Site icon Vistara News

Theft Case : ಅಡ್ಡಗಟ್ಟಿದ ಪೊಲೀಸ್‌ ಜೀಪ್‌ ಮೇಲೆ ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ ಎಸ್ಕೇಪ್‌!

theft case

ಚಿತ್ರದುರ್ಗ: ಪೊಲೀಸರ ಮೇಲೆ ಕಳ್ಳರು (Theft Case) ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ವೊಂದು ಎಸ್ಕೇಪ್‌ ಆಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಪೊಲೀಸ್‌ ಜೀಪ್ ಮೇಲೆ ಕಲ್ಲು ತೂರಿ ಕಳ್ಳರು ಕಾಲ್ಕಿತ್ತಿದ್ದಾರೆ. ಪೊಲೀಸರು ಏರ್ ಫೈರ್ ಮಾಡಿದರೂ ಜಗ್ಗದೆ ತಪ್ಪಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಕಳ್ಳರನ್ನು ಹಿಡಿಯಲು ಪೊಲೀಸರು ಬೊಲೆರೋ ವಾಹನವನ್ನು ಅಡ್ಡ ಹಾಕಿದ್ದರು. ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಏಕಾಏಕಿ ಕಳ್ಳರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಮಾಡಿದ್ದಾರೆ.

ಇನ್ನೂ ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿದೆ. ಸುಮಾರು 7 ಮಂದಿ ಗ್ಯಾಂಗ್‌ ಆಂಧ್ರಪ್ರದೇಶದ ರಿಜಿಸ್ಟ್ರೇಷನ್‌ ಹೊಂದಿದ್ದ ಬೊಲೆರೋ ವಾಹನದಲ್ಲಿ ಬಂದಿದ್ದರು. ಇದನ್ನೂ ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು, ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಗಾಡಿ ನಿಲ್ಲಿಸದೇ ಖತರ್ನಾಕ್‌ ಕಳ್ಳರು, ಪೊಲೀಸರಿಗೆ ಕಲ್ಲು ತೂರಿದ್ದಾರೆ.

ದರೋಡೆಕೋರರು ಎಂಬ ಅನುಮಾನದಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ಬೊಸೇ ದೇವರಹಟ್ಟಿ, ಕೋಟೆ ನಗರ ಒಳ ಮಾರ್ಗದಲ್ಲಿ ಕುದಾಪುರ ಕಡೆ ಬರುತ್ತಿದ್ದ ಕಳ್ಳರಿಗೆ, ಪೊಲೀಸರು ಮನಮಯ್ಯನಹಟ್ಟಿ ಕುದಾಪುರ ಒಳ ಮಾರ್ಗದಲ್ಲಿ ಎದುರಾಗಿದ್ದರು. ನಾಯಕನಹಟ್ಟಿ ಠಾಣೆ ಪಿಎಸ್‌ಐ ಶಿವಕುಮಾರ್ ತಂಡ ಬುಲೇರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಸ್ಥಳಕ್ಕೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ನಡೆದ ಘಟನೆ ಕುರಿತು ಸ್ಟಲಿತರುಲ್ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸರ ಮೇಲೆ ಕಳ್ಳರ ದಾಳಿ ಸುದ್ದಿ ತಿಳಿದು ಸ್ಥಳೀಯರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಕೊಪ್ಪಳದಲ್ಲಿ ಇಸ್ಪೀಟು ಅಡ್ಡೆ ಮೇಲೆ ದಾಳಿ

ಕೊಪ್ಪಳ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದ ಬಳಿ ಇಸ್ಪೀಟು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. 42 ಬೈಕ್, 11 ಮೊಬೈಲ್ ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಹಣವನ್ನು ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ಎಸ್‌ಪಿ ಸೂಚನೆ ಮೇರೆಗೆ ಸಿಪಿಐ ಮಹಾಂತೇಶ ಸಜ್ಜನ್, ಶಿವರಾಜ್ ಇಂಗಳಗಿ ನೇತೃತ್ವದ ತಂಡ ದಾಳಿ ನಡೆಸಿದೆ. ಇಸ್ಪೀಟ್ ಆಡುತ್ತಿದ್ದ 8 ಜನರನ್ನು ವಶಕ್ಕೆ ಪಡೆಯಲಾಗಿದೆ. ಹೊರರಾಜ್ಯ, ಹೊರ ಜಿಲ್ಲೆಯಿಂದ ಕರೆಸಿ ಲಕ್ಷಾಂತರ ಹಣ ಜೂಜೂ ಕಟ್ಟತ್ತಿದ್ದರು. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರದಲ್ಲಿ ಹಣ ಕದ್ದ ಕಳ್ಳರ ಬಂಧನ

ವಿಜಯನಗರದ ಹೊಸಪೇಟೆ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರು ಖತರ್ನಾಕ್‌ ಕಳ್ಳರನ್ನು ಬಂಧಿಸಿದ್ದಾರೆ. ಜಾವೇದ್ ನದಾಫ್ ಎಂಬುವವರು ಭಾರತ್ ಫೈನಾನ್ಸ್ ಪ್ರೈ.ಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ವಿವಿಧ ಏರಿಯಾಗಳಲ್ಲಿ ಹಣವನ್ನು ಕಟ್ಟಿಸಿಕೊಂಡು ಬರುತ್ತಿದ್ದರು. ಹೀಗೆ ಕಳೆದ ಜೂ.12ರಂದು ಸಂಕ್ಲಾಪುರ, ಕಾರಿಗನೂರು, ಕೆಎಂಎಂಐ ಕ್ಯಾಂಪ್‌ನಲ್ಲಿ ಹಣ ಕಟ್ಟಿಸಿಕೊಂಡು ಬರುವಾಗ, ಕಾರಿಗನೂರು ಮತ್ತು ಕೆಎಂಎಂಐ ಕ್ಯಾಂಪ್ ಮಾರ್ಗ ಮಧ್ಯೆ ಮೂವರು ಚೋರರು ಅಡ್ಡಗಟ್ಟಿದ್ದರು.

ಬಳಿಕ ಫೈನಾನ್ಷಿಯರ್ ಬಳಿಯಿದ್ದ 1,65,411 ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿದ್ದರು. ಹಣ ಕಳೆದುಕೊಂಡಿದ್ದ ಜಾವೇದ್ ನದಾಫ್ ಅದೇ ದಿನ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಚರಣೆಗೆ ಇಳಿದಿದ್ದ ಖಾಕಿ ಟೀಂ, ಕೇವಲ ಒಂದೇ ವಾರದಲ್ಲಿ ಕಳ್ಳರನ್ನು ಪತ್ತೆ ಹಚ್ಚಿ, 83,500 ನಗದು, ಒಂದು ವಶಕ್ಕೆ ಪಡೆದಿದ್ದಾರೆ. ಮೂವರು ಕಳ್ಳರನ್ನು ಜೈಲಿಗಟ್ಟಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲೂ ಮನೆಗಳ್ಳರು ಅರೆಸ್ಟ್‌

ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.2 ಲಕ್ಷ ಮೌಲ್ಯದ ನಗದು, ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಹರಿಹರ ತಾಲೂಕಿನ ಶಂಷಿಪುರ ಗ್ರಾಮದ ಪ್ರದೀಪ, (23) , ಬಸವರಾಜ @ ಬಸ್ಯ(24) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ನಗದು,15 ಗ್ರಾಂ ತೂಕದ ಒಡವೆ, 110 ಗ್ರಾಂ ಬೆಳ್ಳಿಯ ಆಭರಣಗಳು ವಶಕ್ಕೆ ಪಡೆದಿದ್ದಾರೆ. ಹರಿಹರದ ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version