ಚಿತ್ರದುರ್ಗ: ವ್ಯಕ್ತಿಯೊಬ್ಬನ ಮೇಲೆ ಟ್ರಕ್ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ (Road Accident) ಮೃತಪಟ್ಟಿದ್ದಾನೆ. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ಪೆಟ್ರೋಲ್ ಪಂಪ್ ಬಳಿ ಘಟನೆ ನಡೆದಿದೆ.
ಟ್ರಕ್ ಚಾಲಕ ರಾತ್ರಿ ಊಟ ಮಾಡುವ ಸಲುವಾಗಿ ಚಳ್ಳಕೆರೆ ಗೇಟ್ ಸಮೀಪದಲ್ಲೇ ಇರುವ ಹಿಂದೂಸ್ಥಾನ್ ಪೆಟ್ರೋಲ್ ಪಂಪ್ ಬಳಿ ವಾಹನ ನಿಲ್ಲಿಸಿ ಹೋಗಿದ್ದರು. ಇತ್ತ ಕುಡಿದ ಮತ್ತಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ನೇರ ಟ್ರಕ್ ಕೆಳಗೆ ಹೋಗಿ ಮಲಗಿದ್ದ. ವಾಪಸ್ ಟ್ರಕ್ ಬಳಿ ಬಂದಿದ್ದ ಚಾಲಕನಿಗೆ ಕತ್ತಲಿನಲ್ಲಿ ಆತ ಮಲಗಿದ್ದು ಕಂಡಿರಲಿಲ್ಲ.
ಟ್ರಕ್ ಚಲಾಯಿಸಲು ಹೋದಾಗ ಕೆಳಗೆ ಮಲಗಿದ್ದವನ ಮೇಲೆ ವಾಹನ ಹರಿದಿದೆ. ಆತನ ಚೀರಾಟ ಕೇಳಿ ಕೆಳಗೆ ಇಳಿದು ನೋಡಿದಾಗ ಟ್ರಕ್ ಕೆಳಗೆ ಮಲಗಿದ್ದು ಕಂಡಿದೆ.ಟ್ರಕ್ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಡಾವಣೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತನ ಗುರುತು ಪತ್ತೆಗಾಗಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Viral News: ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್ ಮಾಡಿದ ನಗರಾಭಿವೃದ್ಧಿ ಇಲಾಖೆ!
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 2 ಸಾವು
ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ (Road Divider) ಕಾರು ಡಿಕ್ಕಿಯಾದ (Car Accident) ಪರಿಣಾಮ ಇಬ್ಬರು ಸಾವಿಗೀಡಾಗಿ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ (Road Accident) ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ (Bangalore Mysore Highway) ಘಟಿಸಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯ ನಡುವಿನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಬಗಲಕುಂಟೆ ನಿವಾಸಿಗಳಾದ ಕಲಾ (40), ಪುತ್ರ ದರ್ಶನ್ (21) ಮೃತಪಟ್ಟವರು.
ಕಾರಿನ ಹಿಂಬದಿಯಲ್ಲಿದ್ದ ಪುತ್ರಿ ಮೇಘನ ಹಾಗೂ ಅಳಿಯ ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಿಮ್ಸ್ ಶವಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ