿತ್ತ ಕಳ್ಳರು!

murugha mutt

ಚಿತ್ರದುರ್ಗ: ಕಳೆದ ಜು.11ರಂದು ಮುರುಘಾ ಮಠದಲ್ಲಿ ಬೆಳ್ಳಿ ಮೂರ್ತಿಯೊಂದು (Murugha mutt ) ಕಳ್ಳತನವಾಗಿತ್ತು. ಈ ಪ್ರಕರಣ ಸಂಬಂಧ ಮಠದವರು (Theft Case) ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿದ್ದಂತೆ, ನಾಪತ್ತೆಯಾಗಿದ್ದ ಬೆಳ್ಳಿ ಮೂರ್ತಿ ಪತ್ತೆಯಾಗಿದೆ. ಗೋಣಿ ಚೀಲದೊಳಗೆ ಮೂರ್ತಿ ತಂದಿಟ್ಟು ಕಳ್ಳರು ಕಾಲ್ಕಿತ್ತಿದ್ದಾರೆ.

ಅಂದಹಾಗೇ ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ಪೂಜೆಗೆಂದು ಹೋದಾಗ ಮೂರ್ತಿ ಕಳವು (Theft Case) ಆಗಿರುವುದು ಬೆಳಕಿಗೆ ಬಂದಿತ್ತು. ಕಳೆದ ತಿಂಗಳು ಜೂನ್‌ 26ರಂದೇ ಮಠದಲ್ಲಿ ಸಿಸಿಟಿವಿ ಆಫ್ ಆಗಿತ್ತು. ಈ ವೇಳೆ ದರ್ಬಾರ್ ಹಾಲ್‌ನಲ್ಲಿದ್ದ 22 ಕೆಜಿ ತೂಕದ 15 ಲಕ್ಷ ರೂ. ಮೌಲ್ಯದ ಬೆಳ್ಳಿ‌ಮೂರ್ತಿ ಕಳ್ಳತನವಾಗಿತ್ತು. ಕಳ್ಳರು ಸಿಸಿಟಿವಿ ಆಫ್ ಮಾಡಿ ಕಳ್ಳತನ‌ ಮಾಡಿದ್ದರು.

ಈ ಕುರಿತು ಮೊದಲು ಮಠದ ಆಂತರಿಕ ಸಭೆ ಕರೆದು ವಿಚಾರಣೆ ಮಾಡಲಾಗಿತ್ತು. ಆದರೆ ಕಳ್ಳತನ ಮಾಡಿದ್ದು ಯಾರು ಏನು ಎಂಬುದು ತಿಳಿದುಬಂದಿರಲಿಲ್ಲ. ಇತ್ತ ಕಾರ್ಯಕ್ರಮದ ಒತ್ತಡದಿಂದಾಗಿ ಕಳ್ಳತನವಾಗಿರುವುದು ಅರಿವಿಗೆ ಬಂದಿರಲಲ್ಲ. ಮಠದ ಯುವಕರು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸ್ವಾಮೀಜಿಗೆ ಸವಿನೆನಪಿಗಾಗಿ ಸಮಾರಂಭವೊಂದರಲ್ಲಿ ಬೆಳ್ಳಿ ಮೂರ್ತಿಯನ್ನು ನೀಡಲಾಗಿತ್ತು. ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ ಎಂದು ಬಸವಕುಮಾರ ಸ್ವಾಮೀಜಿ ಹೇಳಿದ್ದರು. ಬಸವಕುಮಾರ ಸ್ವಾಮೀಜಿ ಜತೆಗೆ ಮಠದ ಆಡಳಿತ ಮಂಡಳಿ ಸದಸ್ಯರು ಸೇರಿ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಲಿದ್ದರು.

ಪೊಲೀಸರು ತನಿಖೆ ಆರಂಭ ಮಾಡುತ್ತಿದ್ದಂತೆ ಇದೀಗ ಕಳ್ಳರು ಕಳವು ಮಾಡಿದ್ದ ಬೆಳ್ಳಿ ಮೂರ್ತಿಯನ್ನು ಆವರಣದ ಕನ್ನಡ ಮಾಧ್ಯಮ ಶಾಲೆ ಬಳಿ ತಂದು ಇಟ್ಟು ಹೋಗಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Rain : ರಾಜ್ಯಾದ್ಯಂತ ಅಬ್ಬರದ ಮಳೆಗೆ ತತ್ತರಿಸಿದ ಜನತೆ; ಮನೆ ನೆಲಸಮ, ಉರುಳಿ ಬಿದ್ದ ಮರಗಳು

ಚಿಕ್ಕಬಳ್ಳಾಪುರದಲ್ಲಿ ಬೆಲೆ ಬಾಳುವ ಮಾವು ಕದ್ದ ಕಳ್ಳರು

ಕಳ್ಳರು ಮಾವಿನ ತೋಟದಲ್ಲಿ ಮಾವು ಕದ್ದಿದ್ದಾರೆ. ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಮಾವು ನಾಪತ್ತೆಯಾಗಿರು ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಕೆ ಭತ್ತಲಹಳ್ಳಿ ಗ್ರಾಮದ ತೋಡದಲ್ಲಿ ಕಳವು ಆಗಿದೆ. ವ್ಯಾಪಾರಿ ಅನ್ಸಾಖಾನ್‌ಗೆ ಸೇರಿದ ಮಾವಿನ ಹಣ್ಣು ಕದ್ದು, ಮಾಡಿಕೆರೆ ಬಳಿ ಇರುವ ಮಂಡಿಯಲ್ಲಿ ಮಾರಾಟ ಮಾಡಲಾಗಿದೆ. ಸದ್ಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಚಿನ್ನಾಭರಣ ಎಗರಿಸಿದ ಚಾಲಾಕಿ ಚೋರಿಯರು

ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿ ಚೋರಿಯರು ಚಿನ್ನಾಭರಣ ಎಗರಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಆರ್ ಆರ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಘಟನೆ ನಡೆದಿದೆ. ಬುರ್ಖಾ ಧರಿಸಿ ಮಾರುವೇಶದಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿರುವ ಘಟನೆ ಜುಲೈ 11ರ ಗುರುವಾರ ಮಧ್ಯಾಹ್ನ 2-45ಕ್ಕೆ ನಡೆದಿದೆ. ಚಿನ್ನದಂಗಡಿಗೆ ಬಂದಿದ್ದ ನಾಲ್ವರು ಮಹಿಳೆಯರು ಸುಮಾರು 6.91 ಲಕ್ಷ ಮೌಲ್ಯದ 94.715 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿ ಆಗಿದ್ದಾರೆ. ಓಲೆ ಹಾಗೂ ಮಾಂಗಲ್ಯ ಸರ ಬೇಕೆಂದು ಬಂದಿದ್ದ ಖತರ್ನಾಕ್‌ ಕಳ್ಳಿಯರು ಸೇಲ್ಸ್ ಮನ್ ಕಣ್ಣುತಪ್ಪಿಸಿ ಎಗರಿಸಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾವೇರಿಯಲ್ಲಿ ಬೈಕ್‌ ಕಳ್ಳರ ಬಂಧನ

ಹಾವೇರಿ ನಗರ ಪೊಲೀಸರು ಕಾರ್ಯಚರಣೆ ನಡೆಸಿ, ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. 11 ಬೈಕ್‌ಗಳನ್ನು ವಶಕ್ಕೆ ಪಡೆದು, 2 ಚೆಸ್ಸಿಗಳು, 3 ಇಂಜೀನಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 1,58,515 ರುಪಾಯಿ ಮೌಲ್ಯದ ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಮೈನುದೀನ್ ಮತ್ತು ಮಯುದ್ದೀನ್ ಕೋಳೂರು ಬಂಧಿತ ಆರೋಪಿಗಳಾಗಿದ್ದು, ಇವರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡುತ್ತಿದ್ದರು. ನಗರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version