Site icon Vistara News

ಸಿಟಿ ಮಾರ್ಕೆಟ್ ರೌಡಿಯಿಂದ ಸಿಎಂ ಬಸವರಾಜ್‌ ಬೊಮ್ಮಾಯಿಗೆ ಫ್ಲೆಕ್ಸ್ ಸ್ವಾಗತ‌!

market vedi

ಬೆಂಗಳೂರು: ರಾಜಕೀಯ ನಾಯಕರು ಯಾವುದಾದರೂ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಅಲ್ಲಿ ಇರುವ ಸ್ಥಳೀಯ ಕಾರ್ಯಕರ್ತರು ಫ್ಲೆಕ್ಸ್‌ ಹಾಕಿ ಸ್ವಾಗತ ಕೋರುವುದು ಸಾಮಾನ್ಯ. ಆದರೆ ಸಿಟಿ ಮಾರ್ಕೆಟ್ ರೌಡಿಯೊಬ್ಬ ಸಿಎಂ ಬಸವರಾಜ್‌ ಬೊಮ್ಮಾಯಿ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್ ಈಗ ಸುದ್ದಿಗೆ ಕಾರಣವಾಗಿದೆ.

ಇದನ್ನೂ ಓದಿ | ಪ್ರವರ್ಗ 2ಎಗೆ ಪಂಚಮಸಾಲಿ ಸೇರ್ಪಡೆ; ಸಿಎಂ ಭೇಟಿಯಾದ ಶ್ರೀ ವಚನಾನಂದ ಸ್ವಾಮೀಜಿ

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಇಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿ ಹಾಗೂ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಧರ್ಮರಾಯಸ್ವಾಮಿ ವಾರ್ಡ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮನೆಗಳ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು. ಈ  ವೇಳೆ ವಾರ್ಡ್‌ ಸುತ್ತಮುತ್ತ ವೇಡಿ ಅಲಿಯಾಸ್‌ ʼಮಾರ್ಕೆಟ್ ವೇಡಿʼಯಿಂದ ಸ್ವಾಗತದ ಫ್ಲೆಕ್ಸ್‌ ಅಬ್ಬರ ಜೋರಾಗಿತ್ತು!

ಧರ್ಮರಾಯ ಸ್ವಾಮಿ ವಾರ್ಡ್‌ನಲ್ಲಿರುವ ಸಿಟಿ ಮಾರ್ಕೆಟ್, ತಿಗಳರ ಪಾಳ್ಯವು ಮಾರ್ಕೆಟ್ ವೇಡಿಯ ಅಡ್ಡವಾಗಿದೆ. ಈತ ಪ್ರತಿ ದಿನ ಬೀದಿಬದಿ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುತ್ತ ಬಂದಿದ್ದಾನೆ ಎಂಬ ಆರೋಪವಿದೆ. ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿ ಕ್ರಿಮಿನಲ್‌ಗಳು, ರೌಡಿಶೀಟರ್‌ಗಳೂ ಸ್ವಾಗತದ ಫ್ಲೆಕ್ಸ್ ಹಾಕುತ್ತಿದ್ದಾರಲ್ಲ ಎಂದು ಸಿಎಂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ದುರಂತ ಅಂತ್ಯ‌ ಕಂಡ ಲವ್‌ ಸ್ಟೋರಿ : ಫ್ಲೆಕ್ಸ್ ಹಾಕಿಸಿ ಆಕ್ರೋಶ ತೋರಿದ Friends

Exit mobile version